ಸಾಮಾನ್ಯವಾಗಿ, ಬಿಳಿ ಮೆಣಸು, ಅಡುಗೆಯಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಕೆಲವರು ಇದನ್ನು ದಖ್ನಿ ಮೆಣಸು ಹೆಸರಿನಿಂದಲೂ ಕರೆಯುತ್ತಾರೆ. ಬಿಳಿ ಮೆಣಸು ಕಣ್ಣಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತವೆ. ಇದರ ಜೊತೆಗೆ, ನಮ್ಮ ದೇಹದ ಅನೇಕ ಸಾಮಾನ್ಯ ಕಾಯಿಲೆಗಳಿಂದ ಪರಿಹಾರ ಪಡೆಯಲು ಸಹಕಾರಿಯಾಗಿದೆ. ಬಿಳಿ ಮೆಣಸಿನ ಪ್ರಯೋಜನಗಳೇನು ಎಂದು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಆಯುರ್ವೇದದಲ್ಲಿ ಬಿಳಿ ಮೆಣಸನ್ನು ಗಿಡಮೂಲಿಕೆ ಎಂದು ಪರಿಗಣಿಸಲಾಗುತ್ತದೆ. ಇದು ಫ್ಲೇವನಾಯ್ಡ್ಗಳು, ಜೀವಸತ್ವಗಳು, ಕಬ್ಬಿಣ ಮತ್ತು ದೇಹಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಯಿರುವವರಿಗೆ ಅದರಲ್ಲೂ ಮುಖ್ಯವಾಗಿ ಕಣ್ಣಿನ ಪೊರೆ ಸಮಸ್ಯೆ ಇರುವವರಿಗೆ ಇದು ಉಪಯುಕ್ತವೆಂದು ಪರಿಗಣಿಸಲಾಗಿದೆ.
ದಖ್ನಿ ಮೆಣಸಿನಕಾಯಿಗಳನ್ನು ಅಥವಾ ಬಿಳಿ ಮೆಣಸು ತಿನ್ನುವ ಮೂಲಕ ದೇಹದ ವಿಷಕಾರಿ ಅಂಶಗಳು ದೇಹದಿಂದ ಹೊರಬರುತ್ತವೆ. ಇದು ಹೃದಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದನ್ನು ಸೇವಿಸುವುದರಿಂದ, ಹೃದಯವು ಆರೋಗ್ಯಕರವಾಗಿ ಉಳಿಯುತ್ತದೆ ಮತ್ತು ಹೃದ್ರೋಗದ ಅಪಾಯ ಬಹಳಷ್ಟು ಕಡಿಮೆಯಾಗುತ್ತದೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಬಿಳಿ ಮೆಣಸು (White Pepper) ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ನೀವು ಇದನ್ನು ಅಡುಗೆಯಲ್ಲಿ ಬಳಸಬಹುದು ಅಥವಾ ಸಲಾಡ್ಗೆ ಸೇರಿಸಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಹೊಟ್ಟೆನೋವು, ಆಮ್ಲೀಯತೆ, ಮಲಬದ್ಧತೆ, ಹುಣ್ಣುಗಳಂತಹ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ.
ಬಿಳಿ ಮೆಣಸಿನ ಸೇವನೆಯು ತೂಕ ಇಳಿಸಿಕೊಳ್ಳಲು (Weight Loss) ಸಹ ಸಹಾಯ ಮಾಡುತ್ತದೆ. ಇದರ ಕಷಾಯವನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಕ್ಯಾಪ್ಸೈಸಿನ್ ಅನ್ನು ಹೊಂದಿರುತ್ತದೆ. ಅದು ದೇಹದಲ್ಲಿನ ಅಧಿಕ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ- Yoga For Weight Loss: ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಉತ್ತಮ ಯೋಗಾಸನಗಳಿವು
ಅಧ್ಯಯನದ ಪ್ರಕಾರ, ಕ್ಯಾಪ್ಸೈಸಿನ್ ಅಂಶವು ದೇಹದಲ್ಲಿನ ಕ್ಯಾನ್ಸರ್ (Cancer) ಕೋಶಗಳನ್ನು ಕೊಲ್ಲುತ್ತದೆ. ಈ ಬಿಳಿ ಮೆಣಸು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಗುಣಪಡಿಸಲು ಪರಿಣಾಮಕಾರಿಯಾಗಿದೆ. ಜೀವಸತ್ವಗಳು, ಕಬ್ಬಿಣ, ಆಂಟಿ-ಆಕ್ಸಿಡೆಂಟ್ಗಳು ಮುಂತಾದ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಆದ್ದರಿಂದ, ಇದನ್ನು ಪ್ರತಿದಿನ ಸೇವಿಸುವುದರಿಂದ, ಇದು ದೇಹದಲ್ಲಿನ ಕ್ಯಾನ್ಸರ್ ಕೋಶಗಳ ರಚನೆಯನ್ನು ನಿಯಂತ್ರಿಸುತ್ತದೆ.
ದಖ್ನಿ ಮೆಣಸಿನಕಾಯಿ ಅಥವಾ ಬಿಳಿ ಮೆಣಸಿನಲ್ಲಿರುವ ಪೋಷಕಾಂಶಗಳು ದೇಹದ ನೋವಿಗೆ ಪರಿಹಾರವನ್ನು ನೀಡುತ್ತವೆ. ಇದು ದೇಹದಲ್ಲಿನ ನೋವಿನಿಂದ ಪರಿಹಾರ ನೀಡುತ್ತದೆ ಮತ್ತು ಇದನ್ನು ಪ್ರತಿದಿನ ತಿನ್ನುವುದರಿಂದ ಸ್ನಾಯುಗಳಲ್ಲಿನ ಊತ ಮತ್ತು ಕೀಲು ನೋವು ಕಡಿಮೆಯಾಗುತ್ತದೆ. ಇದನ್ನೂ ಓದಿ- Benefits Of Jeera: ಈ ಕಾರಣಗಳಿಗಾಗಿ ಆಹಾರದಲ್ಲಿ ಸೇವಿಸಲೇ ಬೇಕು ಜೀರಿಗೆ
ಇದರಲ್ಲಿ ಫ್ಲೇವನಾಯ್ಡ್ಗಳು ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು (Blood Pressure) ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನಿಮ್ಮ ದೈನಂದಿನ ಆಹಾರದಲ್ಲಿ ಬಿಳಿ ಮೆಣಸು ಉತ್ತಮ ಆಯ್ಕೆಯಾಗಿದೆ.