ಕಾಮನ್ ವೆಲ್ತ್ ಕ್ರೀಡಾಕೂಟ: ಕುಸ್ತಿಯಲ್ಲಿ ರಾಹುಲ್ ಅವ್ರೆ ಗೆ ಒಲಿದ ಚಿನ್ನದ ಪದಕ

    

Last Updated : Apr 12, 2018, 02:07 PM IST
ಕಾಮನ್ ವೆಲ್ತ್ ಕ್ರೀಡಾಕೂಟ: ಕುಸ್ತಿಯಲ್ಲಿ ರಾಹುಲ್ ಅವ್ರೆ ಗೆ ಒಲಿದ ಚಿನ್ನದ ಪದಕ  title=

ನವದೆಹಲಿ: ಆಷ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ  ಕಾಮನ್ ವೆಲ್ತ್  ಕ್ರೀಡಾಕೂಟದಲ್ಲಿ ರಾಹುಲ್ ಅವ್ರೆ  57 ಕೆಜಿ ಫ್ರೀ ಸ್ಟೈಲ್  ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕವನ್ನು ಕೊರಳಿಗೆ ಎರಿಸಿಕೊಂಡಿದ್ದಾರೆ,ಆಮೂಲಕ ಭಾರತದ ಚಿನ್ನದ ಪದಕಗಳ ಸಂಖ್ಯೆ 13 ಕ್ಕೆ ಏರಿದೆ.

ಪಂದ್ಯದ ಪ್ರಾರಂಭದಿಂದಲೂ ಪ್ರಾಬಲ್ಯ ಸಾಧಿಸಿದ ರಾಹುಲ್  15-7 ರ ಅಂತರದಿಂದ  ಕೆನಡಾದ ಸ್ಟೀವ್ ತಕಾಹಸಿಯವರನ್ನು ಸೋಲಿಸುವುದರ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು, ಇನ್ನೊಂದೆಡೆಗೆ ಮಹಿಳೆಯರ  53 ಕೆ ಜಿ ವಿಭಾಗದಲ್ಲಿ  ಬಬಿತಾಕುಮಾರಿ ಕೆನಡಾದ ಡಯಾನಾ ವೈಕರ್ ವಿರುದ್ದ 2-5 ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿ ಪದಕ್ಕೆ ತೃಪ್ತಿಪಟ್ಟರು. 

ಶೂಟಿಂಗ್ ನಲ್ಲಿ ತೇಜಸ್ವಿನಿ ಸಾವಂತ್  ಮಹಿಳೆ ವಿಭಾಗದ 50 ಮೀ ರೈಫಲ್ ನಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡರು. 

Trending News