Big B Amitabh Bachchan ನಿವಾಸ, Mumbai Railway Stationನಲ್ಲಿ ಬಾಂಬ್ ! ಮುಂದೇನಾಯ್ತು?

Bomb Threat Call - ವಾಣಿಜ್ಯ ನಗರಿ ಮುಂಬೈ ಪೊಲೀಸರಿಗೆ ನಗರದ ಒಟ್ಟು ನಾಲ್ಕು ಸ್ಥಳಗಳಲ್ಲಿ ಬಾಂಬ್ ಇರುವ ಕುರಿತು ಕರೆ  (Prank Call) ಬಂದ ಹಿನ್ನೆಲೆ ಎಲ್ಲಾ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆದರೆ, ಇದುವರೆಗೆ ಆ ಸ್ಥಳಗಳಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎನ್ನಲಾಗಿದೆ.

Written by - Nitin Tabib | Last Updated : Aug 7, 2021, 01:27 PM IST
  • ಮುಂಬೈ ಪೊಲೀಸರಿಗೆ ಬೆದರಿಕೆಯ ಕರೆ.
  • ಹಲವು ಸ್ಥಳಗಳಲ್ಲಿ ಬಾಂಬ್ ಇರುವ ಸುದ್ದಿ ಸುಳ್ಳು ಸಾಬೀತಾಗಿದೆ.
  • ಕರೆ ಮಾಡಿರುವ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು.
Big B Amitabh Bachchan ನಿವಾಸ, Mumbai Railway Stationನಲ್ಲಿ ಬಾಂಬ್ ! ಮುಂದೇನಾಯ್ತು? title=
Bomb Threat Call (File Photo)

ಮುಂಬೈ:  Bomb Threat Call - ನಗರದ ಹೈಟೆಕ್ ಪೊಲೀಸರು (Mumbai Police) ಸುಳ್ಳು ಮಾಹಿತಿ ನೀಡಿ ಬೆದರಿಕೆಯೋಡ್ಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಳ್ಳು ಕರೆ (Hoax Call) ಮಾಡಿದ ಈ ಆರೋಪಿಗಳನ್ನು ಪೊಲೀಸರು ನಗರದ ಕಲ್ಯಾಣ್ ಗೆ ಹೊಂದಿಕೊಂಡಂತೆ ಇರುವ ಪ್ರದೇಶದಿಂದ ಬಂಧಿಸಿದ್ದಾರೆ. ಸಾರಾಯಿ ಕುರಿದ ಮತ್ತಿನಲ್ಲಿ ಈ ಇಬ್ಬರು ಆರೋಪಿಗಳು ಸುಳ್ಳು ಬೆದರಿಕೆಯ ಕರೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಫೋನ್ ಮೂಲಕ ಬೆದರಿಕೆಯೊಡ್ಡಲಾಗಿತ್ತು
ಪೊಲೀಸ್ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈ ಇಬ್ಬರು ಆರೋಪಿಗಳಲ್ಲಿ ಒಬ್ಬ ಪೊಲೀಸರಿಗೆ ಕರೆ ಮಾಡುವ ಮೂಲಕ CST, ಭಾಯಿಖಲಾ, ದಾದರ್ ಹಾಗೂ ಖ್ಯಾತ ಬಾಲಿವುಡ್ (Bollywood) ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ನಿವಾಸದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ತಕ್ಷಣವೇ ಕಾರ್ಯತತ್ಪರವಾದ CST-GRP ಹಾಗೂ ಬಾಂಬ್ ಸ್ಕ್ವಾಡ್, ಅಮಿತಾಬ್ ಬಚ್ಚನ್ ಅವರ ನಾಲ್ಕು ಬಂಗಲೆಗಳ ಅಕ್ಕಪಕ್ಕದಲ್ಲಿ ಬಾಂಬ್ ಗಾಗಿ ಶೋಧಕಾರ್ಯಚರಣೆ ನಡೆಸಿದ್ದಾರೆ.

ಇದನ್ನೂ ಓದಿ- Sunny Leone: ಸನ್ನಿ ಲಿಯೋನ್ ಅತ್ಯಂತ ಇಷ್ಟಪಟ್ಟಿರುವ ಸಿನಿಮಾ ಯಾವುದು ಗೊತ್ತಾ..?

ಈ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿದೆ
ಈ ಸಂದರ್ಭದಲ್ಲಿ ಮುಂಬೈ ಪೊಲೀಸರು ಮನೆಯಲ್ಲಿ ಮಲಗಿದ್ದ ಅಮಿತಾಬ್ ಬಚ್ಚನ್ ಅವರಿಗೆ ಈ ಮಾಹಿತಿಯನ್ನು ನೀಡುವ ಮೂಲಕ ಕಿರುಕುಳ ನೀಡುವುದು ಸರಿಯಲ್ಲ ಎಂದು ಪರಿಗಣಿಸಿದ್ದಾರೆ. ಆದ್ದರಿಂದ, ಅವರಿಗೆ ಯಾವುದೇ ರೀತಿಯ ಮಾಹಿತಿ ನೀಡದೆಯೇ BDDS ತಂಡ (ಬಾಂಬ್ ಪತ್ತೆ ಮತ್ತು ಡಿಫ್ಯೂಸಲ್ ಸ್ಕ್ವಾಡ್) ಸಂಪೂರ್ಣ ತನಿಖೆ ನಡೆಸಿದೆ. ಆದರೆ ಅವರ ನಿವಾಸದಲ್ಲಿ ಅಥವಾ ಬಳಿ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಬಾಂಬ್ ಪತ್ತೆಯಾಗಿಲ್ಲ. ಪ್ರಸ್ತುತ, ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಪೊಲೀಸ್ ಭದ್ರತಾ ಪಡೆಯನ್ನು ಅಮಿತಾಬ್ ಬಚ್ಚನ್ ಮನೆಯ ಹೊರಗೆ ನಿಯೋಜಿಸಲಾಗಿದೆ.

ಇದನ್ನೂ ಓದಿ-Videos : ಡ್ಯಾನ್ಸರ್ ಸಪ್ನಾ ಚೌಧರಿಗೆ 'ಠಕ್ಕರ್' ನೀಡಲು ಬಂದ ಹರಿಯಾಣವಿ ಡ್ಯಾನ್ಸರ್!

ಈ ಮೊದಲು ಕೂಡ ಪೊಲೀಸರಿಗೆ ಈ ರೀತಿಯ ಬೆದರಿಕೆಯ ಕರೆಗಳನ್ನು (Hoax Calling) ಮಾಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಅಮಿತಾಬ್ ಬಚ್ಚನ್ ಅವರ ನಿವಾಸದ ಕುರಿತು ಕೂಡ ಈ ರೀತಿಯ ಸುಳ್ಳು ಮಾಹಿತಿಯನ್ನು ಪಸರಿಸಲಾಗಿದೆ. 

ಇದನ್ನೂ ಓದಿ-ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ DS5 ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News