ಮಳೆಗಾಲದಲ್ಲಿ ನಿಮ್ಮ ಆಹಾರದಲ್ಲಿ ಅವಶ್ಯವಾಗಿರಲಿ ಈ ವಸ್ತುಗಳು

Monsoon Sneezing Home Remedies:  ಮಳೆಗಾಲದಲ್ಲಿ ನೆಗಡಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆ. ಆದರೆ ನೆಗಡಿಗಿಂತ ಸೀನಿನ ಸಮಸ್ಯೆ ಹೆಚ್ಚು ಕಿರಿ ಕಿರಿ ಉಂಟು ಮಾಡುತ್ತದೆ.   ಕೆಲವರಂತೂ ಈ  ಋತುವಿನಲ್ಲಿ   ನಿರಂತರವಾಗಿ ಸೀನುತ್ತಲೇ ಇರುತ್ತಾರೆ. 

Written by - Ranjitha R K | Last Updated : Aug 9, 2021, 08:25 PM IST
  • ನೆಲ್ಲಿಕಾಯಿಯನ್ನು ವಿಟಮಿನ್ ಸಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ.
  • ಶುಂಠಿಯು ಪದೇಪದೇ ಸೀನುವ ಸಮಸ್ಯೆಗೆ ಪರಿಹಾರ ನೀಡುತ್ತದೆ.
  • ಸೊಂಫು ಕೂಡಾ ಈ ಸಮಸ್ಯೆಗೆ ಉತ್ತಮ ಪರಿಹಾರ
ಮಳೆಗಾಲದಲ್ಲಿ ನಿಮ್ಮ ಆಹಾರದಲ್ಲಿ ಅವಶ್ಯವಾಗಿರಲಿ ಈ ವಸ್ತುಗಳು  title=
ಶುಂಠಿಯು ಪದೇಪದೇ ಸೀನುವ ಸಮಸ್ಯೆಗೆ ಪರಿಹಾರ ನೀಡುತ್ತದೆ. (file photo)

ನವದೆಹಲಿ:  Monsoon Sneezing Home Remedies:  ಮಳೆಗಾಲದಲ್ಲಿ ನೆಗಡಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆ. ಆದರೆ ನೆಗಡಿಗಿಂತ ಸೀನಿನ ಸಮಸ್ಯೆ ಹೆಚ್ಚು ಕಿರಿ ಕಿರಿ ಉಂಟು ಮಾಡುತ್ತದೆ.   ಕೆಲವರಂತೂ ಈ  ಋತುವಿನಲ್ಲಿ   ನಿರಂತರವಾಗಿ ಸೀನುತ್ತಲೇ ಇರುತ್ತಾರೆ. ಕೆಲವರಿಗೆ ಅಲರ್ಜಿಯಿಂದ ಈ ಸಮಸ್ಯೆ ಎದುರಾಗುತ್ತದೆ.  ಯಾವುದಕ್ಕೆ ನಮ್ಮ ಶರೀರವು  ಅತಿಯಾಗಿ ಪ್ರತಿಕ್ರಿಯಿಸುತ್ತಿದೆಯೋ, ಅದನ್ನು ಅಲರ್ಜಿ ಎಂದು ಕರೆಯಲಾಗುತ್ತದೆ. ಯಾವುದೇ ಆಹಾರ ಪದಾರ್ಥ, ಸಾಕು ಪ್ರಾಣಿಗಳು, ವಾತಾವರಣದಲ್ಲಿನ ಬದಲಾವಣೆ, ಯಾವುದೇ ಹೂವು-ಹಣ್ಣು-ತರಕಾರಿ, ಧೂಳು, ಹೊಗೆ, ಔಷಧ ಇವುಗಳಿಂದ ಯಾವುದರಿಂದಲಾದರೂ ಅಲರ್ಜಿ (Allergy) ಉಂಟಾಗಬಹುದು. ಆದರೆ ಕೆಲವೊಮ್ಮೆ ಈ ಸಮಸ್ಯೆಯು ಬಹಳಷ್ಟು ತೊಂದರೆಗೆ ಕಾರಣವಾಗುತ್ತದೆ. ಆದರೆ ಇವುಗಳನ್ನು ಕೆಲವು ಮನೆಮದ್ದುಗಳಿಂದ ಸರಿಪಡಿಸಬಹುದು. 

ನೆಲ್ಲಿಕಾಯಿ : ನೆಲ್ಲಿಕಾಯಿಯನ್ನು (gooseberry) ವಿಟಮಿನ್ ಸಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು ಅದು ರೋಗನಿರೋಧಕ ಶಕ್ತಿಯನ್ನು (Immunity) ಬಲಪಡಿಸುತ್ತದೆ. ಇದು ಅತಿಯಾದ ಸೀನುವಿಕೆಯ ಸಮಸ್ಯೆಯನ್ನು ಕಡಿಮೆ ಮಾದುತ್ತದೆ. 

ಇದನ್ನೂ ಓದಿ : Foods to stop Hair Fall: ಕೂದಲು ಉದುರುವುದನ್ನು ನಿಲ್ಲಿಸಲು ನಿತ್ಯ ಈ ಸಮಯದಲ್ಲಿ 1 ಟೀಸ್ಪೂನ್ ಬೆಣ್ಣೆ ಸೇವಿಸಿ

2. ದೊಡ್ಡ ಏಲಕ್ಕಿ: ನಮ್ಮ ಅಡುಗೆಮನೆಯಲ್ಲಿ ಬಳಸುವ ದೊಡ್ಡ ಏಲಕ್ಕಿ (cardamom) ಆಹಾರದ ರುಚಿಯನ್ನು ಮಾತ್ರ ಹೆಚ್ಚಿಸುವುದಿಲ್ಲ. , ಅದನ್ನು ಜಗಿದು ತಿನ್ನುವುದರಿಂದ ಸೀನುವಿಕೆಯ ಸಮಸ್ಯೆ ಕಡಿಮೆಯಾಗುತ್ತದೆ. 

3. ಶುಂಠಿ: ಪದೇ ಪದೇ ಸೀನುವ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, 2-3 ಇಂಚಿನಷ್ಟು ಶುಂಠಿಯ (ginger) ತುಂಡು ತೆಗೆದುಕೊಂಡು, ಅದರ ರಸವನ್ನು ಹೊರತೆಗೆಯಿರಿ ಅದಕ್ಕೆ ಅರ್ಧ ಚಮಚ ಬೆಲ್ಲ (jaggery) ಸೇರಿಸಿ. ಇದನ್ನು ದಿನಕ್ಕೆ 2-3 ಬಾರಿ ಸೇವಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ. 

4. ಸೊಂಫು : ಸೊಂಫುವನ್ನು (fennel seeds) ಕೂಡಾ, ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಸೊಂಫು ಬೀಜಗಳು ಸೀನುವಿಕೆಯನ್ನು ನಿಲ್ಲಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿವೆ. ಶುಂಠಿಯೊಂದಿಗೆ ಹುರಿದ ಸೊಂಫು ಅನ್ನು ತಿನ್ನುವುದರಿಂದ ಸೀನುವ ಸಮಸ್ಯೆಯಿಂದ  ಪರಿಹಾರ ಸಿಗುತ್ತದೆ. 

ಇದನ್ನೂ ಓದಿ : Weight Loss With Ajwain: ಈ ಅದ್ಭುತ ಪಾನೀಯ ಸೇವಿಸಿ ಕೆಲವೇ ವಾರಗಳಲ್ಲಿ ತೂಕ ಇಳಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News