ನವದೆಹಲಿ: ತಾಲಿಬಾನ್ ಕಮಾಂಡರ್ ಮತ್ತು ಹಕ್ಕಾನಿ ನೆಟ್ ವರ್ಕ್ ಭಯೋತ್ಪಾದಕ ಗುಂಪಿನ ಹಿರಿಯ ನಾಯಕ ಅನಸ್ ಹಕ್ಕಾನಿ, ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈಗ ತಾಲಿಬಾನ್ (Taliban) ಸರ್ಕಾರವನ್ನು ಸ್ಥಾಪಿಸಲು ನಡೆಸಿದ ಪ್ರಯತ್ನದ ನಡುವೆ ಈ ಭೇಟಿ ಬಂದಿರುವುದು ಮಹತ್ವ ಪಡೆದಿದೆ.ಈ ಸಭೆಯಲ್ಲಿ ಹಿಂದಿನ ಸರ್ಕಾರದ ಮುಖ್ಯ ಶಾಂತಿ ಪ್ರತಿನಿಧಿ ಅಬ್ದುಲ್ಲಾ ಅಬ್ದುಲ್ಲಾ ಜೊತೆಗಿದ್ದರು ಎಂದು ಹೆಸರು ಹೇಳಲು ನಿರಾಕರಿಸಿದ ತಾಲಿಬಾನ್ ಅಧಿಕಾರಿ ಹೇಳಿದರು. ಅವರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಕಾಬೂಲ್ ವಶಕ್ಕೆ ಪಡೆದ ನಂತರ ಕಾಶ್ಮೀರ ಕುರಿತಂತೆ ಹೇಳಿಕೆ ನೀಡಿದ ತಾಲಿಬಾನ್
ರಾಜಧಾನಿ ಕಾಬೂಲ್ ಅನ್ನು ಭಾನುವಾರ ವಶಪಡಿಸಿಕೊಂಡ ಹಕ್ಕಾನಿ ನೆಟ್ವರ್ಕ್ ತಾಲಿಬಾನ್ ನ ಒಂದು ಪ್ರಮುಖ ಬಣವಾಗಿದೆ.ಪಾಕಿಸ್ತಾನದ ಗಡಿಯನ್ನು ಆಧರಿಸಿದ ಈ ಜಾಲವು ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಕೆಲವು ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳ ಆರೋಪವನ್ನು ಹೊರಿಸಿತು.
ಇದನ್ನೂ ಓದಿ : Indian Idol 12 Winner: ಪವನ್ ದೀಪ್ ರಾಜನ್ ಮುಡಿಗೆ ಇಂಡಿಯನ್ ಐಡಲ್ 12 ಪ್ರಶಸ್ತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ