ರಾಯಲ್ ಎನ್ಫೀಲ್ಡ್ ತನ್ನ ಹೊಸ ಕ್ಲಾಸಿಕ್ 350 ಬೈಕ್(Royal Enfield Classic 350) ಅನ್ನು ಆಗಸ್ಟ್ 27ರಂದು ಬಿಡುಗಡೆ ಮಾಡಲು ಸಜ್ಜಾಗಿದೆ.
ಯುವಕರಿಂದ ಹಿಡಿದು ಎಲ್ಲಾ ವಯೋಮಾನದವರನ್ನು ಮೋಡಿ ಮಾಡಿರುವ ಬೈಕ್ಗಳ ಪಟ್ಟಿಯಲ್ಲಿ ರಾಯಲ್ ಎನ್ಫೀಲ್ಡ್ ಗೆ ಮೊದಲ ಸ್ಥಾನ. ಲಕ್ಷಕ್ಕೂ ಅಧಿಕ ಬೆಲೆ ಇರುವುದರಿಂದ ರಾಯಲ್ ಎನ್ಫೀಲ್ಡ್ ಎಲ್ಲರ ಕೈಗೆಟುಕುವುದಿಲ್ಲ. ಇದೀಗ ರಾಯಲ್ ಎನ್ಫೀಲ್ಡ್ ತನ್ನ ಹೊಸ ಕ್ಲಾಸಿಕ್ 350 ಬೈಕ್(Royal Enfield Classic 350) ಅನ್ನು ಆಗಸ್ಟ್ 27 ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಬೈಕ್ ನಲ್ಲಿ ಎಂಜಿನ್ ಸೇರಿದಂತೆ ಅಪ್ಗ್ರೇಡ್ ಹಾರ್ಡ್ವೇರ್ ಇರಲಿದೆ. ಕ್ಲಾಸಿಕ್ 350ರ ಹಳೆಯ ಆವೃತ್ತಿಯ ಬೈಕ್ ಹೆಚ್ಚು ಮಾರಾಟವಾದ ಬೈಕ್ಗಳಲ್ಲಿ ಒಂದಾಗಿದೆ. ನೂತನ ಬೈಕ್ ನ ಬೆಲೆ, ವೈಶಿಷ್ಟ್ಯದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಹೊಸ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ಮೆಟಿಯೋರ್ 350(Meteor 350)ನಿಂದ ಬಳಸಿಕೊಂಡಿರುವ 349cc DOHC ಎಂಜಿನ್ ಅನ್ನು ಅಪ್ಗ್ರೇಡ್ ಮಾಡಿದ್ದು, ಇದು 20PS ಗರಿಷ್ಠ ಶಕ್ತಿ ಮತ್ತು 27Nm ಟಾರ್ಕ್ ಅನ್ನು ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಮೆಟಿಯೋರ್ ನಿಂದ ಕ್ಲಾಸಿಕ್ ಬೈಕ್ ಜೆ-ಪ್ಲಾಟ್ಫಾರ್ಮ್ ಅನ್ನು ಬಳಸುತ್ತದೆ.
ಇತರ ವೈಶಿಷ್ಟ್ಯಗಳ ವಿಷಯದಲ್ಲಿ ಹೊಸ ಕ್ಲಾಸಿಕ್ 350 ಟ್ರಿಪ್ಪರ್ ಟರ್ನ್-ಬೈ-ಟರ್ನ್(Turn-by-Turn) ನ್ಯಾವಿಗೇಷನ್ ಮತ್ತು ರೈಡರ್ಗಳು ತಮ್ಮ ಸ್ಮಾರ್ಟ್ಫೋನ್ನೊಂದಿಗೆ ಬ್ಲೂಟೂತ್ ಸಂಪರ್ಕವನ್ನು ಬಳಸಿ ನ್ಯಾವಿಗೇಟ್ ಮಾಡಲು ಸಣ್ಣ ಸ್ಕ್ರೀನ್(small screen) ವ್ಯವಸ್ಥೆ ಒದಗಿಸಲಾಗಿದೆ.
ಕ್ಲಾಸಿಕ್ 350ನ ಹಳೆಯ ಮಾದರಿಯ ಬೈಕ್ ನ ಬೆಲೆ ಇತ್ತೀಚೆಗೆ ಏರಿಕೆಯಾಗಿದೆ. ಸದ್ಯ ಅದರ ಬೆಲೆ ಮಾರುಕಟ್ಟೆಯಲ್ಲಿ 2 ಲಕ್ಷ ರೂ. ಇದೆ.
ಹೊಸ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಆರಂಭಿಕ ಬೆಲೆ ಸುಮಾರು 1.85 ಲಕ್ಷ ರೂ. ಎಂದು ಹೇಳಲಾಗುತ್ತಿದೆ.
ರಾಯಲ್ ಎನ್ಫೀಲ್ಡ್ ಬೈಕ್ ಗಳಲ್ಲಿಯೇ ಕ್ಲಾಸಿಕ್ 350 ಮಾದರಿ ಕಡಿಮೆ ಬೆಲೆಗೆ ಲಭ್ಯವಿರುವ ಬೈಕ್ ಎಂದು ಹೇಳಲಾಗುತ್ತಿದೆ. ಆದರೆ ಈ ಬೈಕ್ ನಲ್ಲಿ ಕಿಕ್-ಸ್ಟಾರ್ಟರ್ ಸೌಲಭ್ಯ ಇರುವುದಿಲ್ಲ ಅಂತಾ ತಿಳಿದುಬಂದಿದೆ.