Hindu Dharm: ಯಾವ ದೇವ-ದೇವತೆಗೆ ಯಾವ ಹೂವನ್ನು ಅರ್ಪಿಸಬೇಕು ತಿಳಿಯಿರಿ

                                

ಹಿಂದೂ ಧರ್ಮದಲ್ಲಿ, ಪ್ರತಿ ಶುಭ ಕೆಲಸ ಮತ್ತು ಪೂಜೆಯಲ್ಲಿ ಹೂವುಗಳನ್ನು ಬಳಸಲಾಗುತ್ತದೆ. ಈ ಹೂವುಗಳು ಪ್ರಕೃತಿಯ ಸುಂದರ ಉಡುಗೊರೆಯಾಗಿದ್ದು  ದೇವ-ದೇವತೆಗಳಿಗೆ ಬಹಳ ಪ್ರಿಯವಾಗಿವೆ. ಪ್ರತಿ ದೇವ-ದೇವತೆಗೂ ನೆಚ್ಚಿನ ಹೂವುಗಳಿವೆ. ನಿಮ್ಮ ಇಷ್ಟ ದೇವರನ್ನು ಪೂಜಿಸುವಾಗ ಅವರಿಗೆ ಇಷ್ಟವಾಗುವ ಹೂವನ್ನು ಅರ್ಪಿಸುವುದರಿಂದ, ದೇವ-ದೇವತೆಯರು ಬಹಳ ಬೇಗ ಸಂತೋಷಗೊಂಡು ಭಕ್ತರ ಬೇಡಿಕೆಗೆ ಕಿವಿಗೊಡುತ್ತಾರೆ ಎಂದು ಹೇಳಲಾಗುತ್ತದೆ. ಯಾವ ದೇವರಿಗೆ ಯಾವ ಹೂವುಗಳನ್ನು ಅರ್ಪಿಸಬೇಕು ಎಂದು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /8

ಧಾತುರ, ಹರ್ಸಿಂಗರ, ನಾಗಕೇಸರ ಬಿಳಿ ಹೂವುಗಳು, ಒಣಗಿದ ಕಮಲ, ಗಟ್ಟೆ, ಕನೇರ್, ಕುಸುಮ್, ಆಕ್, ಕುಶ್ ಇತ್ಯಾದಿ ಹೂವುಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಭಕ್ತರು ಪ್ರೀತಿಯಿಂದ ಬಿಲ್ವಪತ್ರೆಯನ್ನು ಅರ್ಪಿಸಿದರೆ ಶಿವ ಬೇಗ ಒಲಿಯುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ನೆನಪಿಡಿ ಶಿವನಿಗೆ ಎಂದಿಗೂ ತುಳಸಿಯನ್ನು ಅರ್ಪಿಸಬಾರದು.

2 /8

ಕಮಲ, ಮೌಲ್ಸಿರಿ, ಜೂಹಿ, ಕದಂಬ, ಕೇವಾಡ, ಮಲ್ಲಿಗೆ, ಅಶೋಕ್, ಮಾಲ್ತಿ, ವಸಂತಿ, ಚಂಪಾ, ವೈಜಯಂತಿ ಹೂವುಗಳು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದವು. ಹೂವುಗಳನ್ನು ಹೊರತುಪಡಿಸಿ, ಭಗವಾನ್ ವಿಷ್ಣುವಿಗೆ ತುಳಸಿ ದಳ ಎಂದರೆ ಅಚ್ಚುಮೆಚ್ಚು.

3 /8

ಕಮಲವು (Lotus) ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ (Lord Lakshmi) ಅತ್ಯಂತ ಪ್ರೀತಿಯ ಹೂವಾಗಿದೆ. ಇದಲ್ಲದೇ, ಲಕ್ಷ್ಮೀ ದೇವಿಗೆ ಕೆಂಪು ಹೂವುಗಳು, ಕೆಂಪು ಗುಲಾಬಿಗಳು ಕೂಡ ಇಷ್ಟ.

4 /8

ವಿಘ್ನ ವಿನಾಶಕ ಗಣಪತಿಗೆ ಎಕ್ಕದ ಹೂವು ಎಂದರೆ ಅತ್ಯಂತ ಪ್ರಿಯ. ಇದಲ್ಲದೆ ಬಹುತೇಕ ಎಲ್ಲಾ ಹೂವುಗಳನ್ನು ಗಣಪನ ಪೂಜೆಯಲ್ಲಿ ಬಳಸಬಹುದು. ಆದರೆ ಶಿವನಂತೆ ಗಣಪತಿಗೂ ಕೂಡ ಎಂದಿಗೂ ತುಳಸಿ ದಳವನ್ನು ನೀಡಬಾರದು. ಇದನ್ನೂ ಓದಿ- Astrology: ಮುಂದಿನ 4 ತಿಂಗಳು ಈ ರಾಶಿಯವರ ಮೇಲೆ ಲಕ್ಷ್ಮಿಯ ಕೃಪಾಕಟಾಕ್ಷ

5 /8

ಸೂರ್ಯ ದೇವರನ್ನು ಪೂಜಿಸುವಾಗ, ಕನೇರ್, ಕಮಲ್, ಚಂಪಾ, ಪಲಾಶ್, ಆಕ್, ಅಶೋಕ್ ಮೊದಲಾದ ಹೂವುಗಳನ್ನು ಅವನಿಗೆ ಅರ್ಪಿಸಲಾಗುತ್ತದೆ.

6 /8

ಕುಮುದ್, ಕಾರವಾರಿ, ಚಾಣಕ್, ಮಾಲ್ತಿ, ಪಲಾಶ್ ಮತ್ತು ವನಮಾಲಾ ಹೂವುಗಳನ್ನು ಶ್ರೀಕೃಷ್ಣನಿಗೆ (Sri Krishna) ಅರ್ಪಿಸಲಾಗುತ್ತದೆ. ಇದನ್ನೂ ಓದಿ- Janmasthami 2021: ಶ್ರೀ ಕೃಷ್ಣ ಜನ್ಮಾಷ್ಟಮಿಯ ಸರಿಯಾದ ಪೂಜಾ ವಿಧಿ ಹಾಗೂ ಶುಭ ಮುಹೂರ್ತ

7 /8

ಸಿಂಹದ ಮೇಲೆ ಸವಾರಿ ಮಾಡುವ ದುರ್ಗಾದೇವಿಗೆ ಕೆಂಪು ಗುಲಾಬಿಗಳು ಅಥವಾ ಕೆಂಪು ಹೂವುಗಳನ್ನು ಅರ್ಪಿಸಬೇಕು.

8 /8

ವಿದ್ಯಾ ದೇವತೆಯಾದ ಸರಸ್ವತಿ ದೇವಿಗೆ ಬಿಳಿ ಅಥವಾ ಹಳದಿ ಹೂವುಗಳನ್ನು ಅರ್ಪಿಸಲಾಗುವುದು. ವಸಂತ ಪಂಚಮಿಯ ಪೂಜೆಯ ಸಮಯದಲ್ಲಿ, ದೇವಿಯ ಅಲಂಕಾರಕ್ಕಾಗಿ ಹಳದಿ ಬಟ್ಟೆಗಳನ್ನು ಬಳಸಲಾಗುತ್ತದೆ. (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)