ಈ ಸುಲಭ ವಿಧಾನದ ಮೂಲಕ Ration Card ನಲ್ಲಿ ಹೊಸ ಸದಸ್ಯರ ಹೆಸರು ಸೇರಿಸಬಹುದು

ಪಡಿತರ ಚೀಟಿಯಲ್ಲಿ ಮಗುವಿನ ಹೆಸರನ್ನು ಸೇರಿಸಬೇಕಾದರೆ, ಮನೆಯ ಮುಖ್ಯಸ್ಥರ ಪಡಿತರ ಚೀಟಿ (ಫೋಟೋಕಾಪಿ ಮತ್ತು ಮೂಲ ಎರಡೂ), ಮಗುವಿನ ಜನನ ಪ್ರಮಾಣಪತ್ರ ಮತ್ತು ಇಬ್ಬರೂ ಪೋಷಕರ ಆಧಾರ್ ಕಾರ್ಡ್ ಅಗತ್ಯವಿದೆ.   

Written by - Ranjitha R K | Last Updated : Sep 6, 2021, 04:50 PM IST
  • ಪಡಿತರ ಚೀಟಿಯಲ್ಲಿ ಈ ರೀತಿ ಕುಟುಂಬದ ಸದಸ್ಯರ ಹೆಸರನ್ನು ಸೇರಿಸಿ
  • ಉಚಿತ ಪಡಿತರದೊಂದಿಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು
  • ಹೊಸ ಸದಸ್ಯರು ಹೆಸರನ್ನು ಸೇರಿಸಲು ಆಫ್‌ಲೈನ್ ಅಥವಾ ಆಫ್‌ಲೈನ್ ಮೋಡ್ ಆಯ್ಕೆ ಮಾಡಬಹುದು
ಈ ಸುಲಭ ವಿಧಾನದ ಮೂಲಕ  Ration Card ನಲ್ಲಿ ಹೊಸ ಸದಸ್ಯರ ಹೆಸರು ಸೇರಿಸಬಹುದು title=
ಪಡಿತರ ಚೀಟಿಯಲ್ಲಿ ಈ ರೀತಿ ಕುಟುಂಬದ ಸದಸ್ಯರ ಹೆಸರನ್ನು ಸೇರಿಸಿ (file photo)

ನವದೆಹಲಿ : Ration Card Latest News: ಪಡಿತರ ಚೀಟಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರ ಹೆಸರು ಸೇರಿಸುವುದು ಬಹಳ ಮುಖ್ಯ. ನಿಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸಬೇಕಾದರೆ, ಈಗ ಚಿಂತೆ ಮಾಡಬೇಕಾಗಿಲ್ಲ. ನಿಮ್ಮ ಕೆಲಸಾನ್ನು ನಿಮಿಷಗಳಲ್ಲಿ ಮಾಡಿಬಿಡಬಹುದು. ಪಡಿತರ ಚೀಟಿಯಲ್ಲಿ ಹೊಸ ಹೆಸರನ್ನು ಸೇರಿಸಲು,  ಆನ್‌ಲೈನ್ ಅಥವಾ ಆಫ್‌ಲೈನ್ ಮೋಡ್ ಅನ್ನು (how to add name in ration card online) ಆಯ್ಕೆ ಮಾಡಿಕೊಳ್ಳಬಹುದು. 

ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಬೇಕಾಗುವ ಅಗತ್ಯ ದಾಖಲೆಗಳು
1. ಮಗುವಿನ ಹೆಸರನ್ನು ಈ ರೀತಿ ಸೇರಿಸಿ
ಪಡಿತರ ಚೀಟಿಯಲ್ಲಿ (Ration Card) ಮಗುವಿನ ಹೆಸರನ್ನು ಸೇರಿಸಬೇಕಾದರೆ, ಮನೆಯ ಮುಖ್ಯಸ್ಥರ ಪಡಿತರ ಚೀಟಿ (ಫೋಟೋಕಾಪಿ ಮತ್ತು ಮೂಲ ಎರಡೂ), ಮಗುವಿನ ಜನನ ಪ್ರಮಾಣಪತ್ರ (Birth Certificate) ಮತ್ತು ಇಬ್ಬರೂ ಪೋಷಕರ ಆಧಾರ್ ಕಾರ್ಡ್ ಅಗತ್ಯವಿದೆ. 

ಇದನ್ನೂ ಓದಿ :   SBI Latest News: ಸೆಪ್ಟೆಂಬರ್ 14ರವರೆಗೆ SBIನಲ್ಲಿ ಸ್ಪೆಷಲ್ ಡೆಪಾಸಿಟ್ ಮಾಡಿ, ಸಿಗಲಿವೆ ಹಲವು ಲಾಭಗಳು

2. ಹೊಸ ಸದಸ್ಯರ ಹೆಸರನ್ನು ಹೀಗೆ ಸೇರಿಸಿ 
ಮನೆಯಲ್ಲಿ ಮದುವೆಯ (marriage) ನಂತರ ಬಂದ ಸೊಸೆಯ ಹೆಸರನ್ನು ಸೇರಿಸಬೇಕಾದರೆ, ಮಹಿಳೆಯ ಆಧಾರ್ ಕಾರ್ಡ್ (Aadhaar card), ಮದುವೆ ಪ್ರಮಾಣಪತ್ರ , ಗಂಡನ ಪಡಿತರ ಚೀಟಿ ಮತ್ತು ತವರು ಮನೆಯ ಪಡಿತರ ಕಾರ್ಡ್ ನಿಂದ ಹೆಸರು ತೆಗೆಸಿರುವ ತೆಗೆಯುವ ಪ್ರಮಾಣಪತ್ರ ಕಡ್ಡಾಯವಾಗಿ ಬೇಕಾಗಿರುತ್ತದೆ. 

ಈ ರೀತಿ ಆನ್‌ಲೈನ್‌ನಲ್ಲಿ ಹೆಸರು ಸೇರಿಸಿ:
1. ಮೊದಲಿಗೆ, ನಿಮ್ಮ ರಾಜ್ಯದ ಆಹಾರ ಪೂರೈಕೆಯ ಅಧಿಕೃತ ಸೈಟ್ ಗೆ ಹೋಗಿ.
2. ನೀವು ಯುಪಿಯಿಂದ ಬಂದವರಾಗಿದ್ದರೆ (https://fcs.up.gov.in/FoodPortal.aspx
ನಂತರ ನೀವು ಈ ಸೈಟ್‌ನ ಲಿಂಕ್‌ಗೆ ಹೋಗಬೇಕು.
3. ಈಗ ನೀವು ಲಾಗಿನ್ ಐಡಿಯನ್ನು ರಚಿಸಬೇಕು, ನೀವು ಈಗಾಗಲೇ ಐಡಿ ಹೊಂದಿದ್ದರೆ, ಅದರೊಂದಿಗೆ ಲಾಗ್ ಇನ್ ಮಾಡಿ.
4. ಮುಖಪುಟದಲ್ಲಿ, ಹೊಸ ಸದಸ್ಯರನ್ನು ಸೇರಿಸುವ ಆಯ್ಕೆ ಕಾಣಿಸುತ್ತದೆ.
5. ಅದರ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಮುಂದೆ ಒಂದು ಹೊಸ ಫಾರ್ಮ್ ಕಾಣಿಸಿಕೊಳ್ಳುತ್ತದೆ.
6. ಇಲ್ಲಿ ನಿಮ್ಮ ಕುಟುಂಬದ ಹೊಸ ಸದಸ್ಯರ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
7. ಫಾರ್ಮ್ ಜೊತೆಗೆ, ನೀವು ಅಗತ್ಯ ದಾಖಲೆಗಳ ಸಾಫ್ಟ್ ಕಾಪಿಯನ್ನು ಅಪ್‌ಲೋಡ್ ಮಾಡಬೇಕು.
8. ಫಾರ್ಮ್ ಸಲ್ಲಿಕೆಯ ನಂತರ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ.
9. ಇದರೊಂದಿಗೆ ನೀವು ನಿಮ್ಮ ಫಾರ್ಮ್ ಅನ್ನು ಈ ಪೋರ್ಟಲ್ ನಲ್ಲಿ ಟ್ರ್ಯಾಕ್ ಮಾಡಬಹುದು.
10. ಅಧಿಕಾರಿಗಳು ಫಾರ್ಮ್ ಮತ್ತು ಡಾಕ್ಯುಮೆಂಟ್ ಅನ್ನು ಪರಿಶೀಲಿಸುತ್ತಾರೆ. 
11. ಎಲ್ಲವೂ ಸರಿಯಾಗಿದ್ದರೆ ನಿಮ್ಮ ಅರ್ಜಿಯನ್ನು  ಸ್ವೀಕರಿಸಲಾಗುತ್ತದೆ ಮತ್ತು ಪಡಿತರ ಚೀಟಿಯನ್ನು ಅಂಚೆ ಮೂಲಕ ನಿಮ್ಮ ಮನೆಗೆ ತಲುಪಿಸಲಾಗುತ್ತದೆ.

ಇದನ್ನೂ ಓದಿ : Indian Railways: ಇಂದಿನಿಂದ ಸ್ಲೀಪರ್ ಕ್ಲಾಸ್ ಟಿಕೆಟ್ ನಲ್ಲಿ AC ಕೋಚ್ ಪ್ರಯಾಣ, ಟಿಕೆಟ್ ದರ ಸೇರಿ ಇತರ ಡೀಟೇಲ್ ಇಲ್ಲಿದೆ

ಪಡಿತರದಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಇರುವ ಆಫ್‌ಲೈನ್ ಪ್ರಕ್ರಿಯೆ
1.  ನಿಮ್ಮ ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ಹೋಗಬೇಕು.
2. ಈಗ ನಿಮ್ಮೊಂದಿಗೆ ಎಲ್ಲಾ ಉಲ್ಲೇಖಿತ ದಾಖಲೆಗಳನ್ನು ತೆಗೆದುಕೊಳ್ಳಿ.
3. ಅಲ್ಲಿ ನೀವು ಹೊಸ ಸದಸ್ಯರ ಹೆಸರನ್ನು ಸೇರಿಸುವ ಫಾರ್ಮ್ ಅನ್ನು  ತೆಗೆದುಕೊಳ್ಳಬೇಕಾಗುತ್ತದೆ.
4. ಫಾರ್ಮ್‌ನಲ್ಲಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
5. ಈಗ ಇಲಾಖೆಗೆ ದಾಖಲೆಗಳೊಂದಿಗೆ  ಅರ್ಜಿಯನ್ನು ಸಲ್ಲಿಸಿ.
6. ಇಲ್ಲಿ ಕೆಲವು ಅರ್ಜಿ ಶುಲ್ಕವನ್ನು ಜಮಾ ಮಾಡಬೇಕು.
7. ಅರ್ಜಿ ಸಲ್ಲಿಸಿದ ನಂತರ, ಅಧಿಕಾರಿಗಳು ನಿಮಗೆ ರಶೀದಿಯನ್ನು ನೀಡುತ್ತಾರೆ, ಅದನ್ನು ಇಟ್ಟುಕೊಳ್ಳಬೇಕು.
8. ಈ ರಶೀದಿಯ ಮೂಲಕ ನೀವು ಆನ್ಲೈನ್ ನಲ್ಲಿ ​​(online) ಅರ್ಜಿಯ ಸ್ಟೇಟಸ್ ಅನ್ನು ಪರಿಶೀಲಿಸಬಹುದು.
9. ಅಧಿಕಾರಿಗಳು ನಿಮ್ಮ ಫಾರ್ಮ್ ಅನ್ನು ಪರಿಶೀಲಿಸುತ್ತಾರೆ ಮತ್ತು ಡಾಕ್ಯುಮೆಂಟ್ ವೆರಿಫಿಕೇಶನ್ ನಂತರ ನಿಮ್ಮ ಪಡಿತರವನ್ನು ಕನಿಷ್ಠ 2 ವಾರಗಳಲ್ಲಿ ಪಡೆದುಕೊಳ್ಳ ಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News