SBI Latest News: ಸೆಪ್ಟೆಂಬರ್ 14ರವರೆಗೆ SBIನಲ್ಲಿ ಸ್ಪೆಷಲ್ ಡೆಪಾಸಿಟ್ ಮಾಡಿ, ಸಿಗಲಿವೆ ಹಲವು ಲಾಭಗಳು

SBI Platinum Depositsನ ವಿಶೇಷ ಸೌಲಭ್ಯದ ಅಡಿ 15 bpsವರೆಗೆ ಹೆಚ್ಚುವರಿ ಬಡ್ಡಿಯ ಸೌಲಭ್ಯ ಸಿಗುತ್ತಿದೆ. ಈ ಕೊಡುಗೆಯ ವಿಶೇಷ ಲಾಭವನ್ನು ನೀವು ಸೆಪ್ಟೆಂಬರ್ 14ರವರೆಗೆ ಪಡೆಯಬಹುದು.

Written by - Nitin Tabib | Last Updated : Sep 6, 2021, 02:20 PM IST
  • SBI Platinum Depositsನ ವಿಶೇಷ ಸೌಲಭ್ಯದ ಅಡಿ 15 bpsವರೆಗೆ ಹೆಚ್ಚುವರಿ ಬಡ್ಡಿಯ ಸೌಲಭ್ಯ ಸಿಗುತ್ತಿದೆ.
  • ಈ ಕೊಡುಗೆಯ ವಿಶೇಷ ಲಾಭವನ್ನು ನೀವು ಸೆಪ್ಟೆಂಬರ್ 14ರವರೆಗೆ ಪಡೆಯಬಹುದು.
  • ಈ ಯೋಜನೆಯ ಲಾಭವನ್ನು ಹೇಗೆ ಪಡೆಯಬೇಕು ಎಂಬುದನ್ನು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ.
SBI Latest News: ಸೆಪ್ಟೆಂಬರ್ 14ರವರೆಗೆ SBIನಲ್ಲಿ ಸ್ಪೆಷಲ್ ಡೆಪಾಸಿಟ್ ಮಾಡಿ, ಸಿಗಲಿವೆ ಹಲವು ಲಾಭಗಳು title=
SBI Platinum Deposits (File Photo)

ನವದೆಹಲಿ: SBI Platinum Deposits - ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮಾಚರಣೆಯಲ್ಲಿ ತೊಡಗಿರುವ ದೇಶದ ಸರ್ಕಾರಿ ಬ್ಯಾಂಕ್ SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ), ತನ್ನ ಗ್ರಾಹಕರಿಗೆ SBI ಪ್ಲಾಟಿನಂ ಠೇವಣಿಗಳ ವಿಶೇಷ ಸೌಲಭ್ಯವನ್ನು ನೀಡುವುದಾಗಿ ಘೋಷಿಸಿತ್ತು. ಈ ಯೋಜನೆಯಡಿ, ಗ್ರಾಹಕರು 15 ಬಿಪಿಎಸ್ ವರೆಗೆ ಹೆಚ್ಚುವರಿ ಬಡ್ಡಿಯ ಸೌಲಭ್ಯವನ್ನು ಪಡೆಯಲಿದ್ದಾರೆ. ಎಸ್‌ಬಿಐ ಪ್ಲಾಟಿನಂ ಠೇವಣಿಗಳ ಅಡಿಯಲ್ಲಿ, ಗ್ರಾಹಕರು 75 ದಿನಗಳು, 525 ದಿನಗಳು ಮತ್ತು 2250 ದಿನಗಳವರೆಗೆ ಫಿಕ್ಸೆಡ್ ಡಿಪಾಸಿಟ್ ಇಡಬಹುದು. ಸೆಪ್ಟೆಂಬರ್ 14 ರವರೆಗೆ ನೀವು ಈ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬಹುದು. ಅಂದರೆ, ಇದಕ್ಕಾಗಿ ನಿಮ್ಮ ಬಳಿ ಕೇವಲ 7 ದಿನಗಳು ಉಳಿದಿವೆ. ನೀವು ತಕ್ಷಣ ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಬಹುದು.

ಶ್ರೀಸಾಮಾನ್ಯರಿಗೆ SBI Platinum Deposit ಮೇಲಿನ ಬಡ್ಡಿ ದರಗಳು 
>> ಪ್ಲಾಟಿನಂ 75 ದಿನಗಳು - ಶೇ. 4.45.
>> ಪ್ಲಾಟಿನಂ 525 ದಿನಗಳು - ಶೇ. 5.60.
>> ಪ್ಲಾಟಿನಂ 2250 ದಿನಗಳು - ಶೇ. 6.20.

ಫಿಕ್ಸೆಡ್ ಡಿಪಾಸಿಟ್ ಮಾಡಬಹುದು
ಎಸ್‌ಬಿಐನ ಪ್ಲಾಟಿನಂ ಠೇವಣಿ ಯೋಜನೆಯಲ್ಲಿ ನೀವು ನಿಮ್ಮ ಹಣವನ್ನು ಪಿಕ್ಸ್ ಮಾಡಬಹುದು. ಮತ್ತೊಂದೆಡೆ, NRE ಮತ್ತು NRO ಅವಧಿ ಠೇವಣಿಗಳು (ರೂ. 2 ಕ್ಕಿಂತ ಕಡಿಮೆ) ಸೇರಿದಂತೆ ದೇಶೀಯ ಚಿಲ್ಲರೆ ಅವಧಿ ಠೇವಣಿಗಳು ಈ ಯೋಜನೆಯ ಲಾಭ ಪಡೆಯಬಹುದು.

ಯಾವ ಮೋಡ್ ನಲ್ಲಿ ಪೇಮೆಂಟ್ ಸಿಗುತ್ತದೆ?
ಗ್ರಾಹಕರಿಗೆ ಟರ್ಮ್ ಡಿಪಾಸಿಟ್ ನಲ್ಲಿ ತಿಂಗಳ ಆಧಾರದ ಮೇಲೆ ಹಾಗೂ ತ್ರೈಮಾಸಿಕದ ಆಧಾರದ ಮೇಲೆ ಪೇಮೆಂಟ್ ಸಿಗುತ್ತದೆ. ಇದಲ್ಲದೆ ಸ್ಪೆಷಲ್ ಟರ್ಮ್ ಡಿಪಾಸಿಟ್ ನಲ್ಲಿ ಗ್ರಾಹಕರಿಗೆ ಮ್ಯಾಚ್ಯೂರಿಟಿ ಮೇಲೆ ಬಡ್ಡಿಯ ಲಾಭ ಸಿಗುತ್ತದೆ. ಈ ಮೊತ್ತವನ್ನು ಗ್ರಾಹಕರ ಖಾತೆಗೆ ಪಾವತಿಸಲಾಗುವುದು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-EPFO Latest News: ಆರು ಕೋಟಿ ಜನರ ಖಾತೆಗೆ ಹಣ ವರ್ಗಾಯಿಸುತ್ತಿದೆ ಸರ್ಕಾರ, ಫಟಾಫಟ್ ನಿಮ್ಮ ಬ್ಯಾಲೆನ್ಸ್ ಚೆಕ್ ಮಾಡಿ

SBI Special FD Scheme For Senior Citizens
ಹಿರಿಯ ನಾಗರಿಕರಿಗಾಗಿ ಇರುವ SBIನ ವಿಶೇಷ FD ಯೋಜನೆಯನ್ನು 'ವಿ ಕೇರ್' ಹೆಸರಿನಿಂದ ಗುರುತಿಸಲಾಗುತ್ತದೆ. ಹಿರಿಯ ನಾಗರಿಕರಿಗೆ ಬ್ಯಾಂಕ್ 5 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ FD ಹೂಡಿಕೆಯ ಮೇಲೆ 30 bps ಹೆಚ್ಚುವರಿ ಬಡ್ಡಿಯನ್ನು ಪಾವತಿಸುತ್ತದೆ. ಒಂದು ವೇಳೆ ಯಾವುದೇ ಹಿರಿಯ ನಾಗರಿಕ ಸ್ಪೆಷಲ್ FD ಯೋಜನೆಯ ಅಡಿ ಫಿಕ್ಸೆಡ್ ಡಿಪಾಸಿಟ್ ಮಾಡಿಸಿದರೆ, FD ಮೇಳ ಚಾಲ್ತಿ ಬಡ್ಡಿ ದರ ಶೇ. 6.20ರಷ್ಟು ಇರಲಿದೆ.

ಇದನ್ನೂ ಓದಿ-LIC Jeevan Anand Policy : LIC ಯ ಈ ಯೋಜನೆಯಲ್ಲಿ ಪ್ರತಿದಿನ 76 ರೂ. ಹೂಡಿಕೆ ಮಾಡಿ ಪಡೆಯಿರಿ 10.33 ಲಕ್ಷ ರೂ.

SBI Latest FD Interest Rates
>> 7 ದಿನಗಳಿಂದ 45 ದಿನಗಳ ಹೂಡಿಕೆ - ಶೇ.2.9 
>> 46 ದಿನಗಳಿಂದ 179 ದಿನಗಳ ಹೂಡಿಕೆ  - ಶೇ.3.9 
>>180 ದಿನಗಳಿಂದ 210 ದಿನಗಳ ಹೂಡಿಕೆ -ಶೇ.4.4 
>> 211 ದಿನಗಳಿಂದ ಒಂದು ವರ್ಷದ ಒಳಗಿನ ಹೂಡಿಕೆ - ಶೇ 4.4 ರಷ್ಟು 
>> 1 ವರ್ಷದಿಂದ 2 ವರ್ಷದ ಒಳಗಿನ ಹೂಡಿಕೆ - ಶೇ. 5 ರಷ್ಟು
>> 2 ವರ್ಷದಿಂದ 3 ವರ್ಷದ ಒಳಗಿನ ಹೂಡಿಕೆ -ಶೇ.5.1ರಷ್ಟು
>> 3 ವರ್ಷದಿಂದ 5 ವರ್ಷದ ಒಳಗಿನ ಹೂಡಿಕೆ - ಶೇ.5.3ರಷ್ಟು 
>> 5 ವರ್ಷದಿಂದ 10 ವರ್ಷದವರೆಗಿನ ಹೂಡಿಕೆಗೆ ಶೇ.5.4ರಷ್ಟು

ಇದನ್ನೂ ಓದಿ-PM Kisan Yojana: ಪಿಎಂ ಕಿಸಾನ್ ಫಲಾನುಭವಿಗಳಿಗೆ ಕಡಿಮೆ ದರದಲ್ಲಿ ಸಿಗಲಿದೆ Loan, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News