Dengue ಪರೀಕ್ಷೆಗಾಗಿ ಖಾಸಗಿ ಲ್ಯಾಬ್, ಆಸ್ಪತ್ರೆಗಳು ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವ ಹಾಗಿಲ್ಲ, ಈ ದರಗಳು ನಿಗದಿಯಾಗಿವೆ

Dengue Test - ಹೆಚ್ಚಾಗುತ್ತಿರುವ ಡೆಂಗ್ಯೂ ಹರಡುವಿಕೆಯ ನಡುವೆ, ಖಾಸಗಿ ಪ್ರಯೋಗಾಲಯದ ಅನಿಯಂತ್ರಿತತೆಗೆ ಕಡಿವಾಣ ಹಾಕಲಾಗಿದೆ. ಜಿಲ್ಲಾಡಳಿತ ಲಖನೌನಲ್ಲಿ ಡೆಂಗ್ಯೂ ಪರೀಕ್ಷೆಯ ದರಗಳನ್ನು  (Dengue Test) ನಿಗದಿಪಡಿಸಿದೆ.

Written by - Nitin Tabib | Last Updated : Sep 13, 2021, 08:15 PM IST
  • ಖಾಸಗಿ ಲ್ಯಾಬ್ ಗಳ ಬೇಕಾಬಿಟ್ಟಿತನಕ್ಕೆ ಕಡಿವಾಣ.
  • ಡೆಂಗ್ಯೂ ಪರೀಕ್ಷೆಯ ಹೆಸರಿನಲ್ಲಿ ಇನ್ಮುಂದೆ ಲೂಟಿ ನಡೆಯಲ್ಲ
  • ಜಿಲ್ಲಾಡಳಿತದಿಂದ ಪರೀಕ್ಷೆಯ ದರ ಪಟ್ಟಿ ನಿಗದಿ.
Dengue ಪರೀಕ್ಷೆಗಾಗಿ ಖಾಸಗಿ ಲ್ಯಾಬ್, ಆಸ್ಪತ್ರೆಗಳು ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವ ಹಾಗಿಲ್ಲ, ಈ ದರಗಳು ನಿಗದಿಯಾಗಿವೆ title=
Dengue Test(File Photo)

ಲಖನೌ: Dengue Test - ಖಾಸಗಿ ಪ್ಯಾಥಾಲಾಜಿ ಲ್ಯಾಬ್ ಗಳು (Pathology Labs) ಇನ್ನು ಮುಂದೆ ಡೆಂಗ್ಯೂ ಪರೀಕ್ಷೆಗೆ ಅನಿಯಂತ್ರಿತ ಹಣವನ್ನು ವಿಧಿಸಲು ಸಾಧ್ಯವಾಗುವುದಿಲ್ಲ. ಜಿಲ್ಲಾ ಮ್ಯಾಜಿಸ್ಟ್ರೇಟ್ ಲಖನೌ, ಅಭಿಷೇಕ್ ಪ್ರಕಾಶ್ (DM LKO Abhishek Prasad) ಈ ಕುರಿತು ಆದೇಶ ಹೊರಡಿಸಿದ್ದಾರೆ. ಡಿಎಂ ಅಭಿಷೇಕ್ ಪ್ರಕಾಶ್ ಅವರು ನೀಡಿದ ಆದೇಶದ ಪ್ರಕಾರ, ಇಲ್ಲಿಯವರೆಗೆ ಖಾಸಗಿ ಪ್ಯಾಥಾಲಾಜಿ ಕೇಂದ್ರಗಳು ವಿವಿಧ ದರಗಳಲ್ಲಿ ಡೆಂಗ್ಯೂ ಪರೀಕ್ಷೆಯನ್ನು ನಡೆಸುತ್ತಿದ್ದವು. ಅನೇಕ ಪ್ರಯೋಗಾಲಯಗಳು (Private Labs) ಅತಿಯಾದ ಶುಲ್ಕ (Dengue Test Rates) ವಿಧಿಸುತ್ತಿವೆ.  ಆದರೆ ಇದೀಗ ಎಲ್ಲಾ ಪ್ರಯೋಗಾಲಯಗಳಿಗೆ ಒಂದೇ ರೀತಿಯ ದರಗಳನ್ನು ನಿಗದಿ ಮಾಡಲಾಗಿದೆ.

ಡೆಂಗ್ಯೂ ಟೆಸ್ಟ್ ದರಗಳು ನಿಗದಿ (Dengue Test Charges)
ಅಭಿಷೇಕ್ ಪ್ರಕಾಶ್, ಜಿಲ್ಲಾ ಮ್ಯಾಜಿಸ್ಟ್ರೇಟ್, ಲಕ್ನೋ (Dengue In Lucknow) ನೀಡಿರುವ ಆದೇಶದ ಪ್ರಕಾರ, ಸ್ಥಿರ ಶುಲ್ಕಕ್ಕಿಂತ ಹೆಚ್ಚು ಶುಲ್ಕ ವಿಧಿಸುವ ಪ್ರಯೋಗಾಲಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ. ಡೆಂಗ್ಯೂ ಪರೀಕ್ಷೆಗಾಗಿ ಲಕ್ನೋ ಜಿಲ್ಲಾಡಳಿತದಿಂದ ನೀಡಲಾದ ಗರಿಷ್ಠ ದರಗಳ ವಿವರಗಳು ಇಂತಿವೆ.

ಇದನ್ನೂ ಓದಿ-Children's Health Tips : ಮಳೆಗಾಲದಲ್ಲಿ ಮಕ್ಕಳನ್ನು ರಕ್ಷಿಸಲು ಇಲ್ಲಿವೆ ಪ್ರಮುಖ ಸಲಹೆಗಳು..!

ಕ್ರಮಾಂಕ                       ಟೆಸ್ಟ್ ಹೆಸರು                                             ದರ 
1.                     ಎನ್ಎಸ್ 1 ಎಲಿಸಾ ಲ್ಯಾಬ್ ನಲ್ಲಿ                           1200 ರೂ.
2.                     ಎನ್ಎಸ್ 1 ಎಲಿಸಾ ರೋಗಿಯ ಮನೆಯಲ್ಲಿ             1400 ರೂ.
3.                     NS1 ಕಾರ್ಡ್ ಪರೀಕ್ಷೆ                                              1000 ರೂ.
4.                     ಐಜಿಎಂ ಎಲಿಸಾ ಲ್ಯಾಬ್ ನಲ್ಲಿ                                  750 ರೂ.
5.                     ರೋಗಿಯ ಮನೆಯಲ್ಲಿ ಐಜಿಎಂ ಎಲಿಸಾ                   800 ರೂ.
6.                     ಐಜಿಎ ಎಲಿಸಾ ಲ್ಯಾಬ್ ನಲ್ಲಿ                                     750 ರೂ.
7.                     ರೋಗಿಯ ಮನೆಯಲ್ಲಿ ಐಜಿಎ ಎಲಿಸಾ                      800 ರೂ.
8.                     ಐಜಿಎಂ ಕಾರ್ಡ್ ಪರೀಕ್ಷೆ                                          600 ರೂ.
9.                     ಲ್ಯಾಬ್‌ನಲ್ಲಿ ಪ್ಲೇಟ್ಲೆಟ್ ಕೌಂಟ್                                 250 ರೂ.
10.                   ರೋಗಿಯ ಮನೆಯಲ್ಲಿ ಪ್ಲೇಟ್ ಕೌಂಟ್                     350 ರೂ.
11.                   1 ಯುನಿಟ್ ಪ್ಲೇಟ್ಲೆಟ್ ಆರ್ಡಿಪಿ                                 400 ರೂ.

ಇದನ್ನೂ ಓದಿ-ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನಿಂದ ಜೊಮಾಟೊಗೆ ಒಂದು ಲಕ್ಷ ರೂ. ದಂಡ!

ಡೆಂಗ್ಯೂ ಪ್ರಕೋಪ (Dengue Infection) ಮುಂದುವರೆದಿದೆ
ಲಖನೌ ನಗರದಲ್ಲಿ ಡೆಂಗ್ಯೂ ಪ್ರಕೋಪ ಮುಂದುವರಿದಿದೆ. ಕಳೆದ ಕೆಲ ದಿನಗಳಿಂದ ಹೆಚ್ಚಿನ ಸಂಖ್ಯೆಯ ಜನರು ಡೆಂಗ್ಯೂ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ, ಇದರೊಂದಿಗೆ ಜ್ವರದಲ್ಲಿ ನೀಡುವ ಔಷಧಿಗಳ ಮಾರಾಟವೂ ಹೆಚ್ಚಾಗಿದೆ. ಡೆಂಗ್ಯೂ ಪರೀಕ್ಷೆಯಲ್ಲಿ  ಅಧಿಕ ಶುಲ್ಕ ವಿಧಿಸುವ ದೂರುಗಳು ಬಂದಿದ್ದವು. ಇದಕ್ಕೆ ಕಡಿವಾಣ ಹಾಕಲು, ಜಿಲ್ಲಾಡಳಿತವು ಖಾಸಗಿ ಪ್ರಯೋಗಾಲಯಗಳ ದರಗಳನ್ನು ನಿಗದಿಪಡಿಸಿದೆ, ಹೀಗಾಗಿ ಇನ್ಮುಂದೆ ಯಾವುದೇ ಪ್ರಯೋಗಾಲಯವು ನಿಗದಿತ ದರಕ್ಕಿಂತ ಹೆಚ್ಚು ಶುಲ್ಕ ವಿಧಿಸಲು ಸಾಧ್ಯವಿಲ್ಲ.

ಇದನ್ನೂ ಓದಿ-ಪಾಟ್ನಾದಲ್ಲಿ ಹೆಚ್ಚಾದ ಡೆಂಗ್ಯೂ; ರೋಗಿ ಸಂಬಂಧಿಕರಿಂದ ಕೇಂದ್ರ ಸಚಿವ ಅಶ್ವಿನಿ ಚೌಬೆ ಮೇಲೆ ಇಂಕ್ ಎಸೆತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News