ನವದೆಹಲಿ : ಫ್ಲಿಪ್ಕಾರ್ಟ್ ಹೊಸ 'ಲವ್ ಇಟ್ ಆರ್ ರಿಟರ್ನ್ ಇಟ್' ಪ್ರೋಗ್ರಾಂ ಅನ್ನು ಪರಿಚಯಿಸಿದೆ. ಗ್ರಾಹಕರು ಪ್ರೀಮಿಯಂ ಸ್ಮಾರ್ಟ್ಫೋನ್ (Premium smartphone) ಅನ್ನು ಉಪಯೋಗಿಸಲು ಮತ್ತು ಇಷ್ಟವಾಗಿಲ್ಲ ಎಂದರೆ, ಖರೀದಿಸಿದ ಬೆಲೆಯ ಸಂಪೂರ್ಣ ಮರುಪಾವತಿಗಾಗಿ ಬಳಕೆಯ15 ದಿನಗಳಲ್ಲಿ ಅದನ್ನು ಹಿಂದಿರುಗಿಸಲು ಅನುವು ಮಾಡಿಕೊಡುತ್ತದೆ. ಹೊಸ 'ಲವ್ ಇಟ್ ಆರ್ ರಿಟರ್ನ್ ಇಟ್' ಪ್ರೋಗ್ರಾಂಗಾಗಿ ಫ್ಲಿಪ್ಕಾರ್ಟ್ (Flipkart) ಸ್ಯಾಮ್ಸಂಗ್ ಜೊತೆ ಪಾಲುದಾರಿಕೆ ಹೊಂದಿದೆ ಮತ್ತು ಇದು ಹೊಸ Samsung Galaxy Z Fold 3 ಮತ್ತು Samsung Galaxy Z ಫ್ಲಿಪ್ 3 ಅನ್ನು ಒಳಗೊಂಡಿದೆ. ಆಸಕ್ತ ಗ್ರಾಹಕರು ಫ್ಲಿಪ್ಕಾರ್ಟ್ನಲ್ಲಿ ಈ ಫೋನ್ ಗಳನ್ನು ಆರ್ಡರ್ ಮಾಡಬಹುದು.
ಈ ಸ್ಮಾರ್ಟ್ಫೋನ್ ಮೇಲೆ ಆಫರ್ :
ಫ್ಲಿಪ್ಕಾರ್ಟ್ನಿಂದ (Flipkart) ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 3 ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 3 ಖರೀದಿಸಿ, ಈ ಪೋನ್ ಇಷ್ಟವಾಗದೇ ಇದ್ದರೆ, ಅದನ್ನು ವಾಪಸ್ ಮಾಡುವ ಆಯ್ಕೆಯನ್ನು ಪಡೆಯುತ್ತಾರೆ. ನೀವು ರಿಟರ್ನ್ ರಿಕ್ವೆಸ್ಟ್ ಅನ್ನು ಹಾಕಿದರೆ, ಪೋನ್ ಅನ್ನು ವಾಪಸ್ ಪಡೆಯುವ ಮುನ್ನ ಫೋನ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಫ್ಲಿಪ್ಕಾರ್ಟ್ ಪರಿಶೀಲಿಸುತ್ತದೆ. ನಂತರ ಪೋನ್ ಹಣವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ (bank account) ಹಿಂತಿರುಗಿಸಲಾಗುತ್ತದೆ. ಈ ಆಫರ್ ಬೆಂಗಳೂರು, ಹೈದರಾಬಾದ್, ಪುಣೆ, ದೆಹಲಿ, ಮುಂಬೈ, ಗುರುಗ್ರಾಮ್, ಅಹಮದಾಬಾದ್, ಕೋಲ್ಕತ್ತಾ, ಚೆನ್ನೈ ಮತ್ತು ವಡೋದರಾದಲ್ಲಿರುವ ಬಳಕೆದಾರರಿಗೆ ಮಾತ್ರ ಅನ್ವಯವಾಗಲಿದೆ.
ಇದನ್ನೂ ಓದಿ : Mi Smart Band 6: Xiaomi ನ ಇತ್ತೀಚಿನ ಸ್ಮಾರ್ಟ್ ಬ್ಯಾಂಡ್ನಲ್ಲಿ ಭಾರೀ ರಿಯಾಯಿತಿ
ರಿಟರ್ನ್ ಮಾಡುವುದು ಹೇಗೆ?
ರಿಟರ್ನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು, ಖರೀದಿದಾರರು ಫ್ಲಿಪ್ಕಾರ್ಟ್ ಹಂಚಿಕೊಂಡಿರುವ ರಿಟರ್ನ್ ರಿಕ್ವೆಸ್ಟ್ ವೆಬ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದರ ನಂತರ, ಬಳಕೆದಾರರು ವ್ಯಾಲಿಡೇಟ್ ಮತ್ತು ಲಾಗಿನ್ ಮಾಡಲು IMEI ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಹಿಂಪಡೆಯುವ ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಲು ಬಳಕೆದಾರರು ವೈಯಕ್ತಿಕ, ಡಿವೈಸ್ ಮತ್ತು ಬ್ಯಾಂಕ್ (bank) ವಿವರಗಳನ್ನು ನಮೂದಿಸಬೇಕಾಗುತ್ತದೆ ಮತ್ತು ಬಳಕೆದಾರರಿಗೆ ಟಿಕೆಟ್ ಸಂಖ್ಯೆಯನ್ನು ರಚಿಸಲಾಗುತ್ತದೆ.
ಫೋನ್ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ವಿವರಗಳೊಂದಿಗೆ ಫ್ಲಿಪ್ಕಾರ್ಟ್ (Flipkart) ಇಮೇಲ್ ಅನ್ನು ಕಳುಹಿಸುತ್ತದೆ. ಇದನ್ನು ಯಶಸ್ವಿಯಾಗಿ ಮಾಡಿದ ನಂತರ, ಲಾಜಿಸ್ಟಿಕ್ ಕೆಲಸಗಾರನು ಫೋನ್ ಪಿಕಪ್ ಅನ್ನು ನಿಗದಿಪಡಿಸಲು ಬಳಕೆದಾರರನ್ನು ಸಂಪರ್ಕಿಸುತ್ತಾರೆ.
ಇದನ್ನೂ ಓದಿ : Whatsapp Update: ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದ WhatsApp! ಮೂರು ಹೊಸ ವೈಶಿಷ್ಟ್ಯಗಳ ಬಿಡುಗಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ