K Sudhakar : 'ಮುಂದಿನ ವಾರದಿಂದ 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ವಿತರಣೆ'

ಆರೋಗ್ಯ ನಂದನ ಯೋಜನೆಯಡಿ ಮಕ್ಕಳ ಮಾಹಿತಿ ಸಂಗ್ರಹಿಸಲಾಗುತ್ತದೆ. ನಮ್ಮ ರಾಜ್ಯಕ್ಕೆ ಎಷ್ಟು ಡೋಸ್ ಸಿಗುತ್ತದೆ ಎಂಬ ಆದರದ ಮೇಲೆ 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ.

Written by - Channabasava A Kashinakunti | Last Updated : Nov 10, 2021, 01:07 PM IST
  • ಝೈಡಸ್ ಕ್ಯಾಡಲಾ ಕಂಪನಿ ತಯಾರಿಸಿರುವ ಝೈಕೋವ್-ಡಿ ಕೊರೋನಾ ಲಸಿಕೆ
  • ರಾಜ್ಯದ 12 ರಿಂದ 18 ವರ್ಷದ ಮಕ್ಕಳಿಗೆ ವಿತರಿಸುವ ಸಾಧ್ಯತೆ
  • ಈ ಲಸಿಕೆಯನ್ನ ಮುಂದಿನ ವಾರದಿಂದ ರಾಜ್ಯದ ಮಕ್ಕಳಿಗೆ
K Sudhakar : 'ಮುಂದಿನ ವಾರದಿಂದ 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ವಿತರಣೆ' title=

ಬೆಂಗಳೂರು : ಮಕ್ಕಳಿಗಾಗಿ ತಯಾರಿಸಿರುವ ಝೈಕೋವ್-ಡಿ ಕೊರೋನಾ ಲಸಿಕೆಯನ್ನ ಮುಂದಿನ ವಾರದಿಂದ ರಾಜ್ಯದ 12 ರಿಂದ 18 ವರ್ಷದ ಮಕ್ಕಳಿಗೆ ವಿತರಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ.

ನಿನ್ನೆ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಕೆ ಸುಧಾಕರ್(K Sudhakar), ಝೈಡಸ್ ಕ್ಯಾಡಲಾ ಕಂಪನಿ ತಯಾರಿಸಿರುವ ಈ ಲಸಿಕೆಯನ್ನ ಮುಂದಿನ ವಾರದಿಂದ ರಾಜ್ಯದ ಮಕ್ಕಳಿಗೆ ವಿತರಿಸುವ ಸಾಧ್ಯತೆ. 

ಇದನ್ನು ಓದಿ : ಬರಿಗಾಲಲ್ಲೇ ಬಂದು ಪದ್ಮಶ್ರೀ ಸ್ವೀಕರಿಸಿದ ಕರ್ನಾಟಕದ ಹೆಮ್ಮೆ ತುಳಸಿ ಗೌಡ

ಒಂದು ಕೋಟಿ ಡೋಸ್ ಲಸಿಕೆಯನ್ನ ಖರೀದಿಗೆ ಕೇಂದ್ರ ಸರ್ಕಾರ(Central Government) ಬೇಡಿಕೆ ಸಲ್ಲಿಸಿದೆ. ಇದು ಪೂರೈಕೆ ಆದ ನಂತರ ರಾಜ್ಯಗಳಿಗೆ ಹಂಚಲಾಗುತ್ತದೆ. ಆರೋಗ್ಯ ನಂದನ ಯೋಜನೆಯಡಿ ಮಕ್ಕಳ ಮಾಹಿತಿ ಸಂಗ್ರಹಿಸಲಾಗುತ್ತದೆ. ನಮ್ಮ ರಾಜ್ಯಕ್ಕೆ ಎಷ್ಟು ಡೋಸ್ ಸಿಗುತ್ತದೆ ಎಂಬ ಆದರದ ಮೇಲೆ 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ.

ಶೇ.89 ರಷ್ಟು ಜನ 18 ವರ್ಷ ಮೇಲ್ಪಟ್ಟವರು ಕೊರೋನಾ ಲಸಿಕೆ(Corona Vaccine)ಯ ಮೊದಲ ಡೋಸ್ ಪಡೆದಿದ್ದಾರೆ. ಇದರಲ್ಲಿ ಶೇ.48 ರಷ್ಟು ಜನ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಕೊರೋನಾ ಕಂಟ್ರೋಲ್ ಗೆ ಬಂದಿದೆ. ಹಾಗ ಅಂತ ಜನ ಮೈ ಮರೆಯುವುದು ಸರಿಯಲ್ಲ. ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಜನ ಮುಂದೆ ಬರಬೇಕು ಎಂದು ಹೇಳಿದ್ದಾರೆ.

ಇದನ್ನು ಓದಿ : ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಜಲ ಆಯೋಗದ ಅನುಮತಿ ಬೇಕಾಗಿದೆ: ಬಸವರಾಜ್ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News