Travel 2021: ಈ ಸ್ಥಳಗಳಿಗೆ ಪುರುಷರು ಸುಲಭವಾಗಿ ಭೇಟಿ ನೀಡಬಹುದು, ಆದ್ರೆ Ladies Not Allowed! ಕಾರಣ ಗೊತ್ತೇ?

Travel 2021: ತಂತ್ರಜ್ಞಾನದ ಈ ಯುಗದಲ್ಲಿ ಮಹಿಳೆಯರು ಬಾಹ್ಯಾಕಾಶವನ್ನು ತಲುಪಿದ್ದರೂ ಕೂಡ ಇಂದಿಗೂ ಭೂಮಿಯ ಮೇಲೆ ಮಹಿಳೆಯರಿಗೆ ಹೋಗಲು ಅವಕಾಶವಿಲ್ಲದ ಅನೇಕ ಸ್ಥಳಗಳಿವೆ. ಈ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ನವದೆಹಲಿ: Travel 2021 - ಜಗತ್ತು ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ, ಡಿಜಿಟಲೀಕರಣದ ಈ ಕಾಲದಲ್ಲೂ ಕೂಡ ಮಹಿಳೆಯರ ವಿಷಯದಲ್ಲಿ ತಾರತಮ್ಯವನ್ನು ಕೆಲವೆಡೆ ಸ್ಪಷ್ಟವಾಗಿ ಕಾಣಬಹುದು. ವಿಶ್ವಾದ್ಯಂತ ಬಾಹ್ಯಾಕಾಶಕ್ಕೆ ಭೇಟಿ ನೀಡಿದ ಅನೇಕ ಮಹಿಳೆಯರು ಇದ್ದಾರೆ. ಆದರೆ ಕೆಲವು ಸ್ಥಳಗಳಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ  (women not allowed). ಈ ನಿಷೇಧವು ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತದ ಕೆಲ ವಿಶೇಷ ಸ್ಥಳಗಳಲ್ಲಿ ನೀವು ನೋಡಬಹುದು. ಇಂದು ನಾವು ಮಹಿಳೆಯರಿಗೆ ಹೋಗಲು (World Travel) ಅನುಮತಿಸದ ಕೆಲವು ಆಯ್ದ ಸ್ಥಳಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. 

 

ಇದನ್ನೂ ಓದಿ-Viral News: ಮುಂದಿನ ವರ್ಷ ಭೂಮಿಯ ಮೇಲೆ ಕಾಣಿಸಿಕೊಳ್ಳಲಿವೆ ಮನುಷ್ಯರ ರೀತಿ ಕಾಣುವ ಮೀನುಗಳು! ಭವಿಷ್ಯವಾಣಿ ಮಾಡಿದ ವ್ಯಕ್ತಿ ಯಾರು ಗೊತ್ತಾ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. ರಾಜಸ್ಥಾನದ ಕಾರ್ತಿಕೇಯ ದೇವಸ್ಥಾನ (Kartikeya Temple) - ರಾಜಸ್ಥಾನ ರಾಜ್ಯದ ಪುಷ್ಕರ್ ನಗರದಲ್ಲಿ ಕಾರ್ತಿಕೇಯನ ದೇವಾಲಯವಿದೆ. ಈ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದೆ. ವಾಸ್ತವವಾಗಿ, ಈ ದೇವಾಲಯದಲ್ಲಿ ಕಾರ್ತಿಕೇಯ ಬ್ರಹ್ಮಚಾರಿ ರೂಪವನ್ನು ಹೊಂದಿದ್ದಾನೆ ಮತ್ತು ಈ ದೇವಾಲಯವನ್ನು ಪ್ರವೇಶಿಸಿದ ಮಹಿಳೆಯರಿಗೆ ದೇವರು ಶಾಪ ನೀಡುತ್ತಾನೆ ಎಂದು ನಂಬಲಾಗಿದೆ. 

2 /5

2. ಅಮೇರಿಕಾದ ಬರ್ನಿಂಗ್ ಟ್ರೀ ಕ್ಲಬ್ (Burning Tree Club) - ಯುನೈಟೆಡ್ ಸ್ಟೇಟ್ಸ್‌ನ ಮೇರಿಲ್ಯಾಂಡ್‌ನಲ್ಲಿ ಪುರುಷರಿಗಾಗಿ ಬರ್ನಿಂಗ್ ಟ್ರೀ ಕ್ಲಬ್ ಎಂಬ ವಿಶಿಷ್ಟವಾದ ಗಾಲ್ಫ್ ಕ್ಲಬ್ ಇದೆ. ಈ ಪ್ರತಿಷ್ಠಿತ ಕ್ಲಬ್‌ನಲ್ಲಿ ಅಧ್ಯಕ್ಷರಿಂದ ಮುಖ್ಯ ನ್ಯಾಯಮೂರ್ತಿಗಳವರೆಗೆ ಸದಸ್ಯರಿದ್ದಾರೆ. ಆದರೆ ಇಂದಿಗೂ ಮಹಿಳೆಯರಿಗೆ ಈ ಕ್ಲಬ್ ಪ್ರವೇಶಿಸಲು ಅವಕಾಶವಿಲ್ಲ.

3 /5

3. ಮೌಂಟ್ ಎಥೋಸ್, ಗ್ರೀಸ್ (Mount Ethos) - ಇದು 1000 ವರ್ಷಗಳಿಗಿಂತ ಅಧಿಕ ಕಾಲ ಗತಿಸಿದರೂ ಕೂಡ  ಇಂದಿಗೂ ಮಹಿಳೆಯರಿಗೆ ಈ ಸ್ಥಳಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಗ್ರೀಸ್‌ನ ಮೌಂಟ್ ಅಥೋಸ್‌ನಲ್ಲಿರುವ ಈ ಕ್ಯಾಥೆಡ್ರಲ್ ತುಂಬಾ ಪವಿತ್ರವಾಗಿದೆ, ಇಲ್ಲಿ ಕೇವಲ 100 ಧರ್ಮದ ಪುರುಷರು ಮತ್ತು 10 ಧರ್ಮೇತರ ಪುರುಷರು ಒಂದೇ ಬಾರಿಗೆ ತೀರ್ಥಯಾತ್ರೆ ಮಾಡಬಹುದು. ಇಂದಿಗೂ ಈ ಧಾರ್ಮಿಕ ಪವಿತ್ರ ಚರ್ಚ್‌ನಲ್ಲಿ ಪ್ರಾಚೀನ ನಿಯಮಗಳನ್ನು ಅನುಸರಿಸಲಾಗುತ್ತದೆ.

4 /5

4. ಸಬರಿಮಲೈ, ಕೇರಳ (Okinoshima Island) - ಕೇರಳದ ಪ್ರಸಿದ್ಧ ದೇಗುಲ ಶಬರಿಮಲೆಗೂ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಆದರೆ, ನಂತರ ನ್ಯಾಯಾಲಯವು ಮಹಿಳೆಯರ ಪರವಾಗಿ ತೀರ್ಪು ನೀಡಿದೆ. ಈ ಬಗ್ಗೆ ಹಲವು ಬಾರಿ ಚರ್ಚೆ ನಡೆದು ನ್ಯಾಯಾಲಯದಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಇಷ್ಟೆಲ್ಲಾ ಆದರೂ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಿಸುವುದು ಕಷ್ಟ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ದೇವತೆಗಳು ಅವಿವಾಹಿತರು ಎನ್ನಲಾಗುತ್ತದೆ.

5 /5

5. ಒಕಿನೋಶಿಮಾ ಐಲ್ಯಾಂಡ್, ಜಪಾನ್ (Okinoshima Island) - ಇದೊಂದು ಪವಿತ್ರ ಜಪಾನೀ ದ್ವೀಪ, ಓಕಿನೋಶಿಮಾ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಶಿಂಟೋ ಧರ್ಮ ಮತ್ತು ಸಂಪ್ರದಾಯಗಳ ಕಾರಣದಿಂದಾಗಿ ಅಲ್ಲಿ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಶಿಂಟೋ ಸಂಪ್ರದಾಯವು ಬೌದ್ಧಧರ್ಮ, ಟಾವೊ ತತ್ತ್ವ ಮತ್ತು ಚೀನಾದ ಮಿಶ್ರಣವಾಗಿದೆ.