3 ತಿಂಗಳು ಕತ್ತಲೆಯಲ್ಲಿ ಮುಳುಗಿದ್ದ ಗ್ರಾಮ: ಕೃತಕ ಸೂರ್ಯನನ್ನೇ ನಿರ್ಮಿಸಿದ ಜನರು..!

ಪ್ರಪಂಚದ ಅನೇಕ ಪ್ರದೇಶಗಳಲ್ಲಿ ಇಂದಿಗೂ ಸೂರ್ಯನ ಕಿರಣಗಳನ್ನು ನೋಡಲು ಜನರು ಹಾತೊರೆಯುತ್ತಾರೆ.

ಮನುಷ್ಯನ ಜೀವನ ಮತ್ತು ಆರೋಗ್ಯಕ್ಕೆ ಸೂರ್ಯನ ಬೆಳಕು ತುಂಬಾ ಅವಶ್ಯಕ. ಸೂರ್ಯನ ಬೆಳಕು ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳು ಮತ್ತು ಸಸ್ಯಗಳಿಗೂ ಬಹಳ ಮುಖ್ಯವಾಗಿದೆ. ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಸೂರ್ಯನ ಬೆಳಕು ಬರುತ್ತದೆಯಲ್ಲವೇ? ಆದರೆ ಪ್ರಪಂಚದ ಅನೇಕ ಪ್ರದೇಶಗಳಲ್ಲಿ ಇಂದಿಗೂ ಸೂರ್ಯನ ಕಿರಣಗಳನ್ನು ನೋಡಲು ಜನರು ಹಾತೊರೆಯುತ್ತಾರೆ. ಇದು ನಿಮಗೆ ಅಚ್ಚರಿ ಎನಿಸಿದರೂ ನಿಜ. ಈ ರೀತಿಯ ಒಂದು ಹಳ್ಳಿಯ ಬಗ್ಗೆ ಇಂದು ನಾವು ತಿಳಿಸಲಿದ್ದೇವೆ. ಈ ಹಳ್ಳಿಯ ಜನರು ಬರೋಬ್ಬರಿ 3 ತಿಂಗಳುಗಳ ಕಾಲ ಸೂರ್ಯನ ಬೆಳಕನ್ನೇ ಕಾಣದೆ ಕತ್ತಲೆಯಲ್ಲಿಯೇ ಜೀವನ ನಡೆಸಿದ್ದಾರೆ. ಬೆಳಕಿಗಾಗಿ ಅವರು ಕೃತಕ ಸೂರ್ಯ(Artificial Sun)ನನ್ನೇ ನಿರ್ಮಿಸಿದ್ದಾರೆ. ಯಾವುದು ಆ ಹಳ್ಳಿ ಅಂತೀರಾ..?  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಇಟಲಿಯ ಈ ಹಳ್ಳಿಯ ಹೆಸರು ವಿಗಲ್ಲೆನಾ(Viganella Village). ಎತ್ತರದ ಪರ್ವತಗಳಿಂದಾಗಿ ಸೂರ್ಯನ ಬೆಳಕು ಬೆಟ್ಟದ ತಪ್ಪಲಿನಲ್ಲಿರುವ ಈ ಗ್ರಾಮವನ್ನು ತಲುಪುವುದಿಲ್ಲ. ಈ ಗ್ರಾಮವು ಮಿಲನ್‌ನ ಉತ್ತರಕ್ಕೆ ಸುಮಾರು 130 ಕಿಮೀ ದೂರದಲ್ಲಿದೆ. ಈ ಗ್ರಾಮದ ಜನಸಂಖ್ಯೆ ಕೇವಲ 200 ಅಷ್ಟೇ. ನವೆಂಬರ್‌ನಿಂದ ಫೆಬ್ರವರಿವರೆಗೆ ಇಲ್ಲಿ ಸೂರ್ಯ ಉದಯಿಸುವುದಿಲ್ಲ. ಜನರ ಸಮಸ್ಯೆಗಳನ್ನು ಕಂಡು ಗ್ರಾಮದ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ ಹೊಸದೊಂದು ಅನ್ವೇಷಣೆ ಮಾಡಿದ್ದಾರೆ. ಇಂಜಿನಿಯರ್ ಗ್ರಾಮದ ಮೇಯರ್ ನೆರವಿನಿಂದ ವಿಗಲ್ಲೆನಾ ಗ್ರಾಮಕ್ಕೆ ಕೃತಕ ಸೂರ್ಯನನ್ನು ಸಿದ್ಧಪಡಿಸಿದ್ದಾರೆ.

2 /4

3 ತಿಂಗಳಿನಿಂದ ಈ ಗ್ರಾಮ ಕತ್ತಲಲ್ಲಿ ಮುಳುಗಿತ್ತು. ಇದರಿಂದಾಗಿ ಅಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಿತು. ಈ ಸಮಸ್ಯೆಗೆ ಗ್ರಾಮದವರೇ ಆಗಿದ್ದ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ ಪರಿಹಾರ ಕಂಡುಕೊಂಡು ಕೃತಕ ಸೂರ್ಯನನ್ನು ಸಿದ್ಧಪಡಿಸಿದ್ದಾರೆ. ಗ್ರಾಮದ ಮೇಯರ್ ಸಹಾಯದಿಂದ ಇಂಜಿನಿಯರ್ ಪರ್ವತಗಳ ಮೇಲ್ಭಾಗದಲ್ಲಿ 40 ಚದರ ಕಿ.ಮೀ ಅಳತೆಯ ಗಾಜಿನ ಕನ್ನಡಿಯನ್ನು ಸ್ಥಾಪಿಸಿದ್ದಾರೆ. ಇದರ ಮೇಲೆ ಬೀಳುವ ಸೂರ್ಯನ ಬೆಳಕು ಪ್ರತಿಫಲಿಸಿ ನೇರವಾಗಿ ಗ್ರಾಮದ ಮೇಲೆ ಬೀಳುವ ರೀತಿಯಲ್ಲಿ ಈ ಗಾಜಿನ ಕನ್ನಡಿಯನ್ನು ಇರಿಸಲಾಗಿತ್ತು.

3 /4

ಪರ್ವತದ ತುದಿಯಲ್ಲಿ ಅಳವಡಿಸಲಾಗಿರುವ ಈ ಗಾಜಿನ ಕನ್ನಡಿಯು ದಿನಕ್ಕೆ 6 ಗಂಟೆಗಳ ಕಾಲ ಗ್ರಾಮವನ್ನು ಬೆಳಗಿಸುತ್ತದೆ. ಗಾಜಿನ ಕಾರಣ ಇದು ಸುಮಾರು 1.1 ಟನ್ ತೂಕವಿದ್ದು, ಅದರ ಬೆಲೆ 1 ಲಕ್ಷ ಯುರೋಗಳಾಗಿವೆ. ಈ ಕಾಮಗಾರಿಯಲ್ಲಿ ತಂತ್ರಜ್ಞಾನದ ಸಹಾಯವನ್ನೂ ತೆಗೆದುಕೊಳ್ಳಲಾಗಿದ್ದು, ಪರ್ವತದಲ್ಲಿ ಅಳವಡಿಸಿರುವ ಕನ್ನಡಿಗಳನ್ನು ಕಂಪ್ಯೂಟರ್ ಮೂಲಕ ನಿಯಂತ್ರಿಸಲಾಗುತ್ತದೆ. ತನ್ನದೇ ಆದ ಕೃತಕ ಸೂರ್ಯನನ್ನು ಸೃಷ್ಟಿಸಿದ ಬಳಿಕ ಇಟಲಿಯ ಈ ಗ್ರಾಮವು ಪ್ರಪಂಚದಾದ್ಯಂತ ಚರ್ಚೆಯ ಕೇಂದ್ರವಾಯಿತು. ಈಗ ಪ್ರವಾಸಿಗರು ಸಹ ಕೃತಕ ಸೂರ್ಯನನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಬರುತ್ತಿದ್ದಾರೆ.

4 /4

ವಿಗಲ್ಲೆನಾ ಗ್ರಾಮದ ಮೇಯರ್ ಪಿಯರ್‌ಫ್ರಾಂಕೊ ಮದಲಿ(Pierfranco Madali) ಹೇಳಿರುವ ಪ್ರಕಾರ, ‘ಈ ಕೃತಕ ಸೂರ್ಯನ ಕಲ್ಪನೆಯು ವಿಜ್ಞಾನಿಯದ್ದಲ್ಲ, ಬದಲಿಗೆ ಇದು ಸಾಮಾನ್ಯ ವ್ಯಕ್ತಿಯದ್ದು. ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ಜನರು ತಮ್ಮ ಮನೆಗಳಲ್ಲಿ ಉಳಿಯಲು ಪ್ರಾರಂಭಿಸಿದಾಗ ಈ ಕಲ್ಪನೆಯು ಮುನ್ನೆಲೆಗೆ ಬಂದಿತು. ಚಳಿ ಮತ್ತು ಕತ್ತಲೆಯಿಂದಾಗಿ ನಗರವನ್ನು ಬಂದ್ ಮಾಡಲಾಗಿತ್ತು. ಇದಾದ ಬಳಿಕ ಸುಮಾರು 87 ಲಕ್ಷ ರೂ.ವೆಚ್ಚದಲ್ಲಿ ಕೃತಕ ಸೂರ್ಯ ಸಿದ್ಧಪಡಿಸಲಾಗಿದೆ. ಈಗ ಹಳ್ಳಿಗೆ ಚಳಿಗಾಲದಲ್ಲೂ ಸೂರ್ಯನ ಬೆಳಕು ಸಿಗುತ್ತದೆ’ ಅಂತಾ ಅವರು ಹೇಳಿದ್ದಾರೆ.