OMG..! ಮಾನವನ ಮೀಸೆಯಿಂದ ಈ ಸೂಟ್ ಸಿದ್ಧಗೊಂಡಿದೆಯಂತೆ! ಇಲ್ಲಿದೆ Mustache Suit Viral Video

ಪೊಲಿಟಿಕ್ಸ್ ಬ್ರ್ಯಾಂಡ್ (Politix) ಮೆಲ್ಬೋರ್ನ್ ಮೂಲದ ದೃಶ್ಯ ಕಲಾವಿದೆ ಪಮೇಲಾ ಕ್ಲೀಮನ್-ಪಾಸ್ಸಿ (Pamela Kleeman-Passi) ಅವರ ಸಹಯೋಗದೊಂದಿಗೆ ಈ ವಿಶಿಷ್ಟ ಸೂಟ್ ಅನ್ನು ಸಿದ್ಧಪಡಿಸಿದೆ. ಮೀಸೆಯಿಂದ ತಯಾರಿಸಲಾಗಿರುವ ಈ ಸೂಟ್ ಅನ್ನು ಮೂವೆಂಬರ್ (Movember) ಎಂಬ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದೆ. 

Written by - Nitin Tabib | Last Updated : Nov 21, 2021, 10:12 PM IST
  • ಆಸ್ಟ್ರೇಲಿಯಾದ ಮೆನ್ಸ್ ವೇರ್ ಕಂಪನಿಯೊಂದು ವಿಶಿಷ್ಟವಾದ ಸೂಟ್ ಅನ್ನು ತಯಾರಿಸಿದೆ.
  • 'ಮೂವೆಂಬರ್' ಸಮಾರಂಭದಲ್ಲಿ ಈ ಮೀಸೆ ಸೂಟ್ ಬಿಡುಗಡೆ ಮಾಡಲಾಗಿದೆ.
  • ಪುರುಷರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ
OMG..! ಮಾನವನ ಮೀಸೆಯಿಂದ ಈ ಸೂಟ್ ಸಿದ್ಧಗೊಂಡಿದೆಯಂತೆ!  ಇಲ್ಲಿದೆ Mustache Suit Viral Video title=
Mustache Suit Video (Video Grab)

Mustache Suit Video: ನೀವು ಪ್ರಾಣಿಗಳ ತುಪ್ಪಳದಿಂದ ಮಾಡಿದ ಬಹಳಷ್ಟು ಬಟ್ಟೆಗಳನ್ನು ಧರಿಸಿರಬಹುಡು. ವಿವಿಧ ಪ್ರಾಣಿಗಳ ತುಪ್ಪಳವನ್ನು ಹೇಗೆ ಪ್ರತ್ಯೇಕಿಸುವುದು  ಎಂಬುದರ ಕುರಿತು ತಿಳಿದಿರುವ ಅನೇಕ ಜನರಿದ್ದಾರೆ. ಹೀಗಿರುವಾಗ ಮನುಷ್ಯರ ಮೀಸೆಯಿಂದ (Bizarre Outfits) ತಯಾರಿಸಲಾದ ಬಟ್ಟೆ ಬಗ್ಗೆ ತಿಳಿದರೆ ನಿಮಗೂ ಆಶ್ಚರ್ಯಚಕಿತರಾಗುವಿರಿ

ಆಸ್ಟ್ರೇಲಿಯಾದ ಮೆನ್ಸ್ ವೆಯರ್ ಕಂಪನಿ ಇದನ್ನು ತಯಾರಿಸಿದೆ  (Worlds First Mustache Suit)
ಇದು ತುಂಬಾ ವಿಲಕ್ಷಣ ಸಂಗತಿಯಾದರೂ ಕೂಡ ನಿಜ. ಆಸ್ಟ್ರೇಲಿಯಾದ ಮೆನ್ಸ್ ವೆಯರ್ ಕಂಪನಿಯು ಪುರುಷರ ಮೀಸೆ ಕೂದಲಿನಿಂದ ಮಾಡಿದ ಸೂಟ್ (Suit Made of Men’s Mustache Hair) ಅನ್ನು ಸಿದ್ದಪಡಿಸಿದೆ. ಮೀಸೆ ಕೂದಲಿನಿಂದ ಸೂಟ್ ತಯಾರಿಸುವ ಈ ಕಂಪನಿಯ ಹೆಸರು ಪಾಲಿಟಿಕ್ಸ್ ಮೆನ್ಸ್ ವೇರ್ ಬ್ರಾಂಡ್ ( Politix Menswear Brand).

ಇದನ್ನೂ ಓದಿ-ಈ ದೇಶದಲ್ಲಿ ಸ್ಥೂಲಕಾಯದ ಯುವತಿಯರಿಗೆ ಫುಲ್ ಡಿಮಾಂಡ್, ನೀಳಕಾಯದ ವಧು ಅಶುಭ ಅಂತೆ

ಪೊಲಿಟಿಕ್ಸ್ ( Politix) ಬ್ರ್ಯಾಂಡ್ ಈ ವಿಶಿಷ್ಟವಾದ ಸೂಟ್ ಅನ್ನು ಸಿದ್ಧಪಡಿಸಿದೆ. ಮೆಲ್ಬೋರ್ನ್ ಮೂಲದ ವಿಷ್ಯುವಲ್ ಆರ್ಟಿಸ್ಟ್  ಪಮೇಲಾ ಕ್ಲೀಮನ್-ಪಾಸ್ಸಿ (Pamela Kleeman-Passi) ಅವರೊಂದಿಗೆ ಸೇರಿಕೊಂಡು ಇದನ್ನು ಸಿದ್ಧಪಡಿಸಲಾಗಿದೆ. ಈ ಸೂಟ್ ಅನ್ನು ಮೂವೆಂಬರ್ (Movember) ಎಂಬ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದೆ ಇದು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆಯುವ ಸಮಾರಂಭ. ಈ ಘಟನೆಯ ಸಮಾರಂಭದಲ್ಲಿ ವಿಶ್ವಾದ್ಯಂತದ ಪುರುಷರಿಗೆ ತಮ್ಮ ಮೀಸೆಯನ್ನು ಬೆಳೆಸಲು ವಿನಂತಿಸಲಾಗುತದೆ. ವಾಸ್ತವವಾಗಿ, ಪುರುಷರಲ್ಲಿ ಸಂಭವಿಸುವ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಲಾಗುತ್ತದೆ.

ಇದನ್ನೂ ಓದಿ-OMG! ನಾಲಿಗೆಯಿಂದ ತನ್ನ ಹಣೆಯನ್ನೇ ಮುಟ್ಟಿಸೋ ವ್ಯಕ್ತಿ ಬಗ್ಗೆ ಗೊತ್ತಾ?

ಮೀಸೆ ಕೂದಲಿನ ಬಳಕೆ (Mustache Suit Viral Video)
ಪಾಲಿಟಿಕ್ಸ್ ಬ್ರಾಂಡ್ ಈ ಸೂಟ್ (Mustache Suit) ಅನ್ನು ಮಾನವನ  ಮೀಸೆಯ ಕೂದಲಿನಿಂದ ತಯಾರಿಸಲಾಗಿದೆ. ಅನೇಕ ಜನರು ಈ ಸೂಟ್ ಅನ್ನು ವಿಚಿತ್ರವಾಗಿ ಮತ್ತು ನೋಡಲು ಅಸಹ್ಯಕರವಾಗಿ ಕಾಣುತ್ತಾರೆ. ಈ ಸೂಟ್‌ಗೆ ಮೊ ಹೇರ್ ( Mo-Hair Suit) ಸೂಟ್ ಎಂದು ಹೆಸರಿಸಲಾಗಿದೆ. ಪಮೇಲಾ ಕ್ಲೀಮನ್-ಪಾಸ್ಸಿ ಈ ಸೂಟ್ ಮಾಡಲು ತುಂಬಾ ಶ್ರಮಪಟ್ಟಿದ್ದಾರೆ. ಅವರು ವಿವಿಧ ಸಲೂನ್‌ಗಳಿಂದ ಮೀಸೆ ಕೂದಲನ್ನು ಸಂಗ್ರಹಿಸಿದ್ದಾರೆ. ಈ ಪ್ರಾಜೆಕ್ಟ್ ಗಾಗಿ ಜನರು ತಮ್ಮ ಮೀಸೆ ಕತ್ತರಿಸಿದ ನಂತರ ಕೂದಲುಗಳನ್ನು ಪೌಚ್ ನಲ್ಲಿ  ಕಳುಹಿಸುತ್ತಿದ್ದರು. ಪಮೇಲಾ ಅವರ ಪತಿ ಪ್ರೊಟೆಸ್ಟ್ ಕ್ಯಾನ್ಸರ್‌ನಿಂದ ನಿಧನರಾಗಿದ್ದರು ಎಂಬುದು ಇಲ್ಲಿ ಗಮನಾರ್ಹ. ಇದರ ನಂತರ, ಅವರು ಪುರುಷರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿದ್ದಾರೆ. 

ಇದನ್ನೂ ಓದಿ-Viral: ಕುಡಿದ ಅಮಲಿನಲ್ಲಿ ಜೀವಂತ ಹಾವು ನುಂಗಿ ವ್ಯಕ್ತಿ ಸಾವು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News