ನೀವು ದ್ವಿಚಕ್ರ ವಾಹನ ಖರೀದಿಸಲು ಯೋಚಿಸುತ್ತಿದ್ದೀರಾ?: ಇಲ್ಲಿವೆ ನೋಡಿ ಟಾಪ್ 5 ಸ್ಕೂಟರ್

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಹಾಗೂ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಿದೆ.

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಹಾಗೂ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಿದೆ. ಇಂತಹ ಸ್ಥಿತಿಯಲ್ಲಿ 4 ಚಕ್ರದ ವಾಹನಗಳು ಮಾತ್ರವಲ್ಲದೆ ದ್ವಿಚಕ್ರ ವಾಹನಗಳ ಎಲೆಕ್ಟ್ರಿಕ್ ವಾಹನಗಳಿಗೂ ಸಾಕಷ್ಟು ಬೇಡಿಕೆಯಿದೆ. ನೀವೂ ಕಡಿಮೆ ಬೆಲೆಯಲ್ಲಿ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸಿದ್ದರೆ ಈ ಟಾಪ್ ಸ್ಕೂಟರ್‌ಗಳ ಬಗ್ಗೆ ತಿಳಿದುಕೊಳ್ಳಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಓಲಾ ಇತ್ತೀಚೆಗೆ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ. Ola S1 ಮತ್ತು Ola S1 Pro ಎರಡು ವಿಭಿನ್ನ ಮಾದರಿಗಳನ್ನು ಪರಿಚಯಿಸಿದೆ. Ola S1 121 ಕಿಮೀ ವ್ಯಾಪ್ತಿಯೊಂದಿಗೆ ಬರಲಿದೆ, ಆದರೆ Ola S1 Pro 181 ಕಿಮೀ ವ್ಯಾಪ್ತಿಯೊಂದಿಗೆ ಬರಲಿದೆ. ಎರಡೂ ಮಾದರಿಗಳು ಪ್ರಾಕ್ಸಿಮಿಟಿ ಅನ್‌ಲಾಕ್, ಡಿಜಿಟಲ್ ಡ್ಯಾಶ್‌ಬೋರ್ಡ್, ವಾಯ್ಸ್ ಕಂಟ್ರೋಲ್, ಮಲ್ಟಿಪಲ್ ಪ್ರೊಫೈಲ್‌ಗಳಂತಹ ಅನೇಕ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. Ola S1 ಬೆಲೆ 99,999 ರೂ. ಆಗಿದ್ದರೆ, Ola S1 Proನ ಆರಂಭಿಕ ಬೆಲೆ 1,29,999 ರೂ. ಇದೆ.    

2 /5

ಇ-ಸ್ಕೂಟರ್ ಚೇತಕ್ 2 ರೂಪಾಂತರಗಳಲ್ಲಿ ಬರುತ್ತದೆ. ಅರ್ಬನ್ ಮತ್ತು ಪ್ರೀಮಿಯಂ. ಪ್ರೀಮಿಯಂ ಮಾದರಿಯು ಮುಂಭಾಗದ ಡಿಸ್ಕ್ ಅನ್ನು ಹೊಂದಿದ್ದರೆ, ಅರ್ಬನ್ ಮುಂಭಾಗದ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಬಜಾಜ್ ಚೇತಕ್ ಎಲ್ಇಡಿ ಹೆಡ್ಲ್ಯಾಂಪ್ ಗಳು ಮತ್ತು ಟರ್ನ್ ಸಿಗ್ನಲ್ ಗಳು, ಡಿಜಿಟಲ್ ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಬ್ಲೂಟೂತ್ ನಂತಹ ಸ್ಮಾರ್ಟ್ಫೋನ್ ಸಂಪರ್ಕ ಆಯ್ಕೆಗಳೊಂದಿಗೆ ಬರುತ್ತದೆ. 60.3Ah Lithium-Ion ಬ್ಯಾಟರಿಯೊಂದಿಗೆ ಬರುವ ಈ ಸ್ಕೂಟರ್ 95km/h ವೇಗ ನೀಡುತ್ತದೆ. ಇದನ್ನು ಕೇವಲ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

3 /5

Revolt RV400 ಸ್ಕೂಟರ್ 3000 W ಮಿಡ್ ಡ್ರೈವ್ ಮೋಟರ್‌ನಿಂದ ಚಾಲಿತವಾಗಿದೆ. ಇದರ 72 V, 3.24 kWh ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. Revolt RV400ನ ಬ್ಯಾಟರಿ ವಾರಂಟಿಯು 6 ವರ್ಷಗಳು ಮತ್ತು 1,00,000 ಕಿ.ಮೀ(Whichever is Earlier). ಈ ಎಲೆಕ್ಟ್ರಿಕ್ ಸ್ಕೂಟರ್ 85 ಕಿಮೀ/ಚಾರ್ಜ್‌ನಲ್ಲಿ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. Revolt RV400ನ ಆರಂಭಿಕ ಬೆಲೆ 90,799 ರೂ. ಇದೆ.

4 /5

iQube TVSನ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದ್ದು, ಭಾರತದಲ್ಲಿ 1,00,752 ರೂ. ಆರಂಭಿಕ ಬೆಲೆ ಹೊಂದಿದೆ. TVS iQube 3000 W ಶಕ್ತಿಯನ್ನು ಉತ್ಪಾದಿಸುತ್ತದೆ. ಟಿವಿಎಸ್ ಐಕ್ಯೂಬ್ ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್‌ನೊಂದಿಗೆ ಬರುತ್ತದೆ. ಎಲೆಕ್ಟ್ರಾನಿಕ್ ಸಾಧನಗಳನ್ನು ಸಂಪರ್ಕಿಸಲು ಇದು ಕೆಳ ಸೀಟಿನ USB ಚಾರ್ಜಿಂಗ್ ಸಾಕೆಟ್ ಅನ್ನು ಹೊಂದಿದೆ. ಟಿವಿಎಸ್ ಐಕ್ಯೂಬ್ ಚಾರ್ಜ್ ಮಾಡಲು 5 ಗಂಟೆ ತೆಗೆದುಕೊಳ್ಳುತ್ತದೆ. ಇದು ಸ್ಪೋರ್ಟ್ ಮೋಡ್‌ನಲ್ಲಿ 78kmph ಗರಿಷ್ಠ ವೇಗವನ್ನು ಸಾಧಿಸಬಹುದು ಆದರೆ 0-40kmph ವೇಗವರ್ಧನೆಯ ಸಮಯ 4.2 ಸೆಕೆಂಡುಗಳಾಗಿರುತ್ತದೆ.

5 /5

Ather 450X ಸ್ಕೂಟರ್ 3.5 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಕ್ರಮಿಸುತ್ತದೆ. ಇದು 1.3GHz ಸ್ನಾಪ್‌ಡ್ರಾಗನ್ ಪ್ರೊಸೆಸರ್‌ನಿಂದ ಚಾಲಿತವಾಗಿರುವ 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಅನ್ನು ಸಹ ಹೊಂದಿದೆ. ಆಂಡ್ರಾಯ್ಡ್ ಓಪನ್ ಸೋರ್ಸ್ ಆಪರೇಟಿಂಗ್ ಸಿಸ್ಟಂನಲ್ಲಿ ನಿರ್ಮಿಸಲಾಗಿದೆ. ಈ ಸ್ಕೂಟರ್ ಬ್ಲೂಟೂತ್ ಮತ್ತು 4G LTE ನಂತಹ ಸಂಪರ್ಕ ಆಯ್ಕೆಗಳನ್ನು ಸಹ ನೀಡುತ್ತದೆ. Ather 450X ನ ಆರಂಭಿಕ ಬೆಲೆ 1,13,416 ರೂ. ಇದೆ.