/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಚೆನ್ನೈ: ಚೆನ್ನೈನಲ್ಲಿ ಪ್ರತಿಯೊಬ್ಬರನ್ನೂ ದಿಗ್ಭ್ರಮೆಗೊಳಿಸುವ ಆತ್ಮಹತ್ಯೆ ಪ್ರಕರಣ(TamilNadu Student Suicide)ವೊಂದು ನಡೆದಿದೆ. ಅಪ್ರಾಪ್ತ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್​ನೋಟ್ ಓದಿದರೆ ನಿಮಗೆ ನಿಜಕ್ಕೂ ಕಣ್ಣೀರು ಬರುತ್ತದೆ. ತಾಯಿಯ ಗರ್ಭ ಮತ್ತು ಸ್ಮಶಾನ ಇವು ಎರಡೇ ಸುರಕ್ಷಿತ ಸ್ಥಳಗಳು ಎಂದು ಡೆತ್​ನೋಟ್ ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮಿಳುನಾಡಿನ ಚೆನ್ನೈ(Chennai)ನ ಪೂನಂ ಪ್ರದೇಶದಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ.

‘ಶಿಕ್ಷಕರನ್ನಾಗಲಿ, ಸಂಬಂಧಿಕರನ್ನಾಗಲಿ ನಂಬಬೇಡಿ... ಹೆಣ್ಣುಮಕ್ಕಳು ತಾಯಿಯ ಗರ್ಭ ಅಥವಾ ಸಮಾಧಿಯಲ್ಲಿ ಮಾತ್ರ ಸುರಕ್ಷಿತವಾಗಿರುತ್ತಾರೆ’ ಎಂದು ಬರೆದಿರುವ ವಿದ್ಯಾರ್ಥಿನಿ ತನ್ನ ಆತ್ಮಹತ್ಯೆ ಪತ್ರದ ಆರಂಭದಲ್ಲಿ ‘ಲೈಂಗಿಕ ಕಿರುಕುಳ ನಿಲ್ಲಿಸಿ’ ಎಂದು ಉಲ್ಲೇಖಿಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ 4 ರಸ್ತೆಯಲ್ಲಿ ಒಂದು ಮೃತದೇಹ.. ಸಾವಿನ ಸುದ್ದಿ ತಿಳಿಸಲು ಮನೆಗೆ ಹೋದವರಿಗೆ ಕಾದಿತ್ತು ಶಾಕ್!

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ!

ಪ್ರತಿದಿನವೂ ತಪ್ಪದೇ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಈ ಸೂಸೈಡ್ ನೋಟ್(Chennai Girl Student Suicide) ಆಕೆಯ ಕುಟುಂಬಸ್ಥರು ಮತ್ತು ಪೊಲೀಸರಿಗೆ ಹಲವು ಬಗೆಹರಿಯದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿದ್ಯಾರ್ಥಿನಿ ಆತ್ಮಹತ್ಯೆಯಂತಹ ಭಯಾನಕ ಹೆಜ್ಜೆ ಇಟ್ಟಿದ್ದು ಏಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ ಲೈಂಗಿಕ ಕಿರುಕುಳ ತಾಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ತಾಯಿ ಕೆಲಸಕ್ಕಾಗಿ ಮನೆಯಿಂದ ಹೊರಹೋದಾಗ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಟೆರೇಸ್ ಮೇಲೆ ವಿದ್ಯಾರ್ಥಿನಿಯ ಶವ ಪತ್ತೆ

ಪೊಲೀಸರ ಪ್ರಕಾರ, 11ನೇ ತರಗತಿಯ ವಿದ್ಯಾರ್ಥಿನಿ ತನ್ನ ಹೆತ್ತವರೊಂದಿಗೆ ಚೆನ್ನೈ ಹೊರವಲಯದಲ್ಲಿ ವಾಸಿಸುತ್ತಿದ್ದಳು. ಶನಿವಾರ ಅವರ ಮೃತದೇಹ ಮನೆಯ ಮೇಲ್ಛಾವಣಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ವಿದ್ಯಾರ್ಥಿನಿಯ ಬರೆದಿರುವ  ಡೆತ್​ನೋಟ್ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಡೆತ್‌ನೋಟ್‌ನಲ್ಲಿ ಭಾವುಕ ಸಾಲುಗಳನ್ನು ವಿದ್ಯಾರ್ಥಿನಿ ಬರೆದಿದ್ದಾಳೆ. ಈ ಜಗತ್ತಿನಲ್ಲಿ ತಾಯಿಯ ಗರ್ಭ ಹಾಗೂ ಸ್ಮಶಾನವನ್ನು ಬಿಟ್ಟರೆ ಬೇರೆ ಯಾವ ಸ್ಥಳವೂ ಹೆಣ್ಣಿಗೆ ಸುರಕ್ಷಿತವಲ್ಲ ಎಂದು ಬರೆದಿದ್ದಾಳೆ. ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Omicron Variant: ಉಡುಪಿಯಲ್ಲಿ 2 ಒಮಿಕ್ರಾನ್ ಕೇಸ್ ಪತ್ತೆ, ಆತಂಕ ಬೇಡವೆಂದ ಡಿಸಿ

‘ಲೈಂಗಿಕ ಕಿರುಕುಳ ನಿಲ್ಲಿಸಿ ನನಗೆ ನ್ಯಾಯ ಕೊಡಿಸಿ’

ವಿದ್ಯಾರ್ಥಿನಿ ಆತ್ಮಹತ್ಯೆ ಪತ್ರದಲ್ಲಿ ಹೆಚ್ಚಿನ ವಿಷಯಗಳನ್ನು ಬರೆದಿದ್ದಾಳೆ. ‘ಹೆಣ್ಣು ಮಕ್ಕಳಿಗೆ ಶಾಲೆ ಸುರಕ್ಷಿತವಾಗಿಲ್ಲ ಮತ್ತು ಶಿಕ್ಷಕರನ್ನು ನಂಬಲು ಸಾಧ್ಯವಿಲ್ಲ. ನನ್ನ ಕನಸಿನಲ್ಲಿಯೂ ಭಯಾನಕ ದೃಶ್ಯಗಳು ಕಣ್ಮುಂದೆ ಬರುತ್ತಿದ್ದವು. ಮಾನಸಿಕ ಕಿರುಕುಳದಿಂದ ಓದಲೂ ಆಗಲಿಲ್ಲ, ನಿದ್ದೆಯೂ ಬರುತ್ತಿರಲಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಮತ್ತು ಪುತ್ರರಿಗೆ ಹೆಣ್ಣುಮಕ್ಕಳನ್ನು ಗೌರವಿಸಲು ಕಲಿಸಬೇಕು. ‘ಲೈಂಗಿಕ ಕಿರುಕುಳ(Sexual Harassment)ನಿಲ್ಲಿಸಿ ನನಗೆ ನ್ಯಾಯ ಕೊಡಿಸಿ’ ಎಂದು ಬರೆದಿದ್ದಾಳೆ.

ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಗೆ ಸಂಬಂಧಿಕರಾಗಲಿ, ತರಗತಿಯವರಾಗಲಿ ನೆರವಿಗೆ ಬಂದಿರಲಿಲ್ಲ. ಇದರಿಂದ ಮನನೊಂದ ವಿದ್ಯಾರ್ಥಿನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
TamilNadu Student suicide Girls Only Safe In Mother s Womb or Grave
News Source: 
Home Title: 

ಟೆರೇಸ್ ಮೇಲೆ ವಿದ್ಯಾರ್ಥಿನಿಯ ಶವ ಪತ್ತೆ: ಡೆತ್​ನೋಟ್​ನಲ್ಲಿ ಏನಿದೆ ಗೊತ್ತಾ..?

ಟೆರೇಸ್ ಮೇಲೆ ವಿದ್ಯಾರ್ಥಿನಿಯ ಶವ ಪತ್ತೆ: ಡೆತ್​ನೋಟ್​ನಲ್ಲಿ ಏನಿದೆ ಗೊತ್ತಾ..?
Caption: 
‘ಲೈಂಗಿಕ ಕಿರುಕುಳ ನಿಲ್ಲಿಸಿ ನನಗೆ ನ್ಯಾಯ ಕೊಡಿಸಿ’
Yes
Is Blog?: 
No
Tags: 
Facebook Instant Article: 
Yes
Highlights: 

‘ಶಿಕ್ಷಕರನ್ನಾಗಲಿ, ಸಂಬಂಧಿಕರನ್ನಾಗಲಿ ನಂಬಬೇಡಿ... ಲೈಂಗಿಕ ಕಿರುಕುಳ ನಿಲ್ಲಿಸಿ..’  

ಹೆಣ್ಣುಮಕ್ಕಳು ತಾಯಿಯ ಗರ್ಭ ಅಥವಾ ಸಮಾಧಿಯಲ್ಲಿ ಮಾತ್ರ ಸುರಕ್ಷಿತವಾಗಿರುತ್ತಾರೆ

ಕಣ್ಣೀರು ತರಿಸುತ್ತೆ ಲೈಂಗಿಕ ಕಿರುಕುಳಕ್ಕೆ ಬಲಿಯಾದ 11ನೇ ತರಗತಿಯ ವಿದ್ಯಾರ್ಥಿನಿ ಡೇತ್ ನೋಟ್

Mobile Title: 
ಟೆರೇಸ್ ಮೇಲೆ ವಿದ್ಯಾರ್ಥಿನಿಯ ಶವ ಪತ್ತೆ: ಡೆತ್​ನೋಟ್​ನಲ್ಲಿ ಏನಿದೆ ಗೊತ್ತಾ..?
Zee Kannada News Desk
Publish Later: 
No
Publish At: 
Monday, December 20, 2021 - 20:19
Created By: 
Puttaraj K Alur
Updated By: 
Puttaraj K Alur
Published By: 
Puttaraj K Alur
Request Count: 
2
Is Breaking News: 
No