Horrible Video: ಹಾವಿನಿಂದ ಸ್ಕಿಪ್ಪಿಂಗ್​ ಆಡಿದ ಯುವಕ.. ಸ್ವಲ್ಪ ಯಾಮಾರಿದ್ರೂ ಇತ್ತು ಪ್ರಾಣಕ್ಕೆ ಕಂಟಕ!

Viral Video: ಹಾವನ್ನೆ ಹಗ್ಗ ಮಾಡಿಕೊಂಡು ಸ್ಕಿಪ್ಪಿಂಗ್​ ಮಾಡಿದ ಯುವಕನ ವಿರುದ್ಧ ಪ್ರಾಣಿದಯಾ ಸಂಘದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Edited by - Zee Kannada News Desk | Last Updated : Dec 20, 2021, 05:13 PM IST
  • ಹಾವನ್ನೆ ಹಗ್ಗ ಮಾಡಿಕೊಂಡು ಸ್ಕಿಪ್ಪಿಂಗ್​ ಮಾಡಿದ ಯುವಕ
  • ಯುವಕನ ವಿರುದ್ಧ ಪ್ರಾಣಿದಯಾ ಸಂಘದವರು ಅಸಮಾಧಾನ
  • ಹಾವಿನಿಂದ ಸ್ಕಿಪ್ಪಿಂಗ್​​ ಮಾಡುತ್ತಿರುವ ವಿಡಿಯೋ ವೈರಲ್
Horrible Video: ಹಾವಿನಿಂದ ಸ್ಕಿಪ್ಪಿಂಗ್​ ಆಡಿದ ಯುವಕ.. ಸ್ವಲ್ಪ ಯಾಮಾರಿದ್ರೂ ಇತ್ತು ಪ್ರಾಣಕ್ಕೆ ಕಂಟಕ! title=
ಹಾವಿನೊಂದಿಗೆ ಹುಡುಗಾಟ

ನವದೆಹಲಿ: ಇಲ್ಲೊಬ್ಬ ಯುವಕ ಹಾವಿನೊಂದಿಗೆ ಹುಡುಗಾಟವಾಡಿದ್ದಾನೆ. ಹಾವನ್ನೆ ಹಗ್ಗ ಮಾಡಿಕೊಂಡು ಸ್ಕಿಪ್ಪಿಂಗ್​ ಆಡಿದ್ದಾನೆ (Boy played skipping with a snake). ಈತ ಈ ವಿಷ ಜಂತುವಿನ ಜತೆಗೆ ಆಡಿದ ಆಟದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ. 

ಹಾವಿನಿಂದ ಸ್ಕಿಪ್ಪಿಂಗ್​​ ಮಾಡುತ್ತಿರುವ ವಿಡಿಯೋ (skipping with a snake) ಇದಾಗಿದೆ. ಮುಂಬೈ ಸಮೀಪದ ಬಾಳ್ಕರ್​ ಎಂಬ ಪ್ರದೇಶದಲ್ಲಿ ಈ ವಿಡಿಯೋ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಉದ್ದದ ಹಾವೊಂದನ್ನು ಕೈಯಲ್ಲಿ ಹಿಡಿದ ಯುವಕನೊಬ್ಬ ರಸ್ತೆಯ ಮೇಲೆ ಸ್ಕಿಪ್ಪಿಂಗ್​ ಮಾದಿದ್ದಾನೆ. ಇದನ್ನು ಅವನ್ ಜೊತೆಗಿದ್ದವರು ವಿಡಿಯೋ ಮಾಡಿದ್ದಾರೆ. 

ಈ ವಿಡಿಯೋ ಇದ್ದಾಗ ಇಂಟರ್ನೆಟ್ ನಲ್ಲಿ ವೈರಲ್ (Viral Video) ಆಗುತ್ತಿದೆ. ಸ್ಕಿಪ್ಪಿಂಗ್​ ಮಾಡಿದ ಬಳಿಕ ಯುವಕ ಹಾವನ್ನು ಕಸದ ರಾಶಿಯಲ್ಲಿ ಬಿಸಾಡಿದ್ದಾನೆ.

 

 

ವಿಷ ಸರ್ಪದ ಜತೆ ಆಟವಾಡಿದ ಯುವಕನ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಅದು ಸತ್ತ ಹಾವಾಗಿದ್ದ ಕಾರಣ ಯುವಕನ ಜೀವ ಬಚಾವ್ ಆಗಿದೆ. ಆದರೆ ಹಾವನ್ನು ಯುವಕರೇ ಸಾಯಿಸಿ, ಸ್ಕಿಪ್ಪಿಂಗ್​ ಮಾಡಿದ್ದಾರಾ ಅಥವಾ ಮೊದಲೇ ಅತ್ತು ಹೂಗಿತ್ತಾ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಅನೇಕರು ಈ ಯುವಕನ ನಡೆಯನ್ನು ಟೀಕಿಸಿದ್ದಾರೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಯುವಕನ ಕೃತ್ಯದ ವಿರುದ್ಧ ಪ್ರಾಣಿ ದಯಾ ಸಂಘದವರು ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:  WATCH: ಅಟ್ಟಾಡಿಸಿಕೊಂಡು ಹೋಗಿ ವ್ಯಕ್ತಿಯ ಮೇಲೆ ದಾಳಿ ಮಾಡಿದ ಕಾಡಾನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News