South Africa vs India, 1st Test: ಹರಿಣಗಳ ನಾಡಿನಲ್ಲಿ ಅಬ್ಬರಿಸಿದ ಕನ್ನಡಿಗದ್ವಯರು ..!

ದಕ್ಷಿಣ ಆಫ್ರಿಕಾದಲ್ಲಿ ಆಡುವುದೆಂದರೆ ಅದು ನಿಜಕ್ಕೂ ಸವಾಲಿನ ಸಂಗತಿ ಎಂದೇ ಹೇಳಬೇಕು,ಇಂತಹ ಸಂದರ್ಭದಲ್ಲ್ಲಿ ಈಗ ಸೆಂಚುರಿಯನ್‌ನಲ್ಲಿರುವ ಸೂಪರ್‌ಸ್ಪೋರ್ಟ್ ಪಾರ್ಕ್ ನಲ್ಲಿ ಆರಂಭಿಕ ಆಟಗಾರರಾದ ಮಾಯಾಂಕ್ ಆಗರ್ವಾಲ್ ಮತ್ತು ಕೆ.ಎಲ್ ರಾಹುಲ್ ಅವರು ಶತಕದ ಜೊತೆಯಾಟವನ್ನು ಆಡಿದ್ದಾರೆ.

Last Updated : Dec 26, 2021, 05:02 PM IST
  • ಅಚ್ಚರಿ ಎಂದರೆ ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡವು ಇದುವರಗೆ ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ, ಆದ್ದರಿಂದ ಈಗ ಉತ್ತಮ ಬ್ಯಾಟಿಂಗ್ ಫಾರ್ಮ್ ನಲ್ಲಿರುವ ಭಾರತ ತಂಡವು ಈ ಸಾರಿಯಾದರೂ ಈ ಬರವನ್ನು ನಿಗಿಸುತ್ತಾ ಎನ್ನುವುದನ್ನು ನಾವು ನೋಡಬೇಕಾಗಿದೆ.
South Africa vs India, 1st Test: ಹರಿಣಗಳ ನಾಡಿನಲ್ಲಿ  ಅಬ್ಬರಿಸಿದ ಕನ್ನಡಿಗದ್ವಯರು ..! title=
Photo Courtesy: Twitter

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಆಡುವುದೆಂದರೆ ಅದು ನಿಜಕ್ಕೂ ಸವಾಲಿನ ಸಂಗತಿ ಎಂದೇ ಹೇಳಬೇಕು,ಇಂತಹ ಸಂದರ್ಭದಲ್ಲ್ಲಿ ಈಗ ಸೆಂಚುರಿಯನ್‌ನಲ್ಲಿರುವ ಸೂಪರ್‌ಸ್ಪೋರ್ಟ್ ಪಾರ್ಕ್ ನಲ್ಲಿ ಆರಂಭಿಕ ಆಟಗಾರರಾದ ಮಾಯಾಂಕ್ ಆಗರ್ವಾಲ್ ಮತ್ತು ಕೆ.ಎಲ್ ರಾಹುಲ್ ಅವರು ಶತಕದ ಜೊತೆಯಾಟವನ್ನು ಆಡಿದ್ದಾರೆ.

ಇದನ್ನೂ ಓದಿ: ಸ್ನ್ಯಾಕ್ಸ್ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ: ಐವರು ಸಾವು, 6 ಮಂದಿಗೆ ಗಾಯ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಈಗ ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ 39 ಹಾಗೂ ಮಾಯಾಂಕ್ ಅಗರ್ವಾಲ್ 56 ಅವರ ಬ್ಯಾಟಿಂಗ್ ನೆರವಿನಿಂದಾಗಿ ವಿಕೆಟ್ ನಷ್ಟವಿಲ್ಲದೆ 105 ರನ್ ಗಳಿಸಿದೆ.

ಇದನ್ನೂ ಓದಿ: Test Ride ಜಂಜಾಟವಿಲ್ಲ, RTOಗೆ ಭೇಟಿ ನೀಡುವ ಅಗತ್ಯವಿಲ್ಲ.. ಈ ಒಂದು ಪ್ರಮಾಣಪತ್ರ ಇದ್ದರೆ ಸಾಕು ಸಿಗುತ್ತೆ Driving License

ರಾಹುಲ್ ಮತ್ತು ಮಯಾಂಕ್ ಸೆಂಚುರಿಯನ್‌ನಲ್ಲಿ 50 ರನ್‌ಗಳ ಆರಂಭಿಕ ಜೊತೆಯಾಟವನ್ನು ದಾಖಲಿಸಿದಾಗ, ದಕ್ಷಿಣ ಆಫ್ರಿಕಾ ಸ್ವದೇಶಿ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದಾಗ ಅವರು ಹಾಗೆ ಮಾಡಿದ ಎರಡನೇ ಆರಂಭಿಕ ಜೋಡಿ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.2007ರಲ್ಲಿ ಕ್ರಿಸ್‌ ಗೇಲ್‌ ಮತ್ತು ಡ್ಯಾರೆನ್‌ ಗಂಗಾ ಆರಂಭಿಕ ವಿಕೆಟ್‌ಗೆ 98 ರನ್‌ಗಳ ಜೊತೆಯಾಟವಾಡಿ ಈ ಸಾಧನೆ ಮಾಡಿದ್ದರು.

ಅಚ್ಚರಿ ಎಂದರೆ ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡವು ಇದುವರಗೆ ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ, ಆದ್ದರಿಂದ ಈಗ ಉತ್ತಮ ಬ್ಯಾಟಿಂಗ್ ಫಾರ್ಮ್ ನಲ್ಲಿರುವ ಭಾರತ ತಂಡವು ಈ ಸಾರಿಯಾದರೂ ಈ ಬರವನ್ನು ನಿಗಿಸುತ್ತಾ ಎನ್ನುವುದನ್ನು ನಾವು ನೋಡಬೇಕಾಗಿದೆ.

ಇದನ್ನೂ ಓದಿ: WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News