ಸಿಡ್ನಿ: ಟೀ ವಿರಾಮದ ವೇಳೆ ಅಭಿಮಾನಿಗಳು ತಮ್ಮನ್ನು ಮತ್ತು ಬೆನ್ ಸ್ಟೋಕ್ಸ್ ರನ್ನು ಕೆಟ್ಟದಾಗಿ ನಿಂದಿಸಿದ್ದಾರೆಂದು ಇಂಗ್ಲೆಂಡ್(England) ಸ್ಟಾರ್ ಬ್ಯಾಟ್ಸ್ ಮನ್ ಜಾನಿ ಬೈರ್‌ಸ್ಟೋವ್ ಆರೋಪಿಸಿದ್ದಾರೆ. ಕೆಲವೊಮ್ಮೆ ಜನರು ಮಿತಿ ಮೀರಿ ವರ್ತಿಸುತ್ತಾರೆ. ಇದರಿಂದ ನಮಗೆ ತುಂಬಾ ನೋವಾಗಿದೆ ಅಂತಾ ಅವರು ಹೇಳಿದ್ದಾರೆ.
ಟೀ ವಿರಾಮದ ವೇಳೆ ನಿಂದಿಸಿದ ಪ್ರೇಕ್ಷಕರು
3ನೇ ದಿನದಾಟದ ಚಹಾ ವಿರಾಮ(Tea Break)ದ ವೇಳೆ ಬೆನ್ ಸ್ಟೋಕ್ಸ್ ಮತ್ತು ಜಾನಿ ಬೈರ್‌ಸ್ಟೋವ್ (Jonny Bairstow) ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುತ್ತಿದ್ದಾಗ ಕೆಲವು ಅಭಿಮಾನಿಗಳು ಅವರನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಅಭಿಮಾನಿಗಳು ಆಟಗಾರರನ್ನು ನಿಂದಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಪ್ರೇಕ್ಷಕರಿಂದ ನಿಂದನೆಗೊಳಗಾದ ಬೆನ್ ಸ್ಟೋಕ್ಸ್ ತಾಳ್ಮೆ ಕಳೆದುಕೊಂಡು ಸರಿಯಾಗಿ ವರ್ತಿಸಿ ಎಂದು ಮನವಿ ಮಾಡಿದ್ದಾರೆ.
The Sydney Test has been marred by crowd abuse for the second year in a row, with England stars Ben Stokes and Jonny Bairstow reacting angrily after being sledged on Friday. Read the full story: https://t.co/OkOsCV7vuW pic.twitter.com/4FdamS2BCA
— The Sydney Morning Herald (@smh) January 7, 2022
ಇದನ್ನೂ ಓದಿ: ಟೀಂ ಇಂಡಿಯಾ ಸೋಲಿನ ನಂತರ ಬದಲಾಯಿತು, ICC WTC ಪಾಯಿಂಟ್ಸ್ ಟೇಬಲ್!
ಮಿತಿ ಮೀರಿದ ವರ್ತನೆಗೆ ಬೇಸರ
ಈ ಬಗ್ಗೆ ಮಾತನಾಡಿರುವ ಜಾನಿ ಬೈರ್‌ಸ್ಟೋ(Jonny Bairstow) , ‘ಇದು ಒಳ್ಳೆಯದಲ್ಲ ಮತ್ತು ಇದರ ಅಗತ್ಯವಿಲ್ಲ. ನಾವು ಅಲ್ಲಿ ನಮ್ಮ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ. ಜನರು ಕ್ರಿಕೆಟ್ ಅನ್ನು ಆನಂದಿಸಬೇಕು. ದುರದೃಷ್ಟವಶಾತ್ ಕೆಲವೊಮ್ಮೆ ಕೆಲವು ಅಭಿಮಾನಿಗಳು ತಮ್ಮ ಮಿತಿಯನ್ನು ದಾಟುತ್ತಾರೆ. ಅದಕ್ಕಾಗಿಯೇ ಕೆಲವೊಮ್ಮೆ ಇದರ ವಿರುದ್ಧ ಧ್ವನಿ ಎತ್ತುವುದು ಅನಿವಾರ್ಯವಾಗುತ್ತದೆ. ಕ್ರಿಕೆಟ್ ಆಟವನ್ನು ಆನಂದಿಸುವ ಬದಲು ಕೆಲವರು ಮಿತಿ ಮೀತಿ ವರ್ತಿಸುವುದಕ್ಕೆ ನಮಗೆ ಬೇಸರವಾಗಿದೆ’ ಎಂದು ಹೇಳಿದ್ದಾರೆ.
ಸಿಡ್ನಿಯಲ್ಲಿ ಬೈರ್‌ಸ್ಟೋವ್-ಸ್ಟೋಕ್ಸ್ ಶಕ್ತಿ ಪ್ರದರ್ಶನ
ಸಿಡ್ನಿ ಟೆಸ್ಟ್ ನ 3 ನೇ ದಿನದಂದು ಜಾನಿ ಬೈರ್‌ಸ್ಟೋವ್ (113) ಮತ್ತು ಬೆನ್ ಸ್ಟೋಕ್ಸ್(Ben Stokes) (66) ತಮ್ಮ ಅದ್ಭುತ ಬ್ಯಾಟಿಂಗ್ ನಿಂದ ಶಕ್ತಿ ಪ್ರದರ್ಶಿಸಿದರು. ಆಸ್ಟ್ರೇಲಿಯಾ ಬೌಲರ್ ಗಳನ್ನು ಬೆಂಡೆತ್ತಿದ ಬೈರ್‌ಸ್ಟೋವ್ ತಮ್ಮ 7ನೇ ಟೆಸ್ಟ್ ಶತಕ ದಾಖಲಿಸಿ ಸಂಭ್ರಮಿಸಿದರು. ಮಾರ್ಕ್ ವುಡ್(39) ಕೂಡ ಉತ್ತಮ ಆಟವಾಡಿದರು.
ಇದನ್ನೂ ಓದಿ: IND vs SA : ರಾಹುಲ್ ನೀಡಿದ್ದ ಈ ಆಟಗಾರ ಕೊಹ್ಲಿಗೆ ಇಷ್ಟವಿಲ್ಲ, ಅದಕ್ಕೆ ಈಗ ಟೆಸ್ಟ್ ಸೀರೀಸ್ ನಿಂದ ಔಟ್!
4ನೇ ಟೆಸ್ಟ್ (Ashes 4th Test 2022)ನ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ(England vs Australia)134 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 416 ರನ್ ಗಳಿಗೆ ಡಿಕ್ಲೇರ್ ಘೋಷಿಸಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 79.1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದಕೊಂಡು 294 ರನ್ ಗಳಿಸಿ 122 ರನ್ ಗಳ ಹಿನ್ನೆಡೆ ಅನುಭವಿಸಿತು. ಸದ್ಯ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸೀಸ್ 40 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿದ್ದು, 243 ರನ್ ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.