ಬೆಂಗಳೂರು: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್.ಸಿ.ಬಿ) ನಿನ್ನೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಉಗಾಂಡ ರಾಷ್ಟ್ರದ ಮಹಿಳೆಯನ್ನ ವಶಕ್ಕೆ ಪಡೆದಿದ್ದು 1ಕೆ.ಜಿ ಮೆಥಾಂಫೆಟಮೈನ್ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: 200 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಡೈನೋಸಾರ್ ಹೆಜ್ಜೆಗುರುತು ಪತ್ತೆ
ಗುಪ್ತಚರ ವರದಿಯ ಆಧಾರದ ಮೇಲೆ ಬೆಂಗಳೂರು ವಿಭಾಗದ ಎನ್.ಸಿ.ಬಿ ಅಧಿಕಾರಿಗಳು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ.ಮಾದಕ ವಸ್ತುವನ್ನು ಔಷಧದ ರೂಪದಲ್ಲಿ ಪ್ಯಾಕ್ ಮಾಡಿ ಮತ್ತೆ ಪೊಲೀಸರ ಕಣ್ಣು ತಪ್ಪಿಸಲು ಎರಡು ಸೆರೆಲಾಕ್ ಬೇಬಿ ಫುಡ್ ಕಾರ್ಟನ್ ಬಾಕ್ಸ್ಗಳಲ್ಲಿ ಇಡಲಾಗಿತ್ತು. ಪ್ರತಿ ಪೆಟ್ಟಿಗೆ ಸುಮಾರು 500 ಗ್ರಾಂ ಮೆಥಾಂಫೆಟಮೈನ್ ಇಡಲಾಗಿತ್ತು,ಮಾದಕವಸ್ತುಗಳನ್ನು ಔಷಧ ಎಂದು ಮರೆಮಾಚಿ ದೆಹಲಿಯಿಂದ ರಾಜ್ಯದ ವಿವಿಧೆಡೆದೆ ವಿತರಣೆಗಾಗಿ ತರಲಾಗುತ್ತಿತ್ತು ಎಂದು ಎನ್ ಸಿ ಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಉಗಾಂಡಾದ ಪ್ರಜೆಯನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸುವ ಮೂಲಕ ಮುಖ್ಯವಾಗಿ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡ್ರಗ್ ಸಿಂಡಿಕೇಟ್ ಅನ್ನು ತಟಸ್ಥಗೊಳಿಸಿದಂತಾಗಿದೆ, ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ-Viral News: ಹೂಸು ಮಾರಾಟ ಮಾಡಿ ವಾರಕ್ಕೆ 38 ಲಕ್ಷ ಗಳಿಸುತ್ತಿದ್ದ ಟಿವಿ ಸೆಲೆಬ್ರಿಟಿ ಆಸ್ಪತ್ರೆಗೆ ದಾಖಲು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.