ನವದೆಹಲಿ: ಇದು ನಿಮಗೆ ಸ್ವಲ್ಪ ವಿಚಿತ್ರವೆನಿಸಿದರೂ ನಿಜ. ಹಣ ಸಂಪಾದಿಸುವ ಹುಮ್ಮಸ್ಸಿನಲ್ಲಿ ಜನರು ಯಾವೆಲ್ಲ ರೀತಿಯ ಹುಚ್ಚುತನದ ಕೆಲಸಗಳನ್ನು ಮಾಡುತ್ತಾರೆ ಅನ್ನೋದಕ್ಕೆ ಈಕೆಯೇ ನಿದರ್ಶನ. ಕೇವಲ ಹೂಸು(Farts) ಮಾರಾಟ ಮಾಡಿ ವಾರಕ್ಕೆ ಬರೋಬ್ಬರಿ 38 ಲಕ್ಷ ರೂ. ಗಳಿಸುತ್ತಿದ್ದ ಟಿವಿ ಸೆಲೆಬ್ರೆಟಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅರೇ.. ಹೂಸು ಕೂಡ ಮಾರಾಟ ಮಾಡಬಹುದಾ..? ಅಂತಾ ನಿಮಗೆ ಆಶ್ಚರ್ಯವಾಗುತ್ತಿದೆ ಅಲ್ಲವೇ..? ಇದನ್ನು ನೀವೂ ನಂಬಲೇಬೇಕು.
ಅಪರಿಚಿತರಿಗೆ ತಮ್ಮ ಹೂಸು ಮಾರಾಟ ಮಾಡುವ ಮೂಲಕ 31 ವರ್ಷದ ಕಿರುತೆರೆ ಸೆಲೆಬ್ರಿಟಿ ಸ್ಟೆಫನಿ ಮ್ಯಾಟಿಯೊ(Stephanie Matto) ಕೋಟಿಗಿಂತಲೂ ಹೆಚ್ಚು ಹಣ ಗಳಿಸಿದ್ದಾರೆ. ಆದರೆ ಇದೀಗ ಅವರು ಆಸ್ಪತ್ರೆ ಸೇರಿದ್ದಾರೆ. ‘ನಾನು ಅತಿಯಾಗಿ ಗ್ಯಾಸ್ ಬಿಡುತ್ತಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೇನೆ. ಹೀಗಾಗಿ ಹೂಸು ಬಿಡುವ ಈ ಕೆಲಸಕ್ಕೆ ನಾನು ನಿವೃತ್ತಿ ಘೋಷಿಸಿದ್ದೇನೆ. ನನಗೆ ಸ್ಟ್ರೋಕ್ ಆಗಿರಬಹುದು. ಇವು ನನ್ನ ಅಂತಿಮ ಕ್ಷಣಗಳು ಎಂದು ಭಾವಿಸಿದ್ದೇನೆ ಅಂತಾ ಸ್ಟೆಫನಿ ಮ್ಯಾಟಿಯೊ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕೋವಿಡ್ ನಿಯಮ ಪಾಲಿಸಲು ಟಾಪ್ ತೆಗೆದು ಮಾಸ್ಕ್ ಮಾಡಿಕೊಂಡ ಯುವತಿ
ಡೈಲಿ ಮೇಲ್ ವರದಿಯ ಪ್ರಕಾರ, ಮ್ಯಾಟಿಯೊ ತನ್ನ ಎದೆಯಲ್ಲಿ ತೀವ್ರತೆರನಾದ ನೋವು ಅನುಭವಿಸಿದ ಬಳಿಕ ಆಸ್ಪತ್ರೆಯ ತುರ್ತು ವಾರ್ಡ್ ಗೆ ದಾಖಲಾಗಿದ್ದಾಳೆ. ತನಗೆ ಹೃದಯಾಘಾತ(Heart Attack) ಅಥವಾ ಪಾರ್ಶ್ವವಾಯು ಇದೆ ಎಂದು ಆಕೆ ಭಾವಿಸಿದ್ದು, ಯಾವುದೇ ಕ್ಷಣದಲ್ಲಿ ನಾನು ಸಾಯಬಹುದು ಎಂದು ಹೇಳಿಕೊಂಡಿದ್ದಾಳಂತೆ. ವೈದ್ಯರು ಆಕೆಯ ರಕ್ತ ಪರೀಕ್ಷೆ ಮತ್ತು ಇಸಿಜಿ ನಡೆಸಿದ್ದಾರೆ. ಬೀನ್ಸ್, ಮೊಟ್ಟೆಗಳು ಮತ್ತು ಬಾಳೆಹಣ್ಣಿನ ಪ್ರೋಟೀನ್ ಶೇಕ್ ಸೇರಿದಂತೆ ಅತಿಯಾಗಿ ಆಹಾರ ಸೇವಿಸಿದ ಪರಿಣಾಮ ಆಕೆಗೆ ಗ್ಯಾಸ್ ರೋಗಲಕ್ಷಣ ಕಾಣಿಸಿದೆ ಎಂದು ಹೇಳಿದ್ದಾರೆ.
ತನ್ನ ಬೇಡಿಕೆ ಉಳಿಸಿಕೊಳ್ಳಲು ಮ್ಯಾಟಿಯೊ(Stephanie Matto) ವಾರಕ್ಕೆ 50 ಜಾರ್‌ಗಳಷ್ಟು ಹೂಸನ್ನು ಹಿಂಡಿದ್ದಳು. ಹೆಚ್ಚು ಗ್ಯಾಸ್ ಗಾಗಿ ಒಂದು ದಿನದಲ್ಲಿ 3 ಪ್ರೋಟೀನ್ ಶೇಕ್‌ಗಳು ಮತ್ತು ಕಪ್ಪು ಬೀನ್ ಸೂಪ್‌ನ ಬೃಹತ್ ಬೌಲ್ ಸೇವಿಸಿದೆ ಎಂದು ಅವರು ತಿಳಿಸಿದ್ದಾರೆ. ಉಸಿರಾಡಲು ನನಗೆ ತುಂಬಾ ಕಷ್ಟಕರವಾಗಿತ್ತು. ನನಗೆ ಆಗಾಗ ಎದೆನೋವು ಕೂಡ ಕಾಣಿಸುತ್ತಿತ್ತು. ನನಗೆ ಹೃದಯಾಘಾತದ ಅನುಭವಾಯಿತು. ಹೀಗಾಗಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಸ್ನೇಹಿತರಲ್ಲಿ ಕೇಳಿಕೊಂಡೆ.
ಇದನ್ನೂ ಓದಿ: WATCH:ಬೆಕ್ಕಿನಂತೆ ಸಿಂಹಿಣಿಯನ್ನು ಹೊತ್ತು ತಂದ ಮಹಿಳೆ.. ದೃಶ್ಯ ಕಂಡು ಅವಾಕ್ಕಾದ ನೆಟ್ಟಿಗರು
ನಾನು ಅನುಭವಿಸುತ್ತಿರುವ ನೋವು ಪಾರ್ಶ್ವವಾಯು ಅಥವಾ ಹೃದಯಾಘಾತದಲ್ಲ. ಆದರೆ ತುಂಬಾ ತೀವ್ರವಾದ ಗ್ಯಾಸ್ ನೋವು ಎಂದು ಸ್ಪಷ್ಟಪಡಿಸಲಾಯಿತು. ಆಹಾರಕ್ರಮ ಬದಲಾಯಿಸುವಂತೆ ಹಾಗೂ ಔಷಧಿ ತೆಗೆದುಕೊಳ್ಳುವಂತೆ ವೈದ್ಯರು ನನಗೆ ಸೂಚಿಸಿದರು. ಸದ್ಯ ನನ್ನ ಈ ವ್ಯವಹಾರವನ್ನು ಕೊನೆಗೊಳಿಸಿದ್ದೇನೆ ಅಂತಾ ಹೇಳಿದ್ದಾರೆ.
ರಿಯಾಲಿಟಿ ಟಿವಿ ಶೋ ‘90 ಡೇ ಫಿಯಾನ್ಸಿ’(90 Day Fiancé)ನಲ್ಲಿ ಕಾಣಿಸಿಕೊಂಡ ನಂತರ ಸ್ಟೆಫನಿಯ ಜನಪ್ರಿಯತೆ ಹೆಚ್ಚಾಯಿತು. ವಯಸ್ಕರ ಸೈಟ್ ಅನ್‌ಫಿಲ್ಟ್ ರ್ಡ್‌ನಲ್ಲಿ ಬೇಡಿಕೆಯ ಮೇರೆಗೆ ತಮ್ಮ ಹೂಸು ಮಾರಾಟ ಮಾಡಲು ಪ್ರಾರಂಭಿಸಿದರು. ಟಿಕ್‌ಟಾಕ್ ವಿಡಿಯೋವೊಂದರಲ್ಲಿ ಕೇವಲ 1 ವಾರದಲ್ಲಿ 97 ಜಾರ್‌ಗಳ ಹೂಸು ಮಾರಾಟ ಮಾಡುವ ಮೂಲಕ ಅಂದಾಜು 38 ಲಕ್ಷ ರೂ.(50 ಸಾವಿರ ಅಮೆರಿಕನ್ ಡಾಲರ್) ಗಳಿಸಿದ್ದೇನೆಂದು ಅವರು ಬಹಿರಂಗಪಡಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.