ನವದೆಹಲಿ: ಐಪಿಎಲ್ 2022ರ ಮೆಗಾ ಹರಾಜಿನ ದಿನ(IPL 2022 Mega Auction) ಸಮೀಪಿಸುತ್ತಿದ್ದಂತೆ ಅದರ ಉತ್ಸಾಹವೂ ಹೆಚ್ಚುತ್ತಿದೆ. ಏತನ್ಮಧ್ಯೆ ಬಿಸಿಸಿಐ ಹರಾಜು ಪ್ರಕ್ರಿಯೆಗೆ ಮುನ್ನ ದೊಡ್ಡ ಘೋಷಣೆ ಮಾಡಿದೆ.
IPL ಮೆಗಾ ಹರಾಜು ಯಾವಾಗ ನಡೆಯುತ್ತದೆ?
IPL 2022ರ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ(Bengaluru) ನಡೆಯಲಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ವಿದೇಶಿ ಆಟಗಾರರ ಹರಾಜು ನಡೆಯಲಿದೆ.
ಬಿಸಿಸಿಐ ನೋಂದಣಿ ದಿನಾಂಕ ವಿಸ್ತರಿಸಿದೆ
ವರದಿಗಳ ಪ್ರಕಾರ ಐಪಿಎಲ್ 2022ರ(IPL 2022) ಮೆಗಾ ಹರಾಜಿನ ಸಮಯದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಟಗಾರರ ನೋಂದಣಿ ದಿನಾಂಕವನ್ನು ಬಿಸಿಸಿಐ ವಿಸ್ತರಿಸಿದೆ.
ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿ ವಿಶ್ವದ ಯಶಸ್ವಿ ನಾಯಕ ಎಂಬುದಕ್ಕೆ ಈ ದಾಖಲೆಗಳೇ ಸಾಕ್ಷಿ
ಈ ದೇಶಗಳ ಆಟಗಾರರು ಆಡುವ ಬಗ್ಗೆ ಸಸ್ಪೆನ್ಸ್!
ವರದಿಯ ಪ್ರಕಾರ ಬಯೋ ಬಬಲ್ನ ಆಯಾಸದಿಂದ ಮುಂಬರುವ ಋತುವನ್ನು ಕಳೆದುಕೊಳ್ಳ ಬಯಸುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ(Australia & England)ದ ಅಗ್ರ ಆಟಗಾರರು ಐಪಿಎಲ್ 2022ರಲ್ಲಿ ಆಡುವ ಬಗ್ಗೆ ಸಸ್ಪೆನ್ಸ್ ಉದ್ಭವಿಸಿದೆ.
ಅನೇಕರ ಹೆಸರುಗಳು ಕಾಣಿಸಿಕೊಂಡಿವೆ
ಇಂಗ್ಲೆಂಡ್ನ ಟೆಸ್ಟ್ ನಾಯಕ ಜೋ ರೂಟ್, ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್(Ben Stokes), ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ವೇಗಿ ಮಿಚೆಲ್ ಸ್ಟಾರ್ಕ್ ಐಪಿಎಲ್ ಹರಾಜು ಪೂಲ್ನಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಆದರೆ ಹರಾಜಿನಲ್ಲಿ ಭಾಗವಹಿಸಬೇಕೋ ಬೇಡವೋ ಎಂಬುದರ ಬಗ್ಗೆ ಯೋಚಿಸುತ್ತಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: Virat Kohli : ಕೊಹ್ಲಿ ನಾಯಕತ್ವ ತೊರೆದರೆ ಭಾರತ ಟೆಸ್ಟ್ ತಂಡ ಸರ್ವನಾಶ! ಇದರಿಂದ ಟೀಂ ಇಂಡಿಯಾಗೆ ಭಾರಿ ನಷ್ಟ!
ಬಯೋ ಬಬಲ್ ತಲೆನೋವು ತಂದಿದೆ
ಆಶಸ್ ಸರಣಿಯ ನಂತರ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರು(England Players) ಅಂತಾರಾಷ್ಟ್ರೀಯ ಸರಣಿಗಳನ್ನು ಆಡಬೇಕಿದೆ. ತನ್ನ ರಾಷ್ಟ್ರೀಯ ತಂಡದ ಜವಾಬ್ದಾರಿಯನ್ನು ನಿರ್ವಹಿಸುವಾಗ ಅವರು ಬಯೋ ಬಬಲ್ನಿಂದ ಬೇಸತ್ತಿರಬಹುದು. ಹೀಗಾಗಿ ಈ ತಂಡಗಳ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಆಡುವುದು ಕಷ್ಟವೆಂದು ಹೇಳಲಾಗುತ್ತಿದೆ. ಲಭ್ಯತೆಯ ಆಧಾರದಲ್ಲಿ ಯಾವ ವಿದೇಶಿ ಆಟಗಾರರು ಆಡುವುದಿಲ್ಲ, ಆಡುತ್ತಾರೆಂಬುದರ ಬಗ್ಗೆ ಬಿಸಿಸಿಐ ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.