When Will Earth End: ಸೂರ್ಯನ ಸ್ಫೋಟದಿಂದ ಜಗತ್ತಿನ ಅಂತ್ಯ! ಸ್ಫೋಟದ ನಿಖರ ಸಮಯ ಮತ್ತು ಕಾರಣ ಪತ್ತೆಹಚ್ಚಿದ ವಿಜ್ಞಾನಿಗಳು

Earth End Date - ಸೂರ್ಯ (Sun) ಸ್ಫೋಟದಿಂದ ಈ ಜಗತ್ತೇ ಕೊನೆಗೊಳ್ಳಲಿದೆ. ಹೀಗಂತ ನಾವು ನಿಮಗೆ ಹೇಳುತ್ತಿಲ್ಲ. ವಿಜ್ಞಾನಿಗಳು ಇದೀಗ ಭೂಮಿಯ ನಾಶದ ನಿಖರವಾದ ದಿನಾಂಕ ಮತ್ತು ಕಾರಣವನ್ನು (Earth End After Five Billions Years) ಪತ್ತೆಹಚ್ಚಿದ್ದಾರೆ. 5 ಶತಕೋಟಿ ವರ್ಷಗಳ ನಂತರ ಸೂರ್ಯನಲ್ಲಿ ಸ್ಫೋಟ ಸಂಭವಿಸಲಿದೆ ಮತ್ತು ಅದು ಭೂಮಿಯ ನಾಶಕ್ಕೆ ಕಾರಣವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

Written by - Nitin Tabib | Last Updated : Jan 22, 2022, 09:04 PM IST
  • ಸೂರ್ಯ ಸ್ಫೋಟದಿಂದ ಭೂಮಿಯ ಅಂತ್ಯ
  • ಭೂಮಿ ಸರ್ವನಾಶದ ನಿಖರ ಸಮಯ ಹೇಳಿದ ವಿಜ್ಞಾನಿಗಳು
  • ಈ ದಿನ ಸೂರ್ಯ ಸ್ಫೋಟ ಸಂಭವಿಸಲಿದೆ.
When Will Earth End: ಸೂರ್ಯನ ಸ್ಫೋಟದಿಂದ ಜಗತ್ತಿನ ಅಂತ್ಯ! ಸ್ಫೋಟದ ನಿಖರ ಸಮಯ ಮತ್ತು ಕಾರಣ ಪತ್ತೆಹಚ್ಚಿದ ವಿಜ್ಞಾನಿಗಳು title=
When Will Earth End (File Photo)

ನವದೆಹಲಿ: Earth End News - ಭೂಮಿ ವಿನಾಶದ ದಿನಾಂಕದ ಬಗ್ಗೆ ವಿಜ್ಞಾನಿಗಳು ಉತ್ತರವನ್ನು ಕಂಡುಕೊಂಡಿದ್ದಾರೆ (When Will Earth End). ದೀರ್ಘಕಾಲದವರೆಗೆ, ವಿಜ್ಞಾನಿಗಳು ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯುವಲ್ಲಿ ತೊಡಗಿದ್ದರು. ಭೂಮಿಯ ಅಂತ್ಯದ ರಹಸ್ಯವು ಅಂತಿಮವಾಗಿ ಬಗೆಹರಿಯುವಂತೆ ತೋರುತ್ತಿದೆ. ಇದಕ್ಕೂ ಮೊದಲು ಹಲವು ಮುನ್ಸೂಚನೆಗಳು ಪ್ರಕಟಗೊಂಡಿವೆ. ಆದರೆ, ಅವೆಲ್ಲವೂ ತಪ್ಪು ಎಂದು ಸಾಬೀತಾಗಿವೆ. ಆದರೆ ಇದೀಗ ಮತ್ತೊಮ್ಮೆ ವಿಜ್ಞಾನಿಗಳು ಭೂಮಿಯ ಅಂತ್ಯದ ನಿಜವಾದ ದಿನಾಂಕ ಮತ್ತು ಕಾರಣವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯನಿಂದಾಗಿಯೇ ಭೂಮಿ ಕೊನೆಗೊಳ್ಳುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ-Asteroid:ಕಾದಿದ್ಯಾ ಅಪಾಯ? ಭೂಮಿಯ ಬಳಿ ಬರಲಿದೆ ಬುರ್ಜ್ ಖಲೀಫಾಕ್ಕಿಂತ ದುಪ್ಪಟ್ಟು ಗಾತ್ರದ ಕ್ಷುದ್ರಗ್ರಹ

5 ಶತಕೋಟಿ ವರ್ಷಗಳ ನಂತರ ಸೂರ್ಯನಲ್ಲಿ ಸ್ಫೋಟ ಸಂಭವಿಸುತ್ತದೆ!
ದಿ ಮಿರರ್‌ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಸೂರ್ಯನಿಂದ ಜಗತ್ತು ನಾಶವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೂರ್ಯನು ಸಿಡಿಯಲಿದ್ದಾನೆ (Sun Will Explosively) ಮತ್ತು ಇದರೊಳಗೆ ಇಡೀ ವಿಶ್ವವೇ ಸುಟ್ಟು ಬೂದಿಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಸೂರ್ಯ ಇನ್ನೂ ಯೌವನಾವಸ್ಥೆಯಲ್ಲಿದ್ದಾನೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅದರ ಸ್ಫೋಟದ ಸಮಯದಲ್ಲಿ ನಮ್ಮಲ್ಲಿ ಯಾರೂ ಜೀವಂತವಾಗಿರುವುದಿಲ್ಲ. ಇಂದಿನಿಂದ 5 ಶತಕೋಟಿ ವರ್ಷಗಳ ನಂತರ ಸೂರ್ಯನಲ್ಲಿ ಸ್ಫೋಟ ಸಂಭವಿಸುತ್ತದೆ ಎಂದು ನಂಬಲಾಗಿದೆ. ಇದರಿಂದ ಭೂಮಿ ಮಾತ್ರವಲ್ಲದೆ ಸೂರ್ಯನನ್ನು ಅವಲಂಬಿಸಿರುವ ಯಾವುದೇ ಗ್ರಹ ಉಳಿಯುವುದಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ-Second earth:ಸಿಕ್ಕೆ ಬಿಡ್ತಾ 9 ನೇ ಗ್ರಹ? ಸೌರವ್ಯೂಹದಲ್ಲಿದೆ 'ಎರಡನೇ ಭೂಮಿ'! ಇದಕ್ಕೆ ಇದೆ ಪುರಾವೆ..

ಸೂರ್ಯನಲ್ಲಿರುವ ಹೈಡ್ರೋಜನ್ ಕೋರ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ
ಐದು ಶತಕೋಟಿ ವರ್ಷಗಳ ನಂತರ ಸೂರ್ಯನಲ್ಲಿರುವ ಹೈಡ್ರೋಜನ್ ಕೋರ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಮತ್ತು ನಂತರ ಸೂರ್ಯನಿಗೆ ಶಾಖ ಉತ್ಪಾದಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ಇತರ ಗ್ರಹಗಳು ಸಹ ತಂಪಾಗಲಿವೆ. ಇದರೊಂದಿಗೆ, ಸೂರ್ಯನನ್ನು ನಾಶಪಡಿಸುವ ಗ್ರಹಗಳಲ್ಲಿ ಬುಧ ಮತ್ತು ಶುಕ್ರ ಕೂಡ ಸೇರಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ, ಆದರೆ ಭೂಮಿಯ ಮೇಲೆ ಬರಲಿರುವ ವಿನಾಶವು ಬೇರೆಲ್ಲಿಯೂ ಕಂಡುಬರುವುದಿಲ್ಲ ಎಂದೂ ಕೂಡ ಅವರು ಹೇಳಿದ್ದಾರೆ.

ಇದನ್ನೂ ಓದಿ-Young Sun Like Star: ಸೂರ್ಯನ ರೀತಿ ಇರುವ ಯುವ ತಾರೆಯ ಮೇಲ್ಮೈ ಮೇಲೆ ಭಾರಿ ಸ್ಫೋಟ, ಇದು ಭೂಮಿಗೆ ಎಚ್ಚರಿಕೆಯ ಕರೆಗಂಟೆಯೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News