ಜ್ಯೋತಿಷ್ಯದ ಪ್ರಕಾರ, ಈ ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಒಳ್ಳೆಯ ಮತ್ತು ಕೆಟ್ಟ ಘಟನೆಗಳನ್ನು ಸೂಚಿಸುತ್ತವೆ.
ನವದೆಹಲಿ : ನಿದ್ರೆಯಲ್ಲಿ ಬೀಳುವ ಕನಸುಗಳಿಗೂ ಬಹಳಷ್ಟು ಅರ್ಥವಿದೆ. ಜ್ಯೋತಿಷ್ಯದ ಪ್ರಕಾರ, ಈ ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಒಳ್ಳೆಯ ಮತ್ತು ಕೆಟ್ಟ ಘಟನೆಗಳನ್ನು ಸೂಚಿಸುತ್ತವೆ. ಕನಸುಗಳು ಮತ್ತು ಅವುಗಳ ಅರ್ಥಗಳನ್ನು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ಕನಸಿನಲ್ಲಿ ಈ ಬಿಳಿ ವಸ್ತುಗಳನ್ನು ಕಂಡರೆ ಅದು ಭಾರೀ ಅದೃಷ್ಟವನ್ನು ನೀಡುತ್ತದೆಯಂತೆ. ಅಪಾರ ಸಂಪತ್ತಿನ ಮಾಲೀಕರಾಗುವ ಮುನ್ಸೂಚನೆಯನ್ನು ಈ ಕನಸುಗಳು ನೀಡುತ್ತವೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕನಸಿನಲ್ಲಿ ಬಿಳಿ ಸಿಂಹ ಅಥವಾ ಹುಲಿಯನ್ನು ನೋಡುವುದು ತುಂಬಾ ಮಂಗಳಕರ. ಯಾವುದೋ ದೊಡ್ಡ ವಿಷಯಗಳಲ್ಲಿ ಜಯ ಗಳಿಸುವ ಮುನ್ಸೂಚನೆಯನ್ನು ಇದು ನೀಡುತ್ತದೆ. ಇದಲ್ಲದೇ ವೃತ್ತಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿ ಉತ್ತಮ ಪ್ರಗತಿಯನ್ನು ನೀಡುತ್ತದೆ.
ಕನಸಿನಲ್ಲಿ ಬಿಳಿ ನವಿಲನ್ನು ನೋಡುವುದು ಎಂದರೆ ನಿಮ್ಮ ಜೀವನದಲ್ಲಿ ಅಪಾರ ಸಂಪತ್ತು ಮತ್ತು ಸಂತೋಷ ಬರಲಿದೆ ಎಂದರ್ಥ. ನಿಮ್ಮನ್ನು ಶ್ರೀಮಂತರನ್ನಾಗಿಸಲು ಈ ಕನಸು ಸಾಕು. ಅಲ್ಲದೆ, ಇದು ದೊಡ್ಡ ಸಾಧನೆ ಮಾಡುವ ಮುನ್ಸೂಚನೆಯೂ ಹೌದು.
ನಿಮ್ಮ ಕನಸಿನಲ್ಲಿ ಬಿಳಿ ಗೂಬೆಯನ್ನು ನೋಡಿದರೆ, ನಿಮಗೆ ಬಹಳಷ್ಟು ಹಣವನ್ನು ಪಡೆಯುವ ಅವಕಾಶ ಸಿಗುತ್ತದೆ ಎಂದರ್ಥ. ಗೂಬೆಯು ಲಕ್ಷ್ಮಿ ದೇವಿಯ ವಾಹನವಾಗಿದೆ. ಈ ಕಾರಣದಿಂದಾಗಿ, ಬಿಳಿ ಗುಬೆಯ ಕನಸು ಕಾಣುವುದೆಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಲಿದೆ ಎನ್ನುವುದರ ಸ್ಪಷ್ಟ ಸೂಚನೆಯಾಗಿರುತ್ತದೆ.
ಕನಸಿನಲ್ಲಿ ಬಿಳಿ ಹಂಸವನ್ನು ನೋಡುವುದು ಎಂದರೆ ಭವ್ಯವಾದ ವೈಭವವನ್ನು ಪಡೆಯಲಿದ್ದೀರಿ ಎಂದರ್ಥ
ಕನಸಿನಲ್ಲಿ ಬಿಳಿ ಆನೆಯನ್ನು ನೋಡಿದರೆ, ಜೀವನದಲ್ಲಿ ರಾಜಯೋಗದ ಆರಂಭವನ್ನು ಸೂಚಿಸುತ್ತದೆ. ಅಂತಹ ಕನಸು ಅಪಾರ ಸಂಪತ್ತು, ಗೌರವ ಮತ್ತು ದೊಡ್ಡ ಯಶಸ್ಸನ್ನು ಹೊತ್ತು ತರುತ್ತದೆ.
ಕನಸಿನಲ್ಲಿ ಬಿಳಿ ಕುದುರೆಯನ್ನು ನೋಡುವುದು ವೃತ್ತಿ-ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಿಗುವ ಸಂಕೇತ. ಇದು ಜೀವನವನ್ನು ಬದಲಾಯಿಸುವ ಸಾಧನೆಯಾಗಬಹುದು.