Smartphoneನಿಂದ ಡಾಟಾ ಕಳುವಾಗುವುದನ್ನು ತಡೆಯಲು ತಕ್ಷಣ ಈ ಕೆಲಸ ಮಾಡಿ

ಒಂದೆಡೆ ಇಂಟರ್‌ನೆಟ್‌ ನಮ್ಮ ಹಲವು ಕೆಲಸಗಳಿಗೆ ಪರಿಹಾರ ನೀಡಿದರೆ, ಇನ್ನೊಂದೆಡೆ ಸೈಬರ್‌ ಕಳ್ಳತನಕ್ಕೂ ಇದು ಅನುವು ಮಾಡಿಕೊಡುತ್ತದೆ.  

ನವದೆಹಲಿ. ಇಂದಿನ ಕಾಲದಲ್ಲಿ ಇಂಟರ್ನೆಟ್ ಇಲ್ಲದೆ ಯಾವ ಕೆಲಸವೂ ಸಾಗುವುದಿಲ್ಲ. ಸಾಮಾನ್ಯವಾಗಿ ಡೇಟಾವನ್ನು ಒಳಗೊಂಡಿರುವ ರೀಚಾರ್ಜ್ ಯೋಜನೆಗಳನ್ನು ಖರೀದಿಸುತ್ತೇವೆ. ಆದರೆ ಉತ್ತಮ ವೇಗಕ್ಕಾಗಿ ಮತ್ತು ಹಣವನ್ನು ಉಳಿಸಲು, ವೈಫೈ ಅನ್ನು ಬಳಸುತ್ತೇವೆ. ಒಂದೆಡೆ ಇಂಟರ್‌ನೆಟ್‌ ನಮ್ಮ ಹಲವು ಕೆಲಸಗಳಿಗೆ ಪರಿಹಾರ ನೀಡಿದರೆ, ಇನ್ನೊಂದೆಡೆ ಸೈಬರ್‌ ಕಳ್ಳತನಕ್ಕೂ ಇದು ಅನುವು ಮಾಡಿಕೊಡುತ್ತದೆ.  ಇಂದಿನ ಕಾಲದಲ್ಲಿ ಹ್ಯಾಕರ್‌ಗಳು ವೈಫೈ ಮೂಲಕವೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಡೇಟಾವನ್ನು ಕದಿಯುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸಾರ್ವಜನಿಕ ವೈಫೈ ಅನ್ನು ಹಲವು ಸ್ಥಳಗಳಲ್ಲಿ ಸ್ಥಾಪಿಸಲಾಗಿರುತ್ತದೆ. ಅದನ್ನು ನೀವು ಪಾಸ್‌ವರ್ಡ್ ಇಲ್ಲದೆಯೇ ಬಳಸಬಹುದು. ಸಾರ್ವಜನಿಕ ವೈಫೈ ಮೂಲಕ ಹ್ಯಾಕರ್‌ಗಳು ಸುಲಭವಾಗಿ ಡಾಟಾ ಕದಿಯುವುದು ಸಾಧ್ಯವಾಗುತ್ತದೆ.   

2 /5

ಹ್ಯಾಕರ್‌ಗಳು ಎರಡು ರೀತಿಯಲ್ಲಿ ದಾಳಿ ಮಾಡುತ್ತಾರೆ. ಮೊದಲ ವಿಧಾನವೆಂದರೆ ಮ್ಯಾನ್ ಇನ್ ಮಿಡಲ್ (MITM) ದಾಳಿ. ಇನ್ನೊಂದರಲ್ಲಿ ಹ್ಯಾಕರ್‌ಗಳು ಬಳಕೆದಾರರನ್ನು ವಂಚಿಸಲು ಮತ್ತು ಅವರ ಡೇಟಾವನ್ನು ಕದಿಯಲು ಅಪಾಯಕಾರಿ ಥರ್ಡ್ ಪಾರ್ಟಿ ಇಂಟರ್ ಸೆಪ್ಟ ಬಳಸುತ್ತಾರೆ.

3 /5

ಈ ಎರಡನೇ ರೀತಿಯ ದಾಳಿಯಲ್ಲಿ, ಹ್ಯಾಕರ್‌ಗಳು ಸುಲಭವಾಗಿ ಜನರ ಫೋನ್‌ಗಳಿಗೆ ಆಕ್ಸೆಸ್ ಪಡೆಯುತ್ತಾರೆ. ಪ್ಯಾಕೆಟ್ ಸ್ನಿಫಿಂಗ್ ಅಟ್ಯಾಕ್ ನಲ್ಲಿ ಹ್ಯಾಕರ್‌ಗಳು ವೈಫೈ ಮೂಲಕ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. 

4 /5

ಹ್ಯಾಕರ್‌ಗಳು ಸೈಬರ್ ದಾಳಿಯ ಮೂಲಕ, ನಿಮ್ಮ ವಿಳಾಸ, ನಿಮ್ಮ ಫೋಟೋಗಳು ಮತ್ತು ವೀಡಿಯೊಗಳು ಮತ್ತು ಬ್ಯಾಂಕ್ ವಿವರಗಳಂತಹ ಪ್ರಮುಖ ಮಾಹಿತಿಯನ್ನು ಕದಿಯುತ್ತಾರೆ.

5 /5

ಅಂತಹ ದಾಳಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ,  VPN ಅನ್ನು ಅಂದರೆ ವರ್ಚುವಲ್ ಪ್ರೈವೇಟ್  ನೆಟ್‌ವರ್ಕ್ ಅನ್ನು ಬಳಸಬೇಕು. ಇದು ಸಾರ್ವಜನಿಕ ನೆಟ್‌ವರ್ಕ್‌ನಲ್ಲಿಯೂ ಖಾಸಗಿ ನೆಟ್‌ವರ್ಕ್ ಸೌಲಭ್ಯವನ್ನು ಒದಗಿಸುತ್ತದೆ.