Sea Beach Photos: ಭಾರತದ 5 ಅತ್ಯಂತ ಸುಂದರವಾದ ಕಡಲತೀರಗಳಿವು

Beautiful Sea Beach: ಭಾರತದ 5 ಅತ್ಯಂತ ಸುಂದರವಾದ ಕಡಲತೀರಗಳನ್ನು ನೋಡೋಣ.

ನವದೆಹಲಿ: ಮೂರು ಕಡೆ ಸಮುದ್ರದಿಂದ ಸುತ್ತುವರಿದಿರುವುದರಿಂದ ಭಾರತವನ್ನು ಪರ್ಯಾಯ ದ್ವೀಪ ಎಂದು ಕರೆಯಲಾಗುತ್ತದೆ. ಇಲ್ಲಿ ಬೀಚ್ ಗಳಿಗೇನು (Beautiful Sea Beach) ಕೊರತೆಯಿಲ್ಲ. ನಮ್ಮ ದೇಶದ ಸಮುದ್ರ ತೀರವನ್ನು ನೋಡಲು, ವಿದೇಶಗಳಿಂದಲೂ ಅನೇಕ ಪ್ರವಾಸಿಗರು ಬರುತ್ತಾರೆ. ಭಾರತದ 5 ಅತ್ಯಂತ ಸುಂದರವಾದ ಕಡಲತೀರಗಳನ್ನು ನೋಡೋಣ.

1 /5

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಅತ್ಯಂತ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಹ್ಯಾವ್ಲಾಕ್ ದ್ವೀಪದಲ್ಲಿರುವ ರಾಧಾನಗರ ಬೀಚ್ ಪ್ರವಾಸಿಗರನ್ನು ತನ್ನ ಕಡೆಗೆ ಆಕರ್ಷಿಸುತ್ತದೆ.

2 /5

ಭಾರತದಲ್ಲಿ ಸಮುದ್ರಕ್ಕೆ ಭೇಟಿ ನೀಡಲು ಬಯಸುವ ಪ್ರವಾಸಿಗರು ಖಂಡಿತವಾಗಿಯೂ ಗೋವಾಗೆ ಹೋಗಿರುತ್ತಾರೆ. ಇಲ್ಲಿಗೆ ಬರಲು ನಿಮಗೆ ಅವಕಾಶ ಸಿಕ್ಕರೆ, ನೀವು ಒಮ್ಮೆ ದಕ್ಷಿಣ ಗೋವಾದ ಬೆನೌಲಿಮ್ ಬೀಚ್‌ಗೆ ಭೇಟಿ ನೀಡಲೇಬೇಕು.  

3 /5

ನೀವು ಭಾರತದ ದಕ್ಷಿಣ ವಲಯದಲ್ಲಿರುವ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ ಹೋದರೆ ಸಮುದ್ರದ ಬಲವಾದ ಅಲೆಗಳು ನಿಮಗೆ ಮೋಹಕ ಅನುಭವ ನೀಡುತ್ತವೆ.  

4 /5

ಲಕ್ಷದ್ವೀಪದ ಅಗತ್ತಿ ದ್ವೀಪದ ಬೀಚ್ ತನ್ನ ಸಾಟಿಯಿಲ್ಲದ ಸೌಂದರ್ಯಕ್ಕೆ ಬಹಳ ಪ್ರಸಿದ್ಧವಾಗಿದೆ. ಕಡಿಮೆ ಜನಸಂಖ್ಯೆಯ ಕಾರಣ ಇಲ್ಲಿ ಜಲಮಾಲಿನ್ಯ ಕೂಡ ಇಲ್ಲ. ಇಲ್ಲಿನ ನೀರಿನ ಬಣ್ಣವು ಸಾಕಷ್ಟು ನೀಲಿ ಬಣ್ಣದ್ದಾಗಿದೆ, ಇದು ಅದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

5 /5

ಭಾರತದ ದಕ್ಷಿಣ ರಾಜ್ಯವಾದ ಕೇರಳವನ್ನು 'ದೇವರ ಸ್ವಂತ ನಾಡು' ಎಂದು ಕರೆಯಲಾಗುತ್ತದೆ ಏಕೆಂದರೆ ಈ ಸ್ಥಳದ ಸೌಂದರ್ಯವು ಯಾವುದೇ ವ್ಯಕ್ತಿಯ ಮನಸ್ಸನ್ನು ಸೆಳೆಯುವಷ್ಟು ಅಂದವಾಗಿದೆ. ತಿರುವನಂತಪುರದ ಕೋವಲಂ ಬೀಚ್ ಇಲ್ಲಿಗೆ ಬರುವ ಪ್ರವಾಸಿಗರ ಮೊದಲ ಆಯ್ಕೆಯಾಗಿದೆ.