ನವದೆಹಲಿ: ಪ್ರಧಾನಿ ಮೋದಿ ಚುನಾವಣಾ ಭಾಷಣಗಳಲ್ಲಿ ನಿರುದ್ಯೋಗ ಮತ್ತು ಕಪ್ಪುಹಣದಂತಹ ನೈಜ ವಿಷಯಗಳ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಪಂಜಾಬ್ನ ಹೋಶಿಯಾರ್ಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಆದರೆ ಪ್ರಧಾನಿ ಮೋದಿ ಉದ್ಯೋಗ ಮತ್ತು ಕಪ್ಪು ಹಣದಂತಹ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ" ಎಂದು ಹೇಳಿದರು.
ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡ ಗಾಂಧಿ, ಕೇವಲ ಎರಡು-ಮೂರು ಬಿಲಿಯನೇರ್ಗಳು ಮಾತ್ರ ಅವರಿಂದ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ-#JamesTeaser: ದೊಡ್ಮನೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್; ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್
'ಪ್ರಧಾನಿ ಮೋದಿ ಅವರು ಪ್ರತಿ ಭಾಷಣದಲ್ಲಿ 15 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇನೆ, 2 ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು.ಯಾರಿಗಾದರೂ ಸಿಕ್ಕಿತೇ? ಭ್ರಷ್ಟಾಚಾರ ಅಥವಾ ಉದ್ಯೋಗದ ಬಗ್ಗೆ ಏಕೆ ಮಾತನಾಡುವುದಿಲ್ಲ? ಅವರು ನೋಟು ಅಮಾನ್ಯೀಕರಣ ಮಾಡಿದರು, ಜಿಎಸ್ಟಿ ಹೇರಿದರು. ಯಾರಿಗೆ ಲಾಭವಾಯಿತು ಹೇಳಿ ?" ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಬೆಂಬಲಿಗರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ರೈತರ ನಿಜವಾದ ಬೇಡಿಕೆಗಳಿಗೆ ನರೇಂದ್ರ ಮೋದಿಯವರು ಸಂವೇದನಾಶೀಲರಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ-10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ
"ಸುಮಾರು ಒಂದು ವರ್ಷದವರೆಗೆ, ಪಂಜಾಬ್ ರೈತರು ಚಳಿಗಾಲದಲ್ಲಿ ಹಸಿವಿನಿಂದ ಬಳಲುತ್ತಿದ್ದರು, ಏಕೆಂದರೆ ಪ್ರಧಾನಿ ಮೋದಿ ತಮ್ಮ ಶ್ರಮವನ್ನು 2-3 ಬಿಲಿಯನೇರ್ಗಳಿಗೆ ನೀಡಲು ಪ್ರಯತ್ನಿಸಿದರು. ಪ್ರತಿಭಟನೆ ವೇಳೆ ಮೃತಪಟ್ಟ ರೈತರಿಗೆ ಸಂಸತ್ತಿನಲ್ಲಿ 2 ನಿಮಿಷ ಮೌನ ಆಚರಿಸಲು ಸಾಧ್ಯವಾಗಲಿಲ್ಲ. ಅವರು ಅವರಿಗೆ ಯಾವುದೇ ಪರಿಹಾರವನ್ನು ನೀಡಲಿಲ್ಲ, ಆದರೆ ರಾಜಸ್ಥಾನ ಮತ್ತು ಪಂಜಾಬ್ ಸರ್ಕಾರಗಳು ನೀಡಿವೆ ಎಂದು ರಾಹುಲ್ ಗಾಂಧಿ ಪಂಜಾಬ್ನಲ್ಲಿ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.