ಚೆನ್ನೈ: ಎಐಡಿಎಂಕೆ ಐಟಿ ವಿಭಾಗದ ಕಾರ್ಯದರ್ಶಿ ಹರಿಪ್ರಭಾಕರನ್ ಪತ್ರಕರ್ತರನ್ನು ಬೀದಿ ನಾಯಿ ಎಂದು ಕರೆಯುವ ಮೂಲಕ ತೀವ್ರ ವಿವಾದ ಹುಟ್ಟು ಹಾಕಿದ್ದಾನೆ.
ಈಗ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತಪಾಗುವ ಮೊದಲೇ ಪಕ್ಷವು ಅವನನ್ನು ಉಚ್ಚಾಟಿಸಿದೆ.ಡಿಸಿಎಂ ಗಮನದ ವೇಳೆ ವರದಿಗಾರರನ್ನು ಒಳಗಡೆ ಶೂಟ್ ಮಾಡಲು ಬಿಡುವುದಿಲ್ಲ , ಬೊಗಳುತ್ತಿರುವ ಬೀದಿನಾಯಿಗಳನ್ನು ಒಳಗೆ ಬಿಡುವ ಬದಲಾಗಿ ಗೆಟ್ ಹತ್ತಿರವೆ ಕಟ್ಟಿ ಹಾಕಬೇಕು ಎಂದು ಅವನು ಡಿಲಿಟ್ ಮಾಡಿರುವ ಟ್ವೀಟ್ ನಲ್ಲಿ ತಿಳಿಸಿದ್ದಾನೆ.
All opinions expressed by me are personal and it is not official party view. I'm not authorised to express party views. I heard few people got hurt due to one of my tweet this morning .I don't have any animosity towards any group of people. My apologies to those who r hurt.
— Hari Prabhakaran (@Hariadmk) May 28, 2018
ಸೋಮವಾರ 9.40 ರ ಸುಮಾರಿಗೆ ಈ ಟ್ವೀಟ್ ಮಾಡಿದ್ದು ಆದರೆ ನಂತರ ಇದನ್ನು ಅಳಿಸಿ ಹಾಕಲಾಗಿದೆ. ಅಲ್ಲದೆ ಈ ವ್ಯಕ್ತಿ ಅನಂತರ ಟ್ವೀಟರ್ ನಲ್ಲಿ ಕ್ಷಮೆಕೊರುತ್ತಾ " ಇಲ್ಲಿ ವ್ಯಕ್ತವಾಗಿರುವ ಎಲ್ಲ ವಿಚಾರಗಳು ವೈಯಕ್ತಿಕ ಮತ್ತು ಇವು ಪಕ್ಷದ ಅಭಿಪ್ರಾಯಗಳಲ್ಲ. ಇನ್ನು ಪಕ್ಷದ ಅಭಿಪ್ರಾಯಗಳನ್ನು ತಿಳಿಸಲು ನಾನು ಅಧಿಕೃತ ವ್ಯಕ್ತಿಯಲ್ಲ.ಬೆಳಗ್ಗೆ ಮಾಡಿರುವ ಟ್ವೀಟ್ ನಿಂದಾಗಿ ಕೆಲವರಿಗೆ ಇದು ನೋವನ್ನುಂಟುಮಾಡಿದೆ ಎಂದು ಕೇಳಲ್ಪಟ್ಟಿದ್ದೇನೆ.ನನಗೆ ಯಾವುದೇ ಗುಂಪಿನ ವಿರುದ್ದ ದ್ವೇಷವಿಲ್ಲ.ಆದ್ದರಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಅವರ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.