IPL 2022: ಮಿಚೆಲ್ ಮಾರ್ಷ್ ಗೆ ಮತ್ತೊಮ್ಮೆ ಕೊರೊನಾ, ದೆಹಲಿ ಕ್ಯಾಪಿಟಲ್ಸ್ ಗೆ ಆಘಾತ

ಡೆಲ್ಲಿ ಕ್ಯಾಪಿಟಲ್ಸ್‌ನ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರು ಈಗ ಕನಿಷ್ಠ 10 ದಿನಗಳ ಕಾಲ ಐಪಿಎಲ್ ನಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.ಹೌದು, ಈಗ ಅವರಿಗೆ ಎರಡನೇ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಕೊರೊನಾ ಧೃಡಪಟ್ಟಿರುವುದರಿಂದ ಈಗ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿರುವ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.

Last Updated : Apr 19, 2022, 12:00 AM IST
  • ಡೆಲ್ಲಿ ಕ್ಯಾಪಿಟಲ್ಸ್‌ನ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರು ಈಗ ಕನಿಷ್ಠ 10 ದಿನಗಳ ಕಾಲ ಐಪಿಎಲ್ ನಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ
IPL 2022: ಮಿಚೆಲ್ ಮಾರ್ಷ್ ಗೆ ಮತ್ತೊಮ್ಮೆ ಕೊರೊನಾ, ದೆಹಲಿ ಕ್ಯಾಪಿಟಲ್ಸ್ ಗೆ ಆಘಾತ   title=

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್‌ನ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಅವರು ಈಗ ಕನಿಷ್ಠ 10 ದಿನಗಳ ಕಾಲ ಐಪಿಎಲ್ ನಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.ಹೌದು, ಈಗ ಅವರಿಗೆ ಎರಡನೇ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಕೊರೊನಾ ಧೃಡಪಟ್ಟಿರುವುದರಿಂದ ಈಗ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿರುವ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.

ಮಾರ್ಷ್ ಅವರಿಗೆ ಈಗ ಕೊರೊನಾ ಧೃಡಪಟ್ಟಿರುವ ಹಿನ್ನಲೆಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಇಬ್ಬರು ಸಹಾಯಕ ಸಿಬ್ಬಂದಿಯೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ನಾಲ್ಕಕ್ಕೆ ತಲುಪಿದೆ.ಆದರೆ ಈಗ ಮಾರ್ಷ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೇ ಅಥವಾ ಇಲ್ಲವೇ ಎನ್ನುವುದು ಇನ್ನೂ ಧೃಡಿಕರಿಸಲು ಸಾಧ್ಯವಾಗಿಲ್ಲ. ಇನ್ನೊಂದೆಡೆಗೆ ಇತರ ಎಲ್ಲಾ ಆಟಗಾರರ ಆರ್ಟಿಪಿಸಿಆರ್ ವರದಿಗಳು ನೆಗಟಿವ್ ಎಂದು ಬಂದಿವೆ ಎನ್ನಲಾಗಿದೆ.

ಇದನ್ನೂ ಓದಿ : ಐಪಿಎಲ್‌ 2022: ಇಂದು ರಾಜಸ್ಥಾನ ರಾಯಲ್ಸ್‌ - ಕೊಲ್ಕತ್ತಾ ನೈಟ್‌ ರೈಡರ್ಸ್‌ ಮುಖಾಮುಖಿ

ಕೆಲವು ದಿನಗಳ ಹಿಂದೆ, ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಗೆ ಕೂಡ ಕೊರೊನಾ ಇರುವುದು ಧೃಡಪಟ್ಟ ನಂತರ ತಂಡವು ತೀವ್ರ ಆತಂಕಕ್ಕೆ ಒಳಗಾಗಿತ್ತು. ಈಗ ಮಾರ್ಷ್ ಅವರ ಆರ್ಟಿಪಿಸಿಆರ್ ಮೊದಲ ವರದಿ ನೆಗೆಟಿವ್ ಬಂದಿತ್ತು, ಆದಾಗ್ಯೂ ಎರಡನೇ ಆರ್ಟಿಪಿಸಿಆರ್ ವರದಿಯಲ್ಲಿ ಅವರಿಗೆ ಕೊರೊನಾ ಇರುವುದು ಧೃಡಪಟ್ಟಿತು.ಇನ್ನೊಂದೆಡೆಗೆ ತಂಡದ ಉಳಿದ ಎಲ್ಲಾ ಆಟಗಾರನ್ನು ಪರೀಕ್ಷೆ ಮಾಡಲಾಗಿತ್ತು, ಅವರ ಎಲ್ಲಾ ಫಲಿತಾಂಶಗಳು ನೆಗಟಿವ್ ಬಂದಿವೆ ಎನ್ನಲಾಗಿದೆ.

ಇದನ್ನೂ ಓದಿ : "ಚುನಾವಣೆ ಗೆಲ್ಲಲು ಮೋದಿ ಮಂತ್ರ ಸಾಲೋದಿಲ್ಲ : ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ"

ಈಗ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಬುಧುವಾರದಂದು ನಡೆಯಲಿರುವ ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದ್ದಾರೆ.'ಎಲ್ಲಾ ತಂಡಗಳು ಪುಣೆಯ ಕಾನ್ರಾಡ್ ಹೋಟೆಲ್‌ನಲ್ಲಿ ಉಳಿದುಕೊಂಡಿವೆ, ಅಲ್ಲಿ ಬಿಸಿಸಿಐ ಜೈವಿಕ ಬಬಲ್ ಅನ್ನು ರಚಿಸಿದೆ.ಅವರು ಪ್ರಯಾಣಿಸಬೇಕಾಗಿತ್ತು, ಆದರೆ ಈಗ ಅದು ವಿಳಂಬವಾಗಿದೆ.ನಿಸ್ಸಂಶಯವಾಗಿ ಫಲಿತಾಂಶಗಳು ಋಣಾತ್ಮಕವಾಗಿರುವ ಎಲ್ಲರೂ ನಾಳೆ ಪ್ರಯಾಣವನ್ನು ಬೆಳೆಸುತ್ತಾರೆ,''ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ : "ಚುನಾವಣೆ ಗೆಲ್ಲಲು ಮೋದಿ ಮಂತ್ರ ಸಾಲೋದಿಲ್ಲ : ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ"

ಬಿಸಿಸಿಐನ ಪರೀಕ್ಷಾ ಪ್ರೋಟೋಕಾಲ್‌ಗಳ ಪ್ರಕಾರ, ತಂಡದ ಬಬಲ್‌ನಲ್ಲಿರುವ ಐಪಿಎಲ್ ತಂಡದ ಪ್ರತಿಯೊಬ್ಬ ಸದಸ್ಯರನ್ನು ಪ್ರತಿ ಐದನೇ ದಿನಕ್ಕೆ ಪರೀಕ್ಷಿಸಲಾಗುತ್ತದೆ, ಕಳೆದ ಋತುವಿನಂತೆ ಪ್ರತಿ ಮೂರನೇ ದಿನಕ್ಕೆ ಇದನ್ನು ಮಾಡಲಾಗುತ್ತದೆ.ತಂಡದ ಫಿಸಿಯೋ ಫರ್ಹಾರ್ಟ್ ಅವರಿಗೆ ಕಳೆದ ವಾರ ಪಾಸಿಟಿವ್ ಬಂದ ನಂತರ ಈ ಬೆಳವಣಿಗೆ ಬಂದಿದೆ. "ನಾವು ಇಂದು ಹೊರಡಬೇಕಿತ್ತು, ಆದರೆ ಮುಂದಿನ ಸೂಚನೆ ಬರುವವರೆಗೂ ಕೋಣೆಯಲ್ಲಿ ಇರಲು ಹೇಳಲಾಗಿದೆ" ಎಂದು ತಂಡದ ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News