ಐಪಿಎಲ್‌ 2022: ಇಂದು ರಾಜಸ್ಥಾನ ರಾಯಲ್ಸ್‌ - ಕೊಲ್ಕತ್ತಾ ನೈಟ್‌ ರೈಡರ್ಸ್‌ ಮುಖಾಮುಖಿ

ಕಳೆದ ಬಾರಿ ಗುಜರಾತ್ ಟೈಟಾನ್ಸ್ ವಿರುದ್ಧ ಮಖಾಡೆ ಮಲಗಿದ್ದ ರಾಜಸ್ಥಾನ ತಂಡವು, ಇದೀಗ ಕೊಲ್ಕತ್ತಾ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ.

Written by - Bhavishya Shetty | Last Updated : Apr 18, 2022, 09:07 AM IST
  • ರಾಜಸ್ಥಾನ ರಾಯಲ್ಸ್‌ - ಕೊಲ್ಕತ್ತಾ ನೈಟ್‌ ರೈಡರ್ಸ್‌ ಮುಖಾಮುಖಿ
  • ಮುಂಬೈನ ಬ್ರಬರ್ನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ
  • ಕಣಕ್ಕಿಳಿಯಲಿರುವ ಆಟಗಾರರ ಸಂಭಾವ್ಯ ಪಟ್ಟಿ ಇಲ್ಲಿದೆ
ಐಪಿಎಲ್‌ 2022: ಇಂದು ರಾಜಸ್ಥಾನ ರಾಯಲ್ಸ್‌ - ಕೊಲ್ಕತ್ತಾ ನೈಟ್‌ ರೈಡರ್ಸ್‌ ಮುಖಾಮುಖಿ title=
Indian Premier League

ಇಂದು ಮುಂಬೈನ ಬ್ರಬರ್ನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್‌ ಟೂರ್ನಿಯ 30ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವು ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಎದುರಿಸಲಿದೆ. ಅಂಕಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿರುವ ರಾಜಸ್ಥಾನ ತಂಡಕ್ಕೆ 6 ನೇ ಸ್ಥಾನದಲ್ಲಿರುವ ಕೊಲ್ಕತ್ತಾ ಟೀಂ ಸವಾಲು ನೀಡಲಿದೆ. 

ಇದನ್ನು ಓದಿ: ಮುಂದುವರೆದ ಗುಜರಾತ್‌ ಗೆಲುವಿನ ನಾಗಾಲೋಟ: ಮತ್ತೆ ಎಡವಿದ ಚೆನ್ನೈ

ಕಳೆದ ಬಾರಿ ಗುಜರಾತ್ ಟೈಟಾನ್ಸ್ ವಿರುದ್ಧ ಮಖಾಡೆ ಮಲಗಿದ್ದ ರಾಜಸ್ಥಾನ ತಂಡವು, ಇದೀಗ ಕೊಲ್ಕತ್ತಾ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ. ಜೋಸ್‌ ಬಟ್ಲರ್‌ ವೇಗದ ಆರಂಭದ ಹೊರತಾಗಿಯೂ ಸಹ ರಾಜಸ್ಥಾನ ರಾಯಲ್ಸ್‌ ಕಳೆದ ಮ್ಯಾಚ್‌ನಲ್ಲಿ ಸೋಲನ್ನು ಅನುಭವಿಸಿತ್ತು. 

ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಇತ್ತೀಚಿನ ಪಂದ್ಯಗಳಲ್ಲಿ ನಿರೀಕ್ಷಿತ ಸಾಧನೆ ಮಾಡಿಲ್ಲ. ಶ್ರೇಯಸ್ ಅಯ್ಯರ್ ಮತ್ತು ವರುಣ್ ಚಕ್ರವರ್ತಿ ಮತ್ತೆ ತಂಡವನ್ನು ಲಯಕ್ಕೆ ತರುವ ಅಗತ್ಯವಿದೆ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಮಾತು. ಎರಡೂ ಟೀಂಗಳು ಸಮಬಲ ಹೊಂದಿರುವ ಹಿನ್ನೆಲೆ ಯಾವ ರೀತಿ ಪ್ರದರ್ಶನ ನೀಡಲಿದೆ? ಯಾವ ತಂಡಕ್ಕೆ ಗೆಲುವು ಲಭಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.  

ಇದನ್ನು ಓದಿ: IPL 2022: ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ ಉಮ್ರಾನ್ ಮಲಿಕ್

ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಆಟಗಾರರ ಸಂಭಾವ್ಯ ಪಟ್ಟಿ: 

ರಾಜಸ್ಥಾನ್ ರಾಯಲ್ಸ್ : ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ

ಕೋಲ್ಕತ್ತಾ ನೈಟ್ ರೈಡರ್ಸ್: ಆರನ್ ಫಿಂಚ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್, ಶೆಲ್ಡನ್ ಜಾಕ್ಸನ್, ನಿತೀಶ್ ರಾಣಾ, ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಸುನಿಲ್ ನರೈನ್, ಅಮನ್ ಖಾನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News