ʼನರೇಂದ್ರ ಮೋದಿ ನಿಲಯʼ: ಮಗಳಿಗಾಗಿ ನಿರ್ಮಿಸಿದ ಮನೆಗೆ ಪ್ರಧಾನಿ ಹೆಸರಿಟ್ಟ ಅಭಿಮಾನಿ

ಗೌಡರ ಹಾಲೇಶ್ ಅವರು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ವಾಸವಾಗಿರುವ ತಮ್ಮ ಪುತ್ರಿ ಭುವನೇಶ್ವರಿ ಎಂಬವರಿಗಾಗಿ ಚನ್ನಗಿರಿಯಲ್ಲಿ ಮನೆ‌‌ ನಿರ್ಮಾಣ ಮಾಡಿದ್ದಾರೆ.   

Written by - Bhavishya Shetty | Last Updated : May 1, 2022, 02:49 PM IST
  • ಮಗಳಿಗಾಗಿ ನಿರ್ಮಿಸಿದ ಮನೆಗೆ ಮೋದಿ ಹೆಸರು
  • ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ ಗೌಡರ ಹಾಲೇಶ್‌
  • ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿದೆ ಮನೆ
ʼನರೇಂದ್ರ ಮೋದಿ ನಿಲಯʼ: ಮಗಳಿಗಾಗಿ ನಿರ್ಮಿಸಿದ ಮನೆಗೆ ಪ್ರಧಾನಿ ಹೆಸರಿಟ್ಟ ಅಭಿಮಾನಿ title=
ʼNarendra Modi Nilayaʼ

ದಾವಣಗೆರೆ: ಮಗಳಿಗಾಗಿ ನಿರ್ಮಾಣ ಮಾಡಿದ ಮನೆಗೆ ನರೇಂದ್ರ ಮೋದಿಯವರ ಹೆಸರನ್ನು ನಾಮಕರಣ ಮಾಡಿ ವ್ಯಕ್ತಿಯೊಬ್ಬರು ಅಭಿಮಾನ ಮೆರೆದಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೌಡರ ಹಾಲೇಶ್‌ ಎಂಬವರು ಮೋದಿ ಹೆಸರಿಟ್ಟಿದ್ದಾರೆ. 

ಇದನ್ನು ಓದಿ: Happy Birthday Anushka Sharma: ಎಂದಿಗೂ ನೋಡಿರದ ಅನುಷ್ಕಾ ಶರ್ಮಾ ಅಪರೂಪದ ಫೋಟೋಗಳು!

ಗೌಡರ ಹಾಲೇಶ್ ಅವರು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ವಾಸವಾಗಿರುವ ತಮ್ಮ ಪುತ್ರಿ ಭುವನೇಶ್ವರಿ ಎಂಬವರಿಗಾಗಿ ಚನ್ನಗಿರಿಯಲ್ಲಿ ಮನೆ‌‌ ನಿರ್ಮಾಣ ಮಾಡಿದ್ದಾರೆ. ಈ ಮನೆಗೆ ಹೆಸರೇನು ಇಡುವುದು ಎಂದು ಯೋಚಿಸುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಇಡುವುದಾಗಿ ತೀರ್ಮಾನ ಮಾಡಿದ್ದಾರೆ.  ಹಾಲೇಶ್ ಅವರು ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದಾರೆ. 

ಮನೆ‌ ನಿರ್ಮಾಣ ಮಾಡಿದ‌ ಬಳಿಕ ಅದಕ್ಕೆ ನಾಮಕರಣ ಮಾಡಲು ಸೂಕ್ತ ಹೆಸರಿಗಾಗಿ ಹಾಲೇಶ್‌ ಹುಡುಕಾಟ ನಡೆಸಿದ್ದರಂತೆ. ಈ ಸಂದರ್ಭದಲ್ಲಿ ಸಿಕ್ಕ ಹೆಸರುಗಳೆಲ್ಲಾ ಇವರಿಗೆ ಇಷ್ಟವಾಗಿರಲಿಲ್ಲ. ಅಂತಿಮವಾಗಿ ಪ್ರಧಾನಿ ಹೆಸರಿಟ್ಟರೆ ಒಳಿತಾಗುತ್ತದೆಯೇ ಎಂದು ಜ್ಯೋತಿಷಿಗಳ ಬಳಿ ಕೇಳಿದಾಗ, ಅದಕ್ಕೆ ಅಭ್ಯಂತರವೇನು ಇಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಹೊಸ ಮನೆಗೆ ʼನರೇಂದ್ರ ಮೋದಿ ನಿಲಯʼ ಎಂದು ಹೆಸರಿಟ್ಟಿದ್ದಾರೆ. 

ಗೇಟ್‌ಗೆ ಮೋದಿ ಭಾವಚಿತ್ರ ಅಳವಡಿಕೆ: 
ಚನ್ನಗಿರಿಯ ಕಗತೂರು ರಸ್ತೆಯಲ್ಲಿ ನಿರ್ಮಿಸಲಾದ ಈ ಹೊಸ ಮನೆ ನೋಡಲು ಅಂದವಾಗಿದೆ. ಇನ್ನು ಈ ಮನೆ ಗೇಟ್‌ ಬಳಿ ಮೋದಿ ಭಾವಚಿತ್ರವನ್ನು ಅಳವಡಿಸಿದ್ದಾರೆ. ಸದ್ಯ ಈ ಮನೆ ಎಲ್ಲರ ಆಕರ್ಷಣೆಗೆ ಒಳಗಾಗಿದ್ದು, ಸಖತ್‌ ಸುದ್ದಿಯಾಗಿದೆ. 

ಇದನ್ನು ಓದಿ: ಮೋದಿ ಗುಣಗಾನ ಮಾಡಿದ್ದ Kili Paul ಮೇಲೆ ಕಿಡಿಗೇಡಿಗಳಿಂದ ಹಲ್ಲೆ

ಮೇ 3ರಂದು ಗೃಹ ಪ್ರವೇಶ: 
ಪ್ರಧಾನಿ ಮೋದಿಯವರ ಹೆಸರಿಟ್ಟಿರುವ ಈ ಮನೆಯ ಗೃಹ ಪ್ರವೇಶಕ್ಕೆ ದಿನ ನಿಗದಿಯಾಗಿದ್ದು, ಮೇ 3ರಂದು ಕಾರ್ಯಕ್ರಮ ನಡೆಯಲಿದೆ. ಗೃಹ ಪ್ರವೇಶಕ್ಕೆ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಆಗಮಿಸಲಿದ್ದಾರೆ.  
 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News