ಏನಿದು ಟಾಪ್ ಅಪ್ ಹೋಂ ಲೋನ್ ? ಏನಿದರ ಪ್ರಯೋಜನ ?

ಹೋಮ್ ಲೋನ್ ತೆಗೆದುಕೊಳ್ಳುವ ಮೂಲಕ ನೀವು ಈಗಾಗಲೇ ಮನೆಯನ್ನು ಖರೀದಿಸಿದ್ದರೆ, ಟಾಪ್ ಅಪ್ ಲೋನ್ ಅನ್ನು ಹೇಗೆ ತೆಗೆದುಕೊಳ್ಳಬಹುದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
 

What is a Top-up Home Loan: ಹೊಸ ಮನೆಯನ್ನು ಖರೀದಿಸುವುದು ಅಥವಾ ಮನೆಯ ನವೀಕರಣಗೊಳಿಸುವುದು ಬಹಳ ಮುಖ್ಯವಾಗಿದೆ. ಕೆಲವೊಮ್ಮೆ ಮನೆಯಲ್ಲಿ ಹೊಸ ವಿನ್ಯಾಸವನ್ನು ಮಾಡಲು ಬಯಸುತ್ತೇವೆ. ಆದರೆ, ನಮ್ಮ ಬಳಿ ಹಣವಿರುವುದಿಲ್ಲ. ಕೆಲವೊಮ್ಮೆ, ಗೃಹ ಸಾಲದ ಸಹಾಯದಿಂದ ಖರೀದಿಸಿದ ಹೊಸ ಮನೆಯ ಒಳ ವಿನ್ಯಾಸ,   ಬಾಹ್ಯ ಅಲಂಕಾರ, ಅಥವಾ ಫೈನಲ್ ಟಚ್ ನೀಡುವ ಅಗತ್ಯವಿರುತ್ತದೆ. ಅಂತಹ ಸಂದರ್ಭಗಳಲ್ಲಿ ಮತ್ತೆ ತೆಗೆದುಕೊಳ್ಳುವ ಸಾಲವನ್ನು ಟಾಪ್ ಅಪ್ ಲೋನ್ ಎಂದು ಕರೆಯಲಾಗುತ್ತದೆ. ನಿಮ್ಮ ಮನೆಗೆ ಹೊಸ ನೋಟವನ್ನು ನೀಡಲು ಅಥವಾ ಅದರ ಅಗತ್ಯ ರಿಪೇರಿಗಾಗಿ ಇದನ್ನು ತೆಗೆದುಕೊಳ್ಳಬಹುದು. ಹೋಮ್ ಲೋನ್ ತೆಗೆದುಕೊಳ್ಳುವ ಮೂಲಕ ನೀವು ಈಗಾಗಲೇ ಮನೆಯನ್ನು ಖರೀದಿಸಿದ್ದರೆ, ಟಾಪ್ ಅಪ್ ಲೋನ್ ಅನ್ನು ಹೇಗೆ ತೆಗೆದುಕೊಳ್ಳಬಹುದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /4

ನಿಮ್ಮ ಮೊಬೈಲ್ ಫೋನ್‌ನಲ್ಲಿ ಟಾಪ್ ಅಪ್ ರೀಚಾರ್ಜ್ ಮಾಡಿದಾಗ ನಿಮ್ಮ ಫೋನ್‌ನಲ್ಲಿ ಬ್ಯಾಲೆನ್ಸ್ ಬರುವಂತೆಯೇ ಹೋಮ್ ಲೋನ್ ಅನ್ನು ಟಾಪ್ ಅಪ್ ಮಾಡಬಹುದು. ಟಾಪ್ ಅಪ್ ಲೋನನ್ನು ಸಹ 10 ವರ್ಷಗಳ ಅವಧಿಗೆ ತೆಗೆದುಕೊಳ್ಳಬಹುದು. ಹೋಮ್ ಲೋನ್ ತೆಗೆದುಕೊಂಡ ಸ್ವಲ್ಪ ಸಮಯದ ನಂತರ ನೀವು ಈ ಸಾಲವನ್ನು ತೆಗೆದುಕೊಳ್ಳಬಹುದು. ಗೃಹ ಸಾಲದ ಮರುಪಾವತಿ ಮಾದರಿಯ ಆಧಾರದ ಮೇಲೆ ಬ್ಯಾಂಕ್‌ಗಳು ಸಾಮಾನ್ಯವಾಗಿ ನಿಮಗೆ ಟಾಪ್ ಅಪ್ ಲೋನ್ ನೀಡುತ್ತವೆ. ಇದು ವಾಸ್ತವವಾಗಿ ವೈಯಕ್ತಿಕ ಸಾಲದಂತಿದೆ. ಮನೆಯ ಅಗತ್ಯಗಳಿಗಾಗಿ ನೀವು ಅದನ್ನು ತೆಗೆದುಕೊಳ್ಳಬಹುದು.  

2 /4

ನೀವು ಯಾವುದೇ ಬ್ಯಾಂಕಿನಿಂದ ಗೃಹ ಸಾಲ ಪಡೆದಿದ್ದರೆ ಮಾತ್ರ ಟಾಪ್ ಅಪ್ ಲೋನ್ ತೆಗೆದುಕೊಳ್ಳಬಹುದು. ಇದಕ್ಕೆ ಬೇಕಾದ ಷರತ್ತುಗಳು ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ರೀತಿಯಲ್ಲಿರುತ್ತದೆ. ನೀವು ಯಾವ ಬ್ಯಾಂಕ್ ನಿಂದ ಗೃಹ ಸಾಲ ಪಡೆದಿರುತ್ತೀರಿ ಅದೇ  ಬ್ಯಾಂಕಿನಿಂದ ಟಾಪ್ ಅಪ್ ಲೋನ್ ಪಡೆದುಕೊಳ್ಳಬಹುದು. ಗೃಹ ಸಾಲದ ಟಾಪ್ ಅಪ್‌ಗಾಗಿ ಅದೇ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ಅಲ್ಲಿ ಟಾಪ್ ಅಪ್ ಸೌಲಭ್ಯವನ್ನು ಒದಗಿಸದಿದ್ದರೆ  ಇನ್ನೊಂದು ಬ್ಯಾಂಕ್ ಅನ್ನು ಸಂಪರ್ಕಿಸಬಹುದು.  

3 /4

ನಿಮಗೆ ಟಾಪ್ ಅಪ್ ಲೋನ್ ನೀಡುವ ಮೊದಲು, ಬ್ಯಾಂಕ್‌ಗಳು ಗೃಹ ಸಾಲದ ಮೊತ್ತ, ಆಸ್ತಿಯ ಮಾರುಕಟ್ಟೆ ಮೌಲ್ಯ ಮತ್ತು ನಿಮ್ಮ ಸಾಲದ ಕಂತು ಪಾವತಿಯ ದಾಖಲೆಯನ್ನು ಪರಿಶೀಲಿಸುತ್ತವೆ. ಗೃಹ ಸಾಲ ಮತ್ತು ಟಾಪ್ ಅಪ್ ಸಾಲದ ಒಟ್ಟು ಮೊತ್ತವು ಮನೆಯ ಮಾರುಕಟ್ಟೆ ಮೌಲ್ಯದ 70% ಮೀರುವಂತಿಲ್ಲ. ಆದಾಗ್ಯೂ, ಪ್ರತಿ ಬ್ಯಾಂಕ್ ಈ ಮಿತಿಯನ್ನು ತನ್ನದೇ ಆದ ಮೇಲೆ ಲೆಕ್ಕಾಚಾರದಲ್ಲಿ ನೋಡುತ್ತದೆ. 

4 /4

ಟಾಪ್ ಅಪ್ ಸಾಲವನ್ನು ತೆಗೆದುಕೊಳ್ಳುವ ಮೂಲಕ ಮನೆಯ ಪಾರ್ಕಿಂಗ್ ಸ್ಥಳದ ವೆಚ್ಚವನ್ನು ಪಾವತಿಸುತ್ತಿದ್ದರೆ, ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಪಾರ್ಕಿಂಗ್ ಶುಲ್ಕವು ವಾಸ್ತವವಾಗಿ ಮನೆಯ ವೆಚ್ಚದ ಒಂದು ಭಾಗವಾಗಿದೆ. ಅಸಲು ಮೊತ್ತದ ಮೇಲೆ ರೂ 1 ಲಕ್ಷದವರೆಗಿನ ಟಾಪ್ ಅಪ್ ಲೋನ್ ಮೊತ್ತದ ಮೇಲೆ ಮತ್ತು ಬಡ್ಡಿ ಮೊತ್ತದ ಮೇಲೆ ವಾರ್ಷಿಕ 2 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.