India vs South Africa : ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸಜ್ಜಾಗಿದ್ದು, ಈಗ ಟೀಂಗೆ 5 ಜನ ಮಾರಕ ಬೌಲರ್‌ಗಳು ಎಂಟ್ರಿ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಟೀಂ ಇಂಡಿಯಾದ ಬೌಲಿಂಗ್ ತುಂಬಾ ಬಲಿಷ್ಠವಾಗಿದೆ. ವೇಗದ ಬೌಲರ್‌ಗಳ ಬಲದಿಂದ ಭಾರತ ವಿಶ್ವದ ಕ್ರಿಕೆಟ್ ಟೀಂಗಳಿಗೆ ತೊಡೆ ತಟ್ಟುತ್ತಿದೆ. ಕ್ಯಾಪ್ಟನ್ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧ ಮೂವರು ಬೌಲರ್‌ಗಳಿಗೆ ಅವಕಾಶ ನೀಡಲಿದ್ದಾರೆ.
ತಂಡಕ್ಕೆ ಎಂಟ್ರಿ ನೀಡಲಿದ್ದಾರೆ ಈ ಬೌಲರ್‌ಗಳು
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಇದ್ದಾರೆ. ಆಫ್ರಿಕಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಎಂಟ್ರಿ ಖಚಿತವಾಗಿದ್ದು, ಏಕೆಂದರೆ ಭುವನೇಶ್ವರ್ ಬೌಲಿಂಗ್ ನಲ್ಲಿ ಅಪಾರ ಅನುಭವ ಹೊಂದಿದ್ದು, ಇವರು ತಂಡಕ್ಕೆ ಉಪಯೋಗವಾಗಬಹುದು. ಹಾಗೆ, ಡೆತ್ ಓವರ್ ಗಳಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಹರ್ಷಲ್ ಪಟೇಲ್ ಅವರನ್ನು ಕ್ಯಾಪ್ಟನ್ ಕೆಎಲ್ ರಾಹುಲ್ ಪ್ಲೇಯಿಂಗ್ 11 ಗೆ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ : ವರ್ಷದಲ್ಲಿ ಎರಡು ಬಾರಿ ಐಪಿಎಲ್! ವಿಶೇಷ ಪ್ರಾಜೆಕ್ಟ್ ಬಗ್ಗೆ ಆಕಾಶ್ ಚೋಪ್ರಾ ಹೇಳಿದ್ದೇನು?
ಐಪಿಎಲ್‌ನಲ್ಲಿ ಶಕ್ತಿ ಪ್ರದರ್ಶಿಸಿದ ಈ ಆಟಗಾರರು
ಉಮ್ರಾನ್ ಮಲಿಕ್ ಐಪಿಎಲ್ 2022 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ತಮ್ಮ ಆಟದಿಂದ ಎಲ್ಲರ ಮನ ತಮ್ಮದೇ ಸೆಳೆದಿದ್ದಾರೆ. ಉಮ್ರಾನ್ ಐಪಿಎಲ್ 2022ರ 14 ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿದ್ದಾರೆ. ಮಲಿಕ್ ಸನ್‌ರೈಸರ್ಸ್ ಹೈದರಾಬಾದ್‌ನ ಅತಿದೊಡ್ಡ ಪಂದ್ಯ ವಿಜೇತರಾಗಿ ಹೊರಹೊಮ್ಮಿದರು. ಈ ಕಾರಣಕ್ಕಾಗಿ ಮಲಿಕ್ ಅಮೇಜಿಂಗ್ ಆಟಗಾರ ಎಂಬ ಪ್ರಶಸ್ತಿ ಪಡೆದರು. ಉಮ್ರಾನ್‌ನ ಅಪಾಯಕಾರಿ ಆಟ ನೋಡಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. ಉಮ್ರಾನ್‌ನ ದೊಡ್ಡ ಶಕ್ತಿ ಎಂದರೆ ಅವನ ಬೌಲಿಂಗ್ ವೇಗ. ಈ ಕಾರಣಕ್ಕಾಗಿ ರಾಹುಲ್ ಉಮ್ರಾನ್ ಗೆ ಪ್ಲೇಯಿಂಗ್ 11 ಅವಕಾಶ ನೀಡಬಹುದು.
ಟೀಂನಿಂದ ಹೊರಗುಳಿಯಬಹುದು ಈ ಬೌಲರ್‌ಗಳು
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಅವೇಶ್ ಖಾನ್ ಮತ್ತು ಅರ್ಶ್‌ದೀಪ್ ಸಿಂಗ್ ಹೊರಗುಳಿಯಬಹುದು, ಏಕೆಂದರೆ ಈ ಇಬ್ಬರೂ ಬೌಲರ್‌ಗಳು ಡೆತ್ ಓವರ್‌ಗಳಲ್ಲಿ ಅಪಾಯಕಾರಿ ಬೌಲಿಂಗ್ ಮಾಡುತ್ತಾರೆ. ಆದರೆ ಹರ್ಷಲ್ ಪಟೇಲ್ ಈ ಎರಡೂ ಬೌಲರ್‌ಗಳನ್ನು ಸರಿದೂಗಿಸಬಹುದು. ಹಾಗೆ, ಹರ್ಷಲ್ ಪಟೇಲ್ ಕೂಡ ಬಹಳ ಮಿತವ್ಯಯಕಾರಿ ಎಂದು ಹೇಳಬಹುದು. ಐದು ತಿಂಗಳ ನಂತರ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಬೇಕಿದೆ. ದಕ್ಷಿಣ ಆಫ್ರಿಕಾ ಸರಣಿಯು ಪೂರ್ವಸಿದ್ಧತೆಯ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ.
ಇನ್ನೂವರೆಗೂ ತವರಿನಲ್ಲಿ ಭಾರತ ಸರಣಿ ಗೆದ್ದಿಲ್ಲ
ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಒಂದೇ ಒಂದು ಟಿ20 ಸರಣಿ ಗೆದ್ದಿಲ್ಲ. ಹೀಗಾಗಿ ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಇತಿಹಾಸ ಬದಲಿಸಲು ಮೈದಾನಕ್ಕಿಳಿಯಲಿದೆ. ಈ ಬಾರಿ ತಂಡವು ಅನೇಕ ಮ್ಯಾಚ್ ವಿನ್ನರ್ ಆಟಗಾರರನ್ನು ಹೊಂದಿದೆ, ಈ ಕಾರಣದಿಂದ ಸರಣಿಯನ್ನು ಗೆಲ್ಲಬಹುದು ಎಂಬ ನಿರೀಕ್ಷ ಇದೆ.
ಇದನ್ನೂ ಓದಿ : Ind vs SA : ಟೀಂ ಇಂಡಿಯಾದ ಈ ಬ್ಯಾಟ್ಸ್‌ಮನ್ ಗೆ ಹೆದರಿದ್ದಾರಂತೆ ಆಫ್ರಿಕನ್ ಬೌಲರ್‌ಗಳು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ