Tips To Become Rich: ಜೀವನದಲ್ಲಿ ಶ್ರೀಮಂತರಾಗುವ ಬಯಕೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಆದರೆ, ಕೆಲವರಿಗೆ ಹಣ ಗಳಿಸಲು ಸಾಧ್ಯವಾಗುವುದಿಲ್ಲ ಮತ್ತು ಕೆಲವರಿಗೆ ಹಣ ಗಳಿಕೆ ಮಾಡಿಯೂ ಕೂಡ ಅದನ್ನು ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ವಾಸ್ತುದೋಷಗಳ ಕಾರಣ ಪದೇ ಪದೇ ಜನರು ಧನಹಾನಿಯನ್ನು ಎದುರಿಸಿದರೆ, ಕೆಲವೊಮ್ಮೆ ಅನಾವಶ್ಯಕ ಖರ್ಚುಗಳು ಅವರ ಬೆನ್ನು ಬಿಡುವುದಿಲ್ಲ.ಇನ್ನೊಂದೆಡೆ ಆದಾಯ ಹೆಚ್ಚಿಸುವ ಅವರ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತವೆ.
Tips To Become Rich: ಜೀವನದಲ್ಲಿ ಶ್ರೀಮಂತರಾಗುವ ಬಯಕೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಆದರೆ, ಕೆಲವರಿಗೆ ಹಣ ಗಳಿಸಲು ಸಾಧ್ಯವಾಗುವುದಿಲ್ಲ ಮತ್ತು ಕೆಲವರಿಗೆ ಹಣ ಗಳಿಕೆ ಮಾಡಿಯೂ ಕೂಡ ಅದನ್ನು ಸಂಗ್ರಹಿಸಿಡಲು ಸಾಧ್ಯವಾಗುವುದಿಲ್ಲ. ವಾಸ್ತುದೋಷಗಳ ಕಾರಣ ಪದೇ ಪದೇ ಜನರು ಧನಹಾನಿಯನ್ನು ಎದುರಿಸಿದರೆ, ಕೆಲವೊಮ್ಮೆ ಅನಾವಶ್ಯಕ ಖರ್ಚುಗಳು ಅವರ ಬೆನ್ನು ಬಿಡುವುದಿಲ್ಲ.ಇನ್ನೊಂದೆಡೆ ಆದಾಯ ಹೆಚ್ಚಿಸುವ ಅವರ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತವೆ. ನಿಮ್ಮ ವಿಷಯದಲ್ಲಿಯೂ ಕೂಡ ಇದೆ ರೀತಿ ಸಂಭವಿಸುತ್ತಿದ್ದರೆ, ಮನೆಯ ಮುಖ್ಯದ್ವಾರದ ಕುರಿತಾದ ಈ ಉಪಾಯಗಳನ್ನು ಅನುಸರಿಸಿ. ಈ ಉಪಾಯಗಳು ಧನಪ್ರಾಪ್ತಿಯ ವೇಗ ಹೆಚ್ಚಿಸಲು ತುಂಬಾ ಸಹಕಾರಿಯಾಗಿವೆ.
(ಹಕ್ಕುತ್ಯಾಗ-ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ಓದಿ-ಪತ್ನಿ ತಮ್ಮ ಪತಿ ಜೊತೆ ಈ ರಹಸ್ಯ ಎಂದಿಗೂ ಹೇಳಿಕೊಳ್ಳುವುದಿಲ್ಲವಂತೆ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಶ್ರೀಗಣೇಶನಿಗೆ ವಿಘ್ನಹರ್ತಾ ಅಂದರೆ ಸಕಲ ಸಂಕಷ್ಟಗಳನ್ನು ನಿವಾರಿಸುವವ ಎಂದು ಕರೆಯಲಾಗುತ್ತದೆ. ಹೀಗಾಗಿ ಮನೆಯ ಮುಖ್ಯದ್ವಾರದ ಮೇಲೆ ಗಣೇಶನ ಫೋಟೋ ಅಂಟಿಸಿ ಸಂಕಷ್ಟಗಳಿಂದ ಪಾರಾಗಬಹುದು. ಒಂದು ವೇಳೆ ಮನೆಯಲ್ಲಿ ವಾಸ್ತುದೋಷವಿದ್ದರೆ, ಮುಖ್ಯದ್ವಾರದ ಚೌಕಟ್ಟಿನ ಮೇಲ್ಭಾಗದಲ್ಲಿ ಒಂದು ಮನೆಯೊಳಗೆ ನೋಡುವ ಮತ್ತು ಇನ್ನೊಂದು ಮನೆಯಿಂದ ಹೊರನೋಡುವ ಗಣೇಶನ ಟೈಲ್ಸ್ ಅಥವಾ ಚಿತ್ರವನ್ನು ಹಚ್ಚಿ. ಎರಡೂ ಗಣಪನ ಬೆನ್ನುಗಳು ಪರಸ್ಪರ ಅಂಟಿಕೊಂಡಿದ್ದರೆ ಇನ್ನೂ ಉತ್ತಮ.ಈ ರೀತಿ ಮಾಡುವುದರಿಂದ ಮನೆಯಲ್ಲಿ ಬಡತನ ಬರುವುದಿಲ್ಲ ಹಾಗೂ ಧನದ ಹರಿವು ಮನೆಯಲ್ಲಿ ಹೆಚ್ಚಾಗುತ್ತದೆ.
2. ಸೂರ್ಯ ದೇವ ಅಪಾರ ಶಕ್ತಿಯನ್ನು ನೀಡುತ್ತಾನೆ. ಯಶಸ್ಸು, ಆರೋಗ್ಯ ಹಾಗೂ ಸಮೃದ್ಧಿಯನ್ನು ದಯಪಾಲಿಸುತ್ತಾನೆ. ಹೀಗಾಗಿ ಮನೆಯ ಮುಖ್ಯದ್ವಾರದ ಮೇಲೆ ತಾಮ್ರದಿಂದ ಮಾಡಿದ ಸೂರ್ಯನ ಪ್ರತಿಮೆಯನ್ನು ಹಚ್ಚಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವಾಗಲು ಸಕಾರಾತ್ಮಕತೆ ಹೆಚ್ಚಾಗುತ್ತದೆ. ಇದರ ಜೊತೆಗೆ ವಾಸ್ತು ದೋಷ ಕೂಡ ನಿವಾರಣೆಯಾಗುತ್ತದೆ.
3. ಶನಿ ದೇವನ ಕೃಪೆಯಿಂದ ಯಾವುದೇ ವ್ಯಕ್ತಿಯ ಭಾಗ್ಯ ಕ್ಷಣಾರ್ಧದಲ್ಲಿ ಬದಲಾಯಿಸುತ್ತದೆ. ಸಾಮಾನ್ಯವಾಗಿ ಶಮಿ ವೃಕ್ಷ ಶನಿದೇವನನ್ನು ಪ್ರತಿನಿಧಿಸುತ್ತದೆ. ಹೀಗಿರುವಾಗ ಮನೆಯ ಮುಖ್ಯದ್ವಾರದ ಎರಡೂ ಕಡೆಗಳಲ್ಲಿ ಶಮಿ ಗಿಡಗಳನ್ನು ಹಚ್ಚಿ. ಇದರಿಂದ ನಿಮ್ಮ ಜೀವನದಲ್ಲಿನ ಕೆಟ್ಟ ಕಾಲ ದೂರಾಗುತ್ತದೆ ಮತ್ತು ಎಲ್ಲಾ ಸಂಕಷ್ಟಗಳು ನಿವಾರಣೆಯಾಗಿ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ. ನಿತ್ಯ ಶಮಿ ವೃಕ್ಷಕ್ಕೆ ನೀರುಣಿಸಿ ಹಾಗೂ ಪೂಜೆ ಮಾಡುವುದನ್ನು ಮರೆಯಬೇಡಿ.
4. ವಾಸ್ತು ಶಾಸ್ತ್ರದಲ್ಲಿ ಕೆಲ ವಿಶೇಷ ಚಿಹ್ನೆಗಳನ್ನು ಅತ್ಯಂತ ಶುಭ ಎಂದು ಹೇಳಲಾಗಿದೆ. ಈ ಚಿಹ್ನೆಗಳು ಗುಡ್ ಲುಕ್ ಗೆ ಕಾರಣ ಎನ್ನಲಾಗುತ್ತದೆ. ಈ ಚಿಹ್ನೆಗಳನ್ನು ಮಾಹೆಯ ಮುಖ್ಯದ್ವಾರದ ಮೇಲೆ ಬಳಸಿ. ಉದಾಹರಣೆಗೆ ಸ್ವಸ್ತಿಕ ಚಿಹ್ನೆ, ಶುಭ-ಲಾಭ, ಓಂ ಇತ್ಯಾದಿಗಳು. ಈ ರೀತಿ ಮಾಡುವುದರಿಂದ ಮನೆಯಲ್ಲಿ ತುಂಬಾ ಸುಖ-ಸಮೃದ್ಧಿ ಹರಿದುಬರುತ್ತದೆ ಎನ್ನಲಾಗುತ್ತದೆ.
5. ಮನೆಯ ಮುಖ್ಯದ್ವಾರದ ಎರಡೂ ಬದಿಗೆ ನಿತ್ಯ ಹಸುವಿನ ತುಪ್ಪದ ದೀಪ ಬೆಳಗಿ. ಇದರಿಂದ ಮನೆಗೆ ತಾಯಿ ಲಕ್ಷ್ಮಿಯ ಆಗಮನವಾಗುತ್ತದೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಮನೆ ಧನ-ಧಾನ್ಯ ಮತ್ತು ಸಮೃದ್ಧಿಯಿಂದ ತುಂಬಿ ತುಳುಕುತ್ತದೆ