ತೆರಿಗೆ ವಂಚನೆ ಆರೋಪ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ‌ ಮೇಲೆ ಐಟಿ ದಾಳಿ

ಬೆಳ್ಳಂ ಬೆಳಗ್ಗೆಯೇ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಸುಮಾರು 45 ಕ್ಕೂ ಹೆಚ್ಚು ಕಡೆ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ.  ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್, ಬಿಲ್ಡರ್ ಗಳ ಮನೆ ಮೇಲೂ ದಾಳಿ ನಡೆಸಲಾಗಿದೆ. 

Written by - Ranjitha R K | Last Updated : Jun 23, 2022, 11:08 AM IST
  • ಮುಂಜಾನೆಯೇ ನುಂಗು ಬಾಕರಿಗೆ ಶಾಕ್
  • ಏಕ ಕಾಲದಲ್ಲಿ ಅನೇಕ ಕಡೆ ದಾಳಿ
  • ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ರೈಡ್
ತೆರಿಗೆ ವಂಚನೆ ಆರೋಪ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ‌ ಮೇಲೆ ಐಟಿ ದಾಳಿ  title=
it raid bengaluru

ಬೆಂಗಳೂರು : ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಐಟಿ ದಾಳಿ ನಡೆದಿದೆ.  ಸುಮಾರು 45 ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ  ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಆರೋಪದ  ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.  

ಬೆಳ್ಳಂ ಬೆಳಗ್ಗೆಯೇ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಸುಮಾರು 45ಕ್ಕೂ ಹೆಚ್ಚು ಕಡೆ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ.  ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್, ಬಿಲ್ಡರ್ ಗಳ ಮನೆ ಮೇಲೂ ದಾಳಿ ನಡೆಸಲಾಗಿದೆ. ದಿವ್ಯಶ್ರೀ ಗ್ರೂಫ್,‌ ರೇವಾ ಯೂನಿವರ್ಸಿಟಿ, ಕೃಷ್ಣದೇವರಾಯ ಇನ್ ಸ್ಟಿಟ್ಯೂಟ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 
ಬೆಂಗಳೂರಿನ ದಿವ್ಯ ಶ್ರೀ ಗ್ರೂಪ್ ನ ಹಲವು ಬ್ರಾಂಚ್ ಗಳ ಮೇಲೆ ದಾಳಿ ನಡೆಸಲಾಗಿದೆ. 

ಇದನ್ನೂ ಓದಿ : ಏಷಿಯನ್ ಚಾಂಪಿಯನ್ಸ್ ಗೇಮ್ಸ್ ಕುಸ್ತಿಯಲ್ಲಿ ಚಿನ್ನ ಗೆದ್ದ ಮುಧೋಳದ ಕುಸ್ತಿಪಟು ನಿಂಗಪ್ಪ ಗೆನೆಣ್ಣವರ
 
ಆದಾಯ ತೆರಿಗೆಯಲ್ಲಿ ವಂಚನೆ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್, ಬಿಲ್ಡರ್ ಗಳ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಸರ್ಚ್ ವಾರೆಂಟ್ ಪಡೆದು ಬಂದಿರುವ ತೆರಿಗೆ ಇಲಾಖೆ ಅಧಿಕಾರಿಗಳು ಬೆಳಿಗ್ಗೆಯೇ ತೆರಿಗೆ ವಂಚಕರಿಗೆ ಶಾಕ್ ನೀಡಿದ್ದಾರೆ. 

ಇನ್ನು ಪ್ರಮುಖವಾಗಿ ಮೂರು ವಿಚಾರಗಳಿಗೆ ಸಂಬಂಧಿಸಿ ಐಟಿ ದಾಳಿ ನಡೆದಿದೆ ಎನ್ನಲಾಗಿದೆ. 
1)ವಿದೇಶಿ ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ‌ವಾಗಿ ಶುಲ್ಕ ಸಂಗ್ರಹ ಆರೋಪ
2)ಸರ್ಕಾರದ ನಿಯಮಾವಳಿಗಳನ್ನ ಮೀರಿ ಪೇಮೆಂಟ್ ಕೋಟಾ ಸೀಟ್ ಗಳನ್ನ ಮ್ಯಾನೇಜ್ ಮೆಂಟ್ ಗಳು ಬ್ಲಾಂಕಿಂಗ್ ಮಾಡಿ ಹೆಚ್ಚಿಸಿರುವ ಆರೋಪ
3)ಈ ಮೂಲಕ ಅಕ್ರಮವಾಗಿ ಸಂಗ್ರಹಿಸಲಾದ ಹಣದ ಮಾಹಿತಿ ಐಟಿಗೆ ಒದಗಿಸದೆ ತೆರಿಗೆ ವಂಚನೆ ಆರೋಪ

ಈ ಮೇಲ್ಕಂಡ ಅಂಶಗಳ ಆಧಾರದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಇದನ್ನೂ ಓದಿ : Earthquake: ಹಾಸನ ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News