₹100 ಕೋಟಿ ಕ್ಲಬ್‌ ಸೇರಲು '777 ಚಾರ್ಲಿ' ದಾಪುಗಾಲು..! ಹೇಗಿದೆ ರಕ್ಷಿತ್‌ ಶೆಟ್ಟಿ ಸಿನಿಮಾ ಹವಾ..?

'ಕೆಜಿಎಫ್‌-2' ಬಳಿಕ ಸ್ಯಾಂಡಲ್‌ವುಡ್‌ನ ಮತ್ತೊಂದು ಚಿತ್ರ ಜಗತ್ತಿನಾದ್ಯಂತ ಅಬ್ಬರದ ಪ್ರದರ್ಶನ ಕಾಣುತ್ತಿದ್ದು, ರಕ್ಷಿತ್‌ ಶೆಟ್ಟಿ ನಟನೆಯ '777 ಚಾರ್ಲಿ' ಇದೀಗ ₹75 ಕೋಟಿ ಕ್ಲಬ್‌ ಸೇರಿದೆ. ಈ ಮೂಲಕ ಮತ್ತೊಂದು ಕನ್ನಡ ಸಿನಿಮಾ ₹100 ಕೋಟಿ ಕ್ಲಬ್‌ ಸೇರಲು ದಾಪುಗಾಲು ಇಡುತ್ತಿದೆ. ರಕ್ಷಿತ್‌ & ಟೀಂ ವರ್ಲ್ಡ್ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ಹೊಸ ರೆಕಾರ್ಡ್‌ ಕ್ರಿಯೇಟ್‌ ಮಾಡಿದ್ದಾರೆ.

Photo Courtsey: 777 Charlie (Facebook)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


 

1 /5

ಕರ್ನಾಟಕ ರತ್ನ ಅಪ್ಪು ಅಭಿನಯದ 'ಜೇಮ್ಸ್‌' ಚಿತ್ರ ದೊಡ್ಡ ಹಿಟ್‌ ಕಂಡ ಬಳಿಕ 'ಕೆಜಿಎಫ್‌' ಸಾವಿರ ಕೋಟಿ ಕ್ಲಬ್‌ ಉಡೀಸ್‌ ಮಾಡಿ ಹೊಸ ಇತಿಹಾಸ ಬರೆದಿತ್ತು. ಇದೀಗ '777 ಚಾರ್ಲಿ' ಕೂಡ ₹100 ಕೋಟಿ ಕ್ಲಬ್‌ ಸೇರಲು ದಾಪುಗಾಲು ಇಡುತ್ತಿದ್ದು, ಕಿಚ್ಚ ಸುದೀಪ್‌ ಅಭಿನಯದ ‘ವಿಕ್ರಾಂತ್ ರೋಣ’ ಮತ್ತೊಂದು ದಾಖಲೆ ಬರೆಯುವ ಎಲ್ಲಾ ನಿರೀಕ್ಷೆಗಳು ದಟ್ಟವಾಗಿವೆ.

2 /5

ಸ್ಯಾಂಡಲ್‌ವುಡ್‌ನಲ್ಲಿ 'ಕೊರೊನಾ' ಗ್ರಹಣ ತೊಲಗಿ, ಹೊಸ ಮನ್ವಂತರ ಆರಂಭವಾಗಿದೆ. ಹೀಗಾಗಿ ಬಹುನಿರೀಕ್ಷಿತ ಸಾಲು ಸಾಲು ಕನ್ನಡ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. 

3 /5

'777 ಚಾರ್ಲಿ' ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿತ್ತು. ಇದೀಗ ಆ ಕುತೂಹಲವೇ  ಸಿನಿಮಾಗೆ ದೊಡ್ಡ ಗೆಲುವು ತಂದುಕೊಟ್ಟಿದೆ.

4 /5

'ಸಿಂಪಲ್ಲಾಗಿ ಒಂದು ಲವ್ ಸ್ಟೋರಿ' ಸಿನಿಮಾ ಹಿಟ್‌ ಆದ ಬಳಿಕ ರಕ್ಷಿತ್‌ ಶೆಟ್ಟಿ ಹಿಂದಿರುಗಿ ನೋಡಲೇ ಇಲ್ಲ. ಆದರೆ 'ಅವನೇ ಶ್ರೀಮನ್ನಾರಾಯಣ' ಸೋಲಿನ ಬಳಿಕ ರಕ್ಷಿತ್ ಗೆಲುವಿನ ನಿರೀಕ್ಷೆಯಲ್ಲಿದ್ದರು. '777 ಚಾರ್ಲಿ' ಶೂಟಿಂಗ್‌ ಶುರು ಆದಾಗಿನಿಂದಲೂ ದೊಡ್ಡ ಸದ್ದು ಮಾಡುತ್ತಿತ್ತು. 

5 /5

ಕನ್ನಡದಲ್ಲಿ ಡಿಫರೆಂಟ್‌, ಡಿಫರೆಂಟ್‌ ಸಿನಿಮಾಗಳನ್ನ ತೆರೆಗೆ ತರುವಲ್ಲಿ ರಕ್ಷಿತ್‌ ಶೆಟ್ಟಿ ಹೆಸರುವಾಸಿ. ಹೀಗೆ ಡಿಫರೆಂಟ್‌ ಸ್ಟೋರಿಗಳ ಮೂಲಕ ಕನ್ನಡ ಸಿನಿಮಾ ಜಗತ್ತಿನಲ್ಲಿ ಸಂಚಲನ ಸೃಷ್ಟಿಸುತ್ತಿರುವ ರಕ್ಷಿತ್‌ ಶೆಟ್ಟಿ, ಈ ಬಾರಿ ಪಪ್ಪಿಯ ಕಥೆ ಹೇಳಿದ್ದರು. ಪ್ರೀತಿ, ಕಂಬನಿ, ಭಾವನೆಗಳ ಬೆಸುಗೆಯೇ '777 ಚಾರ್ಲಿ' ಆಗಿತ್ತು. ಈ ಮೂಲಕ '777 ಚಾರ್ಲಿ' ದಾಖಲೆಗಳ ಮೇಲೆ ದಾಖಲೆ ಬರೆದಿತ್ತು. ಇದೀಗ ಬಾಕ್ಸ್‌ ಆಫಿಸ್‌ ವಿಚಾರದಲ್ಲೂ '777 ಚಾರ್ಲಿ' ದೊಡ್ಡ ದಾಖಲೆ ನಿರ್ಮಿಸಿದೆ.