ಬ್ರಿಟನ್ ಹಣಕಾಸು ಖಾತೆ ಸಚಿವ ರಿಷಿ ಸುನಾಕ್ ಹಾಗೂ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಒತ್ತಡಕ್ಕೆ ಸಿಲುಕಿದ್ದಾರೆ. ಸಜ್ಜಿದ್ ಜಾವೇದ್ ರಾಜೀನಾಮೆ ನೀಡಿದ ಕೂಡಲೇ ರಿಷಿ ಸುನಾಕ್ ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಚಿವರ ರಾಜೀನಾಮೆ ಜಾನ್ಸನ್ ಅವರ ನಾಯಕತ್ವಕ್ಕೆ ದೊಡ್ಡ ಹೊಡೆತವಾಗಲಿದೆ.