ಬಿಎಸ್ಎನ್ಎಲ್ : ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ಡಬಲ್ ಶಾಕ್ ನೀಡಿದೆ. ಮೊದಲನೆಯದಾಗಿ ತನ್ನ ಎರಡು ಜನಪ್ರಿಯ ಯೋಜನೆಗಳ ಬೆಲೆ ಏರಿಕೆ ಮಾಡಿರುವ ಕಂಪನಿಯು ಕೆಲವು ಯೋಜನೆಗಳ ಪ್ರಯೋಜನಗಳನ್ನೂ ಕಡಿತಗೊಳಿಸಿದೆ.
ಬಿಎಸ್ಎನ್ಎಲ್ ತನ್ನ ಜನಪ್ರಿಯ ಡೇಟಾ ವೋಚರ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ಆದರೆ ಅದರ ಪ್ರಯೋಜನಗಳನ್ನು ಬದಲಾಯಿಸಿಲ್ಲ. ಇದು ಮಾತ್ರವಲ್ಲದೆ, ಈ ಟೆಲಿಕಾಂ ಆಪರೇಟರ್ ಎರಡು ಇತರ ಪ್ರಿಪೇಯ್ಡ್ ಯೋಜನೆಗಳ ಪ್ರಯೋಜನಗಳನ್ನು ಕಡಿಮೆ ಮಾಡಿದೆ. ಗಮನಾರ್ಹ ವಿಷಯವೆಂದರೆ, ಇವುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಂಪನಿಯ ಈ ಬದಲಾವಣೆ ನಂತರ ಪ್ರಿಪೇಯ್ಡ್ ಪ್ಲಾನ್ಗಳ ಬೆಲೆ ಮತ್ತು ಯಾವ ಯೋಜನೆಯಲ್ಲಿ ಏನು ಪ್ರಯೋಜನಗಳು ಲಭ್ಯವಿದೆ ಎಂದು ತಿಳಿಯೋಣ...
ಬಿಎಸ್ಎನ್ಎಲ್ ಈ ಜನಪ್ರಿಯ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ :
ಮೊದಲನೆಯದಾಗಿ, ಬಿಎಸ್ಎನ್ಎಲ್ ಯಾವ ಜನಪ್ರಿಯ ಡೇಟಾ ವೋಚರ್ ಯೋಜನೆಗಳ ಬೆಲೆ ಹೆಚ್ಚಿಸಿದೆ ಎಂದು ತಿಳಿಯೋಣ. ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ 1,498 ರೂ. ಡೇಟಾ ವೋಚರ್ ಪ್ಲಾನ್ ಬೆಲೆ ಏರಿಕೆ ಮಾಡಿದ್ದು ಇದೀಗ ಈ ಪ್ಲಾನ್ 1,515 ರೂ.ಗೆ ಏರಿಕೆ ಆಗಿದೆ. ಆದರೆ ಇದರ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮೊದಲಿನಂತೆ, ಈಗಲೂ ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2ಜಿಬಿ ಡೇಟಾವನ್ನು ನೀಡಲಾಗುತ್ತಿದೆ, ಅದರ ನಂತರ ಅದರ ವೇಗ 40Kbps ಆಗಿರುತ್ತದೆ. ಈ ಯೋಜನೆಯ ಮಾನ್ಯತೆ 365 ದಿನಗಳು.
ಇದನ್ನೂ ಓದಿ- Free High Speed Data: ಉಚಿತವಾಗಿ ಪಡೆಯಿರಿ 20ಜಿಬಿ ಹೈ ಸ್ಪೀಡ್ ಡೇಟಾ, ಈ ಟೆಲಿಕಾಂ ಕಂಪನಿಯ ನೀಡುತ್ತಿದೆ ಅದ್ಭುತ ಕೊಡುಗೆ
ಬಿಎಸ್ಎನ್ಎಲ್ ನ 999 ರೂ ಪ್ಲಾನ್ನ ಪ್ರಯೋಜನಗಳನ್ನು ಕಡಿಮೆ ಮಾಡಲಾಗಿದೆ:
ಎರಡನೆಯದಾಗಿ ಬಿಎಸ್ಎನ್ಎಲ್ ನಿಂದ ಪ್ರಯೋಜನಗಳನ್ನು ಕಡಿಮೆ ಮಾಡಿರುವ ಎರಡು ಪ್ರಿಪೇಯ್ಡ್ ಯೋಜನೆಗಳು ಯಾವುವು ಎಂದು ತಿಳಿಯೋಣ.
ಬಿಎಸ್ಎನ್ಎಲ್ 999 ರೂಗಳ ಪ್ರಿಪೇಯ್ಡ್ ಪ್ಲಾನ್ ನಲ್ಲಿ ನೀಡಲಾಗುತ್ತಿದ್ದ ಪ್ರಯೋಜನಗಳನ್ನು ಕಡಿಮೆ ಮಾಡಿದೆ. ವಾಸ್ತವವಾಗಿ, ಈ ಪ್ರಿಪೇಯ್ಡ್ ಯೋಜನೆಯು ಮೊದಲು 240 ದಿನಗಳ ಮಾನ್ಯತೆಯೊಂದಿಗೆ ಲಭ್ಯವಾಗುತ್ತಿತ್ತು. ಆದರೆ ಈಗ ಈ ಯೋಜನೆಯ ಸಿಂಧುತ್ವವನ್ನು 200 ದಿನಗಳಿಗೆ ಇಳಿಸಲಾಗಿದೆ. ಅಂದರೆ ಈ ಯೋಜನೆಯನ್ನು ಬಳಸುವ ವೆಚ್ಚವು ದಿನಕ್ಕೆ ರೂ 4.16 ರಿಂದ ರೂ 4.99 ಕ್ಕೆ ಏರಿದೆ. ಈ ಯೋಜನೆಯಲ್ಲಿ ಯಾವುದೇ ಎಸ್ಎಂಎಸ್ ಅಥವಾ ಡೇಟಾ ಪ್ರಯೋಜನಗಳಿಲ್ಲ ಆದರೆ ಇದರಲ್ಲಿ ನಿಮಗೆ ಅನಿಯಮಿತ ಧ್ವನಿ ಕರೆ ಮತ್ತು ಎರಡು ತಿಂಗಳವರೆಗೆ ಉಚಿತ ಕಾಲರ್ಟ್ಯೂನ್ ಸೇವೆ ನೀಡಲಾಗುತ್ತಿದೆ.
ಇದನ್ನೂ ಓದಿ- BSNL ಭರ್ಜರಿ ಯೋಜನೆ: ಕೇವಲ 5 ರೂ.ಗೆ ಸಿಗುತ್ತೆ ಪ್ರತಿದಿನ 2ಜಿಬಿ ಡೇಟಾ
ರೂ 999 ಯೋಜನೆಯನ್ನು ಹೊರತುಪಡಿಸಿ, ಬಿಎಸ್ಎನ್ಎಲ್ ನ ರೂ 1,499 ಪ್ಲಾನ್ನಲ್ಲಿಯೂ ಪ್ರಯೋಜನಗಳನ್ನು ಕಡಿತಗೊಳಿಸಲಾಗಿದೆ.
ಈ ಪ್ರಿಪೇಯ್ಡ್ ಯೋಜನೆಯು ವಾರ್ಷಿಕ ಯೋಜನೆಯಾಗಿದ್ದು, ಇದರಲ್ಲಿ 365 ದಿನಗಳ ವ್ಯಾಲಿಡಿಟಿಯನ್ನು ಬಳಕೆದಾರರಿಗೆ ನೀಡಲಾಗುತ್ತಿತ್ತು. ಆದರೆ, ಈ ಹೊಸ ಬದಲಾವಣೆ ನಂತರ ಈ ಯೋಜನೆಯ ವ್ಯಾಲಿಡಿಟಿಯನ್ನು 336 ದಿನಗಳವರೆಗೆ ಸೀಮಿತಗೊಳಿಸಲಾಗಿದೆ. ಅಂದರೆ ಈ ಯೋಜನೆಯನ್ನು ಬಳಸುವ ದೈನಂದಿನ ವೆಚ್ಚವು ರೂ 4.10 ರಿಂದ ರೂ 4.46 ಕ್ಕೆ ಏರಿದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆ, ದಿನಕ್ಕೆ 100 ಎಸ್ಎಂಎಸ್ ಮತ್ತು ಒಟ್ಟು 24ಜಿಬಿ ಡೇಟಾದೊಂದಿಗೆ ಬರುತ್ತದೆ. ಈ ಮೂಲಕ, ವ್ಯಾಲಿಡಿಟಿಯನ್ನು ಕಡಿಮೆ ಮಾಡುವ ಮೂಲಕ, ಬಿಎಸ್ಎನ್ಎಲ್ ಎರಡೂ ಪ್ಲಾನ್ಗಳ ಬೆಲೆಯನ್ನು ಪರೋಕ್ಷವಾಗಿ ಹೆಚ್ಚಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.