'ಕುಂಭ ಮೇಳ'ವನ್ನೇ ಆಚರಿಸುವಾಗ ಏರ್ ಶೋ ನಡೆಸುವುದು ವಿಷಯವೇ: ಯುಪಿ ಸಚಿವ

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವೆಂದು ಪರಿಗಣಿಸಲ್ಪಟ್ಟ ಏರೋ ಇಂಡಿಯಾ 2019ನ್ನು ಅಕ್ಟೋಬರ್ ನಲ್ಲಿ ಲಕ್ನೋದ ಬಕ್ಷಿ ಕಾ ತಲಾಬ್ ಏರ್ ಫೋರ್ಸ್ ನಲ್ಲಿ  ಆಯೋಜಿಸಬಹುದು ಎಂದು ವರದಿಗಳಿವೆ.

Last Updated : Aug 14, 2018, 05:59 PM IST
'ಕುಂಭ ಮೇಳ'ವನ್ನೇ ಆಚರಿಸುವಾಗ ಏರ್ ಶೋ ನಡೆಸುವುದು ವಿಷಯವೇ: ಯುಪಿ ಸಚಿವ title=

ನವದೆಹಲಿ: ಕರ್ನಾಟಕದ ಪ್ರತಿಷ್ಠಿತ ಏರ್ ಶೋ ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಸ್ಥಳಾಂತರವಾಗಲಿದೆ ಎಂಬ ಊಹಾಪೋಹಗಳ ನಡುವೆಯೇ ಉತ್ತರ ಪ್ರದೇಶದ ಸಚಿವರೊಬ್ಬರು, ಉತ್ತರಪ್ರದೇಶದಲ್ಲಿ 'ಕುಂಭ ಮೇಳ'ವನ್ನೇ ಆಚರಿಸುವಾಗ ಏರ್ ಶೋ ನಡೆಸುವುದು ದೊಡ್ಡ ವಿಷಯವೇ ಎಂದಿದ್ದಾರೆ.

ಉತ್ತರಪ್ರದೇಶ ರಾಮ-ಕೃಷ್ಣರ ಜನ್ಮ ಭೂಮಿ. ನಾವು ಶೀಘ್ರದಲ್ಲೇ ಇಲ್ಲಿ ಕುಂಭಮೇಳವನ್ನು ಆಯೋಜಿಸುತ್ತಿದ್ದೇವೆ. ಅಂತಹದರಲ್ಲಿ ಏರ್ ಶೋ ದಂತಹ ಕಾರ್ಯಕ್ರಮವನ್ನು ಆಯೋಜಿಸುವುದು ದೊಡ್ಡ ವಿಷಯವೇ ಎಂದು ಉತ್ತರ ಪ್ರದೇಶದ ಸಚಿವ ಗಂದ್ ನೋಪಾಲ್ ನಂದಿ ಹೇಳಿದ್ದಾರೆ.

ಬೆಂಗಳೂರಿನಲ್ಲೇ ನಡೆಯುತ್ತಾ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ?

ಇತ್ತೀಚಿಗೆ ಬೆಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಏರ್ ಶೋ ನಡೆಸುವ ಬಗ್ಗೆ ಬೇರೆ ಬೇರೆ ರಾಜ್ಯಗಳು ಮನವಿ ಸಲ್ಲಿಸಿವೆ. ಆದರೆ ಇಲ್ಲಿಯವರೆಗೆ ಆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಬೆಂಗಳೂರು ಏರ್ ಶೋ ಸ್ಥಳಾಂತರ, ಪ್ರದರ್ಶನಕ್ಕೆ ಸಿದ್ಧತೆ ಆರಂಭಿಸಿದ ಉತ್ತರಪ್ರದೇಶ

ಏರೊ ಇಂಡಿಯಾ ಪ್ರದರ್ಶನವನ್ನು ಲಖನೌದಲ್ಲಿ ಆಯೋಜಿಸಬೇಕೆಂದು ಕೋರಿ ಉತ್ತರ ಪ್ರದೇಶ ಸರ್ಕಾರದಿಂದ ರಕ್ಷ ಣಾ ಸಚಿವಾಲಯಕ್ಕೆ ಅಧಿಕೃತ ಮನವಿಯನ್ನೂ ಸಲ್ಲಿಸಲಾಗಿದೆ. ನಂತರ ಮುಖ್ಯಮಂತ್ರಿ ಆದಿತ್ಯನಾಥ್‌ ಅವರೇ ಟ್ವೀಟ್‌ ಮಾಡಿ ಈ ವಿಷಯವನ್ನು ತಿಳಿಸಿದ್ದಾರೆ.

ಏರ್ ಶೋಗಾಗಿ ಪ್ರಧಾನಿ ಮೋದಿಗೆ ಸಿಎಂ ಕುಮಾರಸ್ವಾಮಿ ಪತ್ರ

ಪ್ರತಿಷ್ಠಿತ ಏರ್ ಶೋ(ಏರೋ ಇಂಡಿಯಾ 2019) ಅನ್ನು ಬೆಂಗಳೂರಿನಲ್ಲೇ ನಡೆಸುವಂತೆ ಕೋರಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

Trending News