ಚೆನ್ನೈನ ತಮಿಳುನಾಡಿನಲ್ಲಿ ನಡೆಯುತ್ತಿರುವ ಭಾರತೀಯ ವಾಯುಸೇನೆಯ ಏರ್ ಶೋ ಕಾರ್ಯಕ್ರಮದ ವೇಳೆ 5 ಮಂದಿ ಸಾವನ್ನಪ್ಪಿದ್ದು, 250ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಚೆನ್ನೈನ ಮರೀನಾ ಬೀಚ್ನಲ್ಲಿ ನಡೆದ ಏರ್ ಶೋ ವೀಕ್ಷಿಸಲು ತೆರಳಿದ್ದ 5 ಮಂದಿ ಪೇಕ್ಷಕರು ಸಾವನ್ನಪ್ಪಿದ್ದು, ಅವರ ಸಾವಿಗೆ ಹೀಟ್ ಸ್ಟ್ರೋಕ್ ಕಾರಣ ಎಂದು ವೈದ್ಯರು ಹೇಳಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2023 ವೈಮಾನಿಕ ಪ್ರದರ್ಶನ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಯಲಹಂಕ ವಾಯುನೆಲೆಯಲ್ಲಿ ಜರುಗುತ್ತಿರುವ ಏರ್ ಶೋ ವೀಕ್ಷಿಸಲು ಇಂದು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತೆ. ಇಂದಿನಿಂದ ಎರಡು ದಿನ ಸಾರ್ವಜನಿಕರಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರ, ಮಧ್ಯಾಹ್ನ 12ರಿಂದ 1.30ರವರೆಗೆ ವೈಮಾನಿಕ ಪ್ರದರ್ಶನ ನಡೆಸಲಿದೆ.
Dallas Aircraft crash video: ಬೋಯಿಂಗ್ ಬಿ -17 ಫ್ಲೈಯಿಂಗ್ ಫೋರ್ಟ್ರೆಸ್ ಮತ್ತು ಬೆಲ್ ಪಿ -63 ಕಿಂಗ್ಕೋಬ್ರಾ ಎಂಬ ವಿಮಾನಗಳು ಏರ್ ಶೋ ಸಂದರ್ಭದಲ್ಲಿ ಡಿಕ್ಕಿ ಹೊಡೆದಿವೆ. ವಿಮಾನಗಳು ವೈಮಾನಿಕ ಪ್ರದರ್ಶನದ ಭಾಗವಾಗಿದ್ದರಿಂದ ಇಡೀ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಧಿಕಾರಿಗಳು ಸಾವುನೋವುಗಳನ್ನು ದೃಢಪಡಿಸಿಲ್ಲ ಆದರೆ ವರದಿಗಳ ಪ್ರಕಾರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ.
ಬೀದರ್ ಕೋಟೆಯ ಮೇಲೆ ಭಾರತೀಯ ವಾಯು ಪಡೆಯಿಂದ ಏರ್ ಶೋ ನಡೆಸಲಾಗುತ್ತಿದೆ. ನಗರದ ನಿಜಾಮರ ಪ್ರಸಿದ್ಧ ಕೋಟೆ ಮೇಲೆ ಏರ್ ಶೋ ನಡೆಯುತ್ತಿದ್ದು, ಸೂರ್ಯಕಿರಣ ವಿಮಾನಗಳು ಬಾನಂಗಳದಲ್ಲಿ ಚಿತ್ತಾರ ಮುಡಿಸಿ ವೀಕ್ಷಕರನ್ನ ರಂಜಿಸಿದವು.
ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವೆಂದು ಪರಿಗಣಿಸಲ್ಪಟ್ಟ ಏರೋ ಇಂಡಿಯಾ 2019ನ್ನು ಅಕ್ಟೋಬರ್ ನಲ್ಲಿ ಲಕ್ನೋದ ಬಕ್ಷಿ ಕಾ ತಲಾಬ್ ಏರ್ ಫೋರ್ಸ್ ನಲ್ಲಿ ಆಯೋಜಿಸಬಹುದು ಎಂದು ವರದಿಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.