ಹಸಿವಾದ ಸಂದರ್ಭದಲ್ಲಿ ನೀವು ಆಪ್‌ಗಳ ಮೂಲಕ ಫುಡ್ ಆರ್ಡರ್ ಮಾಡುತ್ತೀರಿ. ಇಲ್ಲವೇ ರೆಸ್ಟೋರೆಂಟ್, ಹೋಟೇಲ್‌ಗಳಿಗೆ ಹೋಗಿ ಖರೀದಿ ಮಾಡುತ್ತೀರಿ. ಇನ್ನು ಹೆಚ್ಚು ಅಭಿವೃದ್ಧಿ ಹೊಂದಿದ ಪಟ್ಟಣಗಳಲ್ಲಿ ಕಾರಿನಲ್ಲಿ ತೆರಳಿ ಆಹಾರವನ್ನು ಕಿಟಕಿ ಮೂಲಕ ಆರ್ಡರ್ ಮಾಡುತ್ತೇವೆ. ಇದನ್ನು ಡ್ರೈವ್-ಥ್ರೂ ಎಂದು ಕರೆಯುತ್ತೇವೆ.
ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಇಂತಹ ಸೌಲಭ್ಯಗಳನ್ನು ಒದಗಿಸುತ್ತವೆ. ಡ್ರೈವ್-ಥ್ರೂ ಮೂಲಕ ನಮಗೆ ಆಹಾರವನ್ನು ಒದಗಿಸುವ ಕಂಪನಿಗಳಲ್ಲಿ ಮೆಕ್‌ಡೊನಾಲ್ಡ್ಸ್ ಕೂಡ ಒಂದಾಗಿದೆ. ಕಾರಿನಲ್ಲಿ ಕುಳಿತು ನಿಮ್ಮ ಆಹಾರವನ್ನು ಆರ್ಡರ್ ಮಾಡಿ ಮತ್ತು ಕಿಟಕಿಯ ಮೂಲಕ ಕೆಲವೇ ನಿಮಿಷಗಳಲ್ಲಿ ನೀವು ಅದನ್ನು ಪಡೆಯಬಹುದು. ಇದೀಗ ಈ ಡ್ರೈವ್ ಥ್ರೂ ಮೂಲಕ ಆರ್ಡರ್ ಮಾಡಿದ ಆಹಾರ ಸಿಕ್ಕಿಲ್ಲ ಎಂದು ಸೆಂಟರ್‌ನೊಳಗೆ ನುಗ್ಗಿದ ಯುವತಿಯೊಬ್ಬಳು ತಾನೇ ಸ್ವತಃ ಕುಕ್ ಮಾಡಿಕೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಡಯಾಬಿಟೀಸ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರುತ್ತದೆ ಈ ಒಂದು ತರಕಾರಿ
ಹಸಿವಾದಾಗ ನೀವು, ನೀವಾಗಿರಲ್ಲ ಎಂಬ ಮಾತಿನಂತೆ ಇಲ್ಲೊಬ್ಬ ಯುವತಿ ಹಸಿವಿನಿಂದ ಏನು ಮಾಡಿದ್ದಾಳೆ ಎಂದು ನೀವೇ ನೋಡಿ. ಯುವತಿಯೊಬ್ಬಳು ಮೆಕ್‌ಡೊನಾಲ್ಡ್ಸ್‌ನಲ್ಲಿ ಫುಡ್ ಆರ್ಡರ್ ಮಾಡಿದ್ದಾಳೆ. ಆದರೆ ಆ ಆಹಾರ ಆಕೆಗೆ ಸಿಕ್ಕಿಲ್ಲ. ಇದರಿಂದ ಕೋಪಗೊಂಡ ಯುವತಿ ಕಿಟಕಿಯ ಮೂಲಕ ನುಗ್ಗಿ ಅಲ್ಲಿದ್ದ ಇತರ ಸಿಬ್ಬಂದಿಯ ಸಹಾಯದಿಂದ ಆಹಾರ ತಯಾರಿಸಿದ್ದಾಳೆ. ಈ ಘಟನೆ ಫಾಸ್ಟ್‌ಫುಡ್‌ನ ಡ್ರೈವ್-ಥ್ರೂ ಔಟ್‌ಲೆಟ್‌ನಲ್ಲಿ ನಡೆದಿದೆ.
ವೈರಲ್ ಕ್ಲಿಪ್‌ನಲ್ಲಿ, ಮಹಿಳೆ ಕಿಟಕಿಯಿಂದ ಕಿಚನ್ ಕಡೆಗೆ ನುಗ್ಗುತ್ತಿರುವುದನ್ನು ಕಾಣಬಹುದು. ವೀಡಿಯೊವನ್ನು ಮೊದಲು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಬಳಿಕ ಇದು ಇತರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಮಹಿಳೆ ಫಾಸ್ಟ್ ಫುಡ್ ರೆಸ್ಟೋರೆಂಟ್‌ನ ಸಿಬ್ಬಂದಿಯ ಬಳಿಗೆ ಹೋಗಿ, ಅಲ್ಲಿ ತಾನೇ ಟೇಕ್‌ಅವೇ ಆರ್ಡರ್ ಸಿದ್ಧಪಡಿಸುತ್ತಿರುವುದು ಕಾಣಬಹುದು.
ನೈರ್ಮಲ್ಯದ ದೃಷ್ಟಿಯಿಂದ ಮೆಕ್ ಡೊನಾಲ್ಡ್ಸ್ ಶಾಪ್‌ನವರು ಆ ಸಂದರ್ಭದಲ್ಲಿ ಆರ್ಡರ್‌ಗಳನ್ನು ಸ್ವೀಕರಿಸಿರಲಿಲ್ಲ. ಇದಕ್ಕೆ ಕೋಪಗೊಂಡ ಯುವತಿ ಸೆಂಟರ್‌ನ ಒಳನುಗ್ಗಿ, ಸ್ವತಃ ತಾನೇ ಅಡುಗೆ ಮಾಡಿದ್ದಾಳೆ.
ಇದನ್ನೂ ಓದಿ: Flipkart Electronics Sale : ಕೇವಲ ₹750 ರೊ.ಳಗೆ ಖರೀದಿಸಿ ಈ ಟಾಪ್ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳನ್ನು!
ವಿಡಿಯೋದಲ್ಲಿ ಏನಿದೆ:
ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿರುವ ಈ ಯುವತಿಯು ಮೆಕ್‌ಡೊನಾಲ್ಡ್‌ನ ಉದ್ಯೋಗಿಗೆ ಡ್ರೈವ್ ಥ್ರೂ ಮೂಲಕ ಫುಡ್ ಆರ್ಡರ್ ಮಾಡಿದ್ದಾಳೆ. ಆದರೆ ನೈರ್ಮಲ್ಯ ಮತ್ತು ಕೈಗವಸುಗಳ ಕೊರತೆಯಿಂದಾಗಿ ಆಹಾರವನ್ನು ತಯಾರಿಸಲು ಆಗುತ್ತಿಲ್ಲ ಎಂದು ಸಿಬ್ಬಂದಿ ಆಕೆಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವತಿ, ಎತ್ತರದ ಹಿಮ್ಮಡಿಯ ಬೂಟುಗಳನ್ನು ಧರಿಸಿಕೊಂಡು, ಡ್ರೈವ್-ಥ್ರೂ ಕಿಟಕಿಯ ಮೂಲಕ ಒಳನುಗ್ಗುತ್ತಾಳೆ. ಬಳಿಕ ತನಗೆ ಬೇಕಾದ ಆಹಾರವನ್ನು ತಯಾರಿಸುತ್ತಾಳೆ.
ವಿಡಿಯೋ ನೋಡಿ:
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.