ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ, ವೆಸ್ಲಿ ಸೇತುವೆ ಹಾಗೂ ಹನೂರು ತಾಲೂಕಿನ ಹೊಗೇನಕಲ್ ಜಲಪಾತಗಳಿಗೆ ವಿಧಿಸಿದ್ದ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧ ಆದೇಶವನ್ನು ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ಹಿಂಪಡೆದಿದ್ದಾರೆ.
ಕೇರಳದ ವಯನಾಡು ಮತ್ತು ಕಾವೇರಿ ಸೀಮೆಯಲ್ಲಿ ಹೆಚ್ಚಿನ ಮಳೆ ಪರಿಣಾಮ ಭರಚುಕ್ಕಿ ಜಲಪಾತ ಹಾಗೂ ಹೊಗೆನಕಲ್ ಜಲಪಾತ ಅಪಾಯಕಾರಿಯಾಗಿ ಭೋರ್ಗರೆಯುತ್ತಿದ್ದ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿತ್ತು.
ಈಗ ಮಳೆ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಕಾವೇರಿ ಹಾಗೂ ಕಬಿನಿ ನದಿಗಳಲ್ಲಿ ನೀರಿನ ಹರಿವು ಇಳಿದಿರುವುದರಿಂದ ಪ್ರವಾಸಿಗರಿಗಿದ್ದ ನಿರ್ಬಂಧವನ್ನು ಡಿಸಿ ವಾಪಾಸ್ ಪಡೆದಿದ್ದಾರೆ.
ವಾರಾಂತ್ಯದಲ್ಲಿ ಭರಚುಕ್ಕಿ ಜಲಪಾತಕ್ಕೆ ಜನಸಾಗರವೇ ಹರಿದು ಬರುತ್ತಿತ್ತು.
ನಿರ್ಬಂಧ ಹೇರಿದ ಬಳಿಕ ನೂರಾರು ಮಂದಿ ನಿರಾಸೆ ಮೊಗ ಹೊತ್ತು ಹಿಂತಿರುಗುತ್ತಿದ್ದರು. ಈಗ, ನಿರ್ಬಂಧ ತೆರವಾದ ಹಿನ್ನೆಲೆಯಲ್ಲಿ ಮತ್ತೇ ಪ್ರವಾಸಿತಾಣಗಳು ಗಿಜಿಗುಡಲಿದೆ.