Vikrant Rona: ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಅಪಪ್ರಚಾರ!? ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ

Vikrant Rona: ಎಲ್ಲೆಡೆ ಇದೀಗ ಚಾಲ್ತಿಯಲ್ಲಿರುವುದು ಒಂದೇ ಹೆಸರು ಅದು ವಿಕ್ರಾಂತ್‌ ರೋಣ. ಇನ್ನೇನೂ ಕೆಲವೇ ದಿನಗಳಲ್ಲಿ ಬೆಳ್ಳಿ ಪರದೆ ಮೇಲೆ ಅಬ್ಬರಿಸಲಿರುವ ವಿಕ್ರಾಂತ್‌ ರೋಣ ಪ್ರಮೋಷನ್‌ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ.

Written by - Chetana Devarmani | Last Updated : Jul 25, 2022, 02:02 PM IST
  • 3D ಆವೃತ್ತಿಯಲ್ಲಿ ವಿಕ್ರಾಂತ್‌ ರೋಣ ಸಿನಿಮಾ ಬರುತ್ತಿಲ್ಲ
  • ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಅಪಪ್ರಚಾರ
  • ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ
Vikrant Rona: ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಅಪಪ್ರಚಾರ!? ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ  title=
ವಿಕ್ರಾಂತ್‌ ರೋಣ

Vikrant Rona: ಎಲ್ಲೆಡೆ ಇದೀಗ ಚಾಲ್ತಿಯಲ್ಲಿರುವುದು ಒಂದೇ ಹೆಸರು ಅದು ವಿಕ್ರಾಂತ್‌ ರೋಣ. ಇನ್ನೇನೂ ಕೆಲವೇ ದಿನಗಳಲ್ಲಿ ಬೆಳ್ಳಿ ಪರದೆ ಮೇಲೆ ಅಬ್ಬರಿಸಲಿರುವ ವಿಕ್ರಾಂತ್‌ ರೋಣ ಪ್ರಮೋಷನ್‌ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಬಿಡುಗಡೆಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಸದ್ಯ, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ನಿನ್ನೆಯಷ್ಟೇ ಚೆನ್ನೈನಲ್ಲಿ ಪ್ರಿ ರಿಲೀಸ್‌ ಇವೆಂಟ್‌ ಭರ್ಜರಿಯಾಗಿ ನಡೆದಿದೆ. 

ಇದನ್ನೂ ಓದಿ: Urfi Javed: ಇದೇನಿದು ಹೊಸ ಅವತಾರ! ಉರ್ಫಿ ಜಾವೇದ್‌ ಇತ್ತೀಚಿನ ವಿಡಿಯೋ ನೋಡಿದ್ದೀರಾ?

ಈ ಮಧ್ಯೆ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಿರ್ಮಾಪಕ ಜಾಕ್‌ ಮಂಜು ಆರೋಪಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3D ಆವೃತ್ತಿಯಲ್ಲಿ ವಿಕ್ರಾಂತ್‌ ರೋಣ ಸಿನಿಮಾ ಬರುತ್ತಿಲ್ಲ ಎಂದು ಯಾರೋ ಕಿಡಿಗೇಡಿಗಳು ಅಪಪ್ರಚಾರ ಮಾಡ್ತಿದ್ದಾರೆ. ಅದು ಸುಳ್ಳು. 3D ಯಲ್ಲಿಯೇ ಸಿನಿಮಾ ರಿಲೀಸ್ ಆಗುತ್ತೆ. ಅಪಪ್ರಚಾರದಲ್ಲಿ ತೊಡಗಿದವರಿಗೆ ಇದು ನನ್ನ ಉತ್ತರ ಎಂದರು. 

ಸಿನಿ ಡಬ್ಸ್ ಆ್ಯಪ್ ಮೂಲಕ ನಿಮ್ಮ ಭಾಷೆಯಲ್ಲಿ ಸಿನಿಮಾ ನೋಡಿ: 

ಭಾರತದ ಯಾವುದೇ ಚಿತ್ರಮಂದಿರದಲ್ಲಿ ಕುಳಿತುಕೊಂಡು ಸಿನಿ ಡಬ್ಸ್ ಆ್ಯಪ್ ಮೂಲಕ ನಿಮ್ಮ ಭಾಷೆಯಲ್ಲಿ ವಿಕ್ರಾಂತ್ ರೋಣ ಸಿನಿಮಾ ನೋಡಬಹುದು. ಒಟ್ಟು ಐದು ಭಾಷೆಗಳಲ್ಲಿ ಈ ಆ್ಯಪ್ ಮೂಲಕ ನೀವು ಸಿನಿಮಾ ವೀಕ್ಷಿಸಲು ಅವಕಾಶವಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ವಿಕ್ರಾಂತ್ ರೋಣ ನೋಡಲು ಲಭ್ಯವಿರುತ್ತದೆ. ಸ್ಮಾರ್ಟ್ ಪೋನ್ ಇದ್ದವರು ಈ ಆ್ಯಪ್ ಬಳಸಬಹುದಾಗಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಿನಿ ಡಬ್ಸ್ ಮೂಲಕ ನಟ ಆರ್​.ಮಾಧವನ್ ಅಭಿನಯದ ರಾಕೆಟ್ರಿ ಸಿನಿಮಾ ರಿಲೀಸ್ ಆಗಿತ್ತು. ಈಗ ಅದನ್ನೇ ಬಳಸಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಮಾಡುವಂತೆ ಮಾಧವನ್ ಸಲಹೆ ನೀಡಿದ್ರು. ಅದರಂತೆ 5  ಭಾಷೆಗಳಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾಗಲಿದೆ ಎಂದರು. 

ನಾಳೆಯಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಬುಕಿಂಗ್ ಓಪನ್: 

ಇದೇ ಜುಲೈ 28 ಕ್ಕೆ ವಿಕ್ರಾಂತ್‌ ರೋಣ ಸಿನಿಮಾ ರಿಲೀಸ್‌ ಆಗಲಿದ್ದು, ವಿಶ್ವಾದ್ಯಂತ 3200ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ.  ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ, ಬಾಲಿವುಡ್ ನಲ್ಲಿ 900ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಚಿತ್ರ ರಿಲೀಸ್‌ ಆಗುತ್ತೆ. ಈಗಾಗಲೇ ಜಗತ್ತಿನಾದ್ಯಂತ 800ಕ್ಕೂ ಹೆಚ್ಚು ಶೋ ಅಡ್ವಾನ್ಸ್ ಬುಕಿಂಗ್ ಆಗಿವೆ.  ನಿನ್ನೆಯಿಂದ  ಟಿಕೆಟ್‌ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. 3D ಇರೋ ಕಡೆ ತುಂಬಾ ಬೇಗ ಮುಂಗಡ ಬುಕಿಂಗ್‌ ಆಗಿವೆ. ಇನ್ನೂ ನಾಳೆಯಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಬುಕಿಂಗ್ ಓಪನ್ ಆಗಲಿದೆ ಎಂದು ಮಾಹಿತಿ ನೀಡಿದರು. 

ಇದನ್ನೂ ಓದಿ: Vicky Katrina Gets Threats: ಸಲ್ಮಾನ್‌ ಖಾನ್‌ ಬಳಿಕ ವಿಕ್ಕಿ ಕೌಶಲ್-ಕತ್ರಿನಾಗೆ ಬಂತು ಕೊಲೆ ಬೆದರಿಕೆ

ಕಿಚ್ಚ ಸುದೀಪ್‌ ಅಭಿನಯದ, ಅನೂಪ್‌ ಭಂಡಾರಿ ನಿರ್ದೇಶನದ ಈ ಸಿನಿಮಾ ಮೂಲಕ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದಾರೆ. ರಕೇಲ್‌ ಡಿಕೋಸ್ಟ ಉರ್ಫ್‌ ಗಡಂಗ್‌ ರಕ್ಕಮ್ಮನಾಗಿ ತೆರೆ ಮೇಲೆ ಅವರು ಕಾಣಿಸಿಕೊಂಡಿದ್ದಾರೆ. ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News