Google Secrets: ಸಾಮಾನ್ಯವಾಗಿ ಗೂಗಲ್ ಒಂದು ಸರ್ಚ್ ಇಂಜಿನ್ ಆಗಿದೆ. ಗೂಗಲ್ ನಾವು ಕೇಳುವ ಯಾವುದೇ ಪ್ರಶ್ನೆಗೆ ಕಣ್ಣು ಪಿಳುಕಿಸುವುದರಲ್ಲಿ ಉತ್ತರ ನೀಡುತ್ತದೆ. ಈ ಸಂಗತಿ ಗೂಗಲ್ ಬಳಸುವ ಬಹುತೇಕರಿಗೆ ತಿಳಿದೇ ಇದೆ. ಇದಲ್ಲದೆ, ಇಂಟರ್ನೆಟ್ ಇಲ್ಲದೆ ಇದ್ದಾಗ ನಾವು ಗೂಗಲ್ ಮೇಲೆ ಗೇಮ್ ಕೂಡ ಆಡಬಹುದು. ಈ ಸಂಗತಿಯೂ ಕೂಡ ನಮ್ಮಲ್ಲಿ ಬಹುತೇಕರಿಗೆ ತಿಳಿದೇ ಇದೆ. ಆದರೆ, ಇವೆಲ್ಲವೂಗಳನ್ನು ಹೊರತುಪಡಿಸಿ ಗೂಗಲ್ ನಲ್ಲಿ ಹಲವು ಸ್ವಾರಸ್ಯಕರ ಟ್ರಿಕ್ಸ್ ಗಳಿವೆ .
Google Magical Tricks - ಸಾಮಾನ್ಯವಾಗಿ ಗೂಗಲ್ ಒಂದು ಸರ್ಚ್ ಇಂಜಿನ್ ಆಗಿದೆ. ಗೂಗಲ್ ನಾವು ಕೇಳುವ ಯಾವುದೇ ಪ್ರಶ್ನೆಗೆ ಕಣ್ಣು ಪಿಳುಕಿಸುವುದರಲ್ಲಿ ಉತ್ತರ ನೀಡುತ್ತದೆ. ಈ ಸಂಗತಿ ಗೂಗಲ್ ಬಳಸುವ ಬಹುತೇಕರಿಗೆ ತಿಳಿದೇ ಇದೆ. ಇದಲ್ಲದೆ, ಇಂಟರ್ನೆಟ್ ಇಲ್ಲದೆ ಇದ್ದಾಗ ನಾವು ಗೂಗಲ್ ಮೇಲೆ ಗೇಮ್ ಕೂಡ ಆಡಬಹುದು. ಈ ಸಂಗತಿಯೂ ಕೂಡ ನಮ್ಮಲ್ಲಿ ಬಹುತೇಕರಿಗೆ ತಿಳಿದೇ ಇದೆ. ಆದರೆ, ಇವೆಲ್ಲವೂಗಳನ್ನು ಹೊರತುಪಡಿಸಿ ಗೂಗಲ್ ನಲ್ಲಿ ಹಲವು ಸ್ವಾರಸ್ಯಕರ ಟ್ರಿಕ್ಸ್ ಗಳಿವೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಈ ಟ್ರಿಕ್ಸ್ ಗಳು ನಿಮಗೆ ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು. ಇಂದು ನಾವು ನಿಮಗೆ ಗೂಗಲ್ ನ ಅಂತಹುದೇ ಕೆಲ ಟ್ರಿಕ್ಸ್ ಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. Flip A Coin - ನಾಣ್ಯವನ್ನು ಮೇಲಕ್ಕೆ ಟಾಸ್ ಮಾಡುವ ಮೂಲಕ ಜನರು ಯಾವುದಾದರೊಂದು ನಿರ್ಧಾರ ಕೈಗೊಳ್ಳುವುದನ್ನು ನೀವು ಹಲವಾರು ಬಾರಿ ನೋಡಿರಬೇಕು. ಆದರೆ, ಇಂದು ಯುಗ ಡಿಜಿಟಲ್ ಆಗಿ ಮಾರ್ಪಟ್ಟಿದೆ. Paytm, PhonePe, Google Pay ಬಂದ ನಂತರ, ಜೇಬಿನಲ್ಲಿ ನಾಣ್ಯಗಳು ಸಿಗುವುದೇ ಕಷ್ಟದ ಕೆಲಸವಾಗಿ ಪರಿಣಮಿಸಿದೆ. ಹೀಗಿರುವಾಗ ನೀವು ನಿಮ್ಮ ಫೋನ್ ಅಥವಾ ಲ್ಯಾಪ್ಟಾಪ್ ಸಹಾಯವನ್ನು ಪಡೆದುಕೊಳ್ಳಬಹುದು. ಚಿಂತಿಸಬೇಡಿ, ನಾವು ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್ ಅನ್ನು ಟಾಸ್ ಮಾಡಿ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಿಲ್ಲ. ವಾಸ್ತವದಲ್ಲಿ, Google ಸಹಾಯದಿಂದ, ನೀವು ಡಿಜಿಟಲ್ ನಾಣ್ಯಗಳನ್ನು ಸಹ ಫ್ಲಿಪ್ ಮಾಡಬಹುದು. ಇದಕ್ಕಾಗಿ ನೀವು Google ಗೆ ಹೋಗಿ 'Flip a Coin' ಟೈಪ್ ಮಾಡಿ ಹುಡುಕಾಟ ನಡೆಸಿ. ಈ ತಂತ್ರವನ್ನು ಪ್ರಯತ್ನಿಸಿ ಮತ್ತು ಏನಾಗುತ್ತದೆ ಎಂಬುದನ್ನು ನೋಡಿ.
2. Google Gravity - ನಮ್ಮೆಲ್ಲರಿಗೂ ತಿಳಿದಿರುವಂತೆ ಗುರುತ್ವಾಕರ್ಷಣ ಶಕ್ತಿ ನಮ್ಮೆಲ್ಲರ ಮೇಲೂ ಕಾರ್ಯನಿರ್ವಹಿಸುತ್ತದೆ. ಗೂಗಲ್ ಕೂಡ ಇದಕ್ಕೆ ಹೊರತಾಗಿಲ್ಲ. ಹೌದು, ಗುರುತ್ವಾಕರ್ಷಣ ಶಕ್ತಿ ಗೂಗಲ್ ಅನ್ನು ಕೂಡ ಬಿಟ್ಟಿಲ್ಲ. ನಿಮ್ಮ ಹೋಂ ಪೇಜ್ ನಲ್ಲಿ 'Google Gravity'ಯ ಹುಡುಕಾಟ ನಡೆಸಿದರೆ, ನಿಮಗೆ ಕಾಣಿಸಿಕೊಳ್ಳುವ ಮೊದಲ ಲಿಂಕ್ ಎಂದರೆ ಅದು 'Google Gravity - Mr.doob'. ಅದರ ಮೇಲೆ ಕ್ಲಿಕ್ಕಿಸಿದಾಗ ನಿಮ್ಮ ಸಂಪೂರ್ಣ ಪುಟ ಚದುರಿ ಕೆಳಕ್ಕೆ ಬೀಳುವುದನ್ನು ನೀವು ನೋಡಬಹುದು.
3. Google Sky - ಮನೆಯಲ್ಲಿಯೇ ಕುಳಿತು ಬಾಹ್ಯಾಕಾಶದ ಪ್ರಯಾಣ ಕೈಗೊಳ್ಳಬೇಕೇ? ಗೂಗಲ್ ಸಹಾಯದಿಂದ ನೀವು ಇದನ್ನೂ ಕೂಡ ಮಾಡಬಹುದು. ಇದಕ್ಕಾಗಿ ನೀವು ಗೂಗಲ್ ನ ಹೋಂ ಪೇಜ್ ಗೆ ಭೇಟಿ ನೀಡಿ 'Google Sky' ಬರೆಯಬೇಕು. ಅಲ್ಲಿ ನೀವು ಚಂದ್ರ, ನಕ್ಷತ್ರ, ಗ್ರಹಗಳು ಹಾಗೂ ಇಡೀ ಸೌರ ಮಂಡಲವನ್ನೇ ಅತ್ಯಂತ ಹತ್ತಿರದಿಂದ ನೋಡಬಹುದು.
4. Do A Barrel Roll - ಗೊಗಲ್ ಅನ್ನು ನೀವು ಬ್ಯಾರೆಲ್ ಹಾಗೂ ನೀರಿನ ಟ್ಯಾಂಕ್ ರೀತಿಯಲ್ಲಿ ಉರುಳಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಗೂಗಲ್ ಸರ್ಚ್ ನಲ್ಲಿ ನೀವು 'Do A Barrel Roll' ಹುಡುಕಾಟ ನಡೆಸಿದರೆ, ನಿಮ್ಮ ಪುಟ ಎರಡು ಬಾರಿ ಸ್ವಯಂಚಾಲಿತವಾಗಿ ಎರಡು ಬಾರಿ ಉರುಳಲಿದೆ. ಅದನ್ನು ನೋಡಿ ನಿಮ್ಮ ತಲೆಯೂ ಸುತ್ತುವುದು ಗ್ಯಾರಂಟಿ ಎಚ್ಚರ!
5. Play Tic Tac Toe - ಕೆಲಸ ಮಾಡಿ ನೀವೂ ಕೂಡ ಬೋರಾಗಿದ್ದರೆ, ಮೈಂಡ್ ಫ್ರೆಶ್ ಮಾಡಿಕೊಳ್ಳಲು ಒಂದು ಆಟವಾಡೋಣ. ಇದಕ್ಕಾಗಿ ನೀವು ಗೂಗಲ್ ನ ಹೋಂ ಪೇಜ್ ನಲ್ಲಿ Play Tic Tac Toe ಟೈಪ್ ಮಾಡಿ. ಈಗ ನಿಮ್ಮ ಕಣ್ಣ ಮುಂದೆ ಹಸಿರು ಬಣ್ಣದ ಸ್ಕ್ರೀನ್ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ನೀವು ಗೂಗಲ್ ಜೊತೆಗೆ ಆಟವಾಡಬಹುದು.
6. elgooG - ಇದಲ್ಲದೆ, ಗೂಗಲ್ ನಲ್ಲಿ ನೀವು ಗೂಗಲ್ ಕೀಪರ್ ಅಟಾರಿ ಬ್ರೇಕ್ ಔಟ್ ಆಟವಾಡಬಹುದು. ಈ ಆಟದಲ್ಲಿ ಸಂಪೂರ್ಣ ಗೂಗಲ್ ಪುಟವನ್ನು ಬ್ಲಾಕ್ ಗಳಲ್ಲಿ ಪರಿವರ್ತಿಸಲಾಗುತ್ತದೆ.
7. Askew - ಮತ್ತೊಂದು ಸ್ವಾರಸ್ಯಕರ ತಿರಿಕ್ ನೋಡಲು ನೀವು ಗೂಗಲ್ ನಲ್ಲಿ Askew ಬರೆದು ನೋಡಬಹುದು. ಅದರ ರಿಸಲ್ಟ್ ಅನ್ನು ಕೂಡ ನೀವು ನೋಡಬಹುದು ಮತ್ತು ಅದು ನಿಮಗೆ ಡೊಂಕಾದ ರೀತಿಯಲ್ಲಿ ಕಂಗೊಳಿಸಲಿದೆ.
8. Animals Sounds - ಒಂದು ವೇಳೆ ನೀವು ನಿಮ್ಮ ಮಗುವಿಗೆ ಪ್ರಾಣಿಗಳು ಮತ್ತು ಅವುಗಳ ಧ್ವನಿಗಳ ಬಗ್ಗೆ ಮಾಹಿತಿಯನ್ನು ನೀಡಲು ಬಯಸುತ್ತಿದ್ದರೆ, ಗೂಗಲ್ ನಿಮ್ಮ ಕೆಲಸ ಸುಲಭವಾಗಿಸುತ್ತದೆ. ಇದಕ್ಕಾಗಿ ಕೇವಲ ಗೂಗಲ್ ಸರ್ಚ್ ನಲ್ಲಿ Animals Sounds ಬರೆದು ಹುಡುಕಾಟ ನಡೆಸಿ.
9. Google Underwater - ಗೂಗಲ್ ಈಜಾಡುವುದನ್ನು ನೀವು ನೋಡಲು ಬಯಸುತ್ತಿದ್ದರೆ, ಈ ಅದ್ಭುತ ಟ್ರಿಕ್ ಬಳಸಿ ನೀವು ಅದನ್ನು ನೋಡಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಗೂಗಲ್ ಮುಖಪುಟದಲ್ಲಿ Google Underwater ಟೈಪ್ ಮಾಡಬೇಕು.
10. Google in 1998 - ನೀವು ಇತಿಹಾಸದತ್ತ ಮುಖಮಾಡಲು ಬಯಸುತಿದ್ದರೆ, ಆರಂಭಿಕ ದಿನಗಳಲ್ಲಿ ಗೂಗಲ್ ಹೇಗೆ ಕಾಣಿಸುತ್ತಿತ್ತು ನೋಡಲು ನೀವು 'Google in 1998' ಬರೆದು ಸರ್ಚ್ ಮಾಡಬಹುದು.