ನವದೆಹಲಿ: ದೇಶದ ಗಮನ ಸೆಳೆದಿದ್ದ ಪ್ರತಿಷ್ಠಿತ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡ ವಿದ್ಯಾರ್ಥಿ ಒಕ್ಕೂಟ ಎಲ್ಲ ಪ್ರಮುಖ ಖಾತೆಗಳನ್ನು ವಶಪಡಿಸಿಕೊಂಡಿದೆ.ಇನ್ನೊಂದೆಡೆಗೆ ಗೆಲುವಿನ ನಿರೀಕ್ಷೆಯನ್ನಿಟ್ಟುಕೊಂಡಿದ್ದ ಬಲಪಂಥೀಯ ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಭಾರಿ ಮುಖಭಂಗ ಉಂಟಾಗಿದೆ.
ನಿನ್ನೆಯಷ್ಟೇ ಮತ ಎಣಿಕೆ ಸಂದರ್ಭದಲ್ಲಿ ದಾಂದಲೆ ಮಾಡಿದ್ದ ಎಬಿವಿಪಿಗೆ ಇಂದಿನ ಫಲಿತಾಂಶ ನಿಜಕ್ಕೂ ನಿರಾಶೆ ಉಂಟು ಮಾಡಿದೆ. ಜೆಎನ್ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆರ್ಜೆಡಿ, ಎಡ ವಿದ್ಯಾರ್ಥಿ ಒಕ್ಕೂಟ, ಬಾಪ್ಸಾ, ಎನ್ಎಸ್ಯುಐ, ಮತ್ತು ಎಬಿವಿಬಿ ಸಂಘಟನೆಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು.
#JNUSUElection2018: United Left Alliance sweeps the election; N Sai Balaji elected as the President, Sarika Chaudhary as the Vice President, Aejaz Ahmed Rather as the General Secretary and Amutha Jayadeep as the Joint Secretary. pic.twitter.com/YxeicXkxv2
— ANI (@ANI) September 16, 2018
ಕೇಂದ್ರ ಸಮಿತಿ (5185 ಮತಗಳ ಎಣಿಕೆಯ ನಂತರ)
ಅಧ್ಯಕ್ಷರು:
ಲಲಿತ್ (ಎಬಿವಿಪಿ) -982
ಎನ್ ಬಾಲಾಜಿ (ಎಡ) - 2167
1185 ಮತಗಳಿಂದ ಎಡ ವಿದ್ಯಾರ್ಥಿ ಒಕ್ಕೂಟಕ್ಕೆ ಜಯ
ಉಪಾಧ್ಯಕ್ಷ:
ಗೀತಾ (ಎಬಿವಿಪಿ) - 1012
ಸಾರಿಕಾ (ಎಡ) - 2692
1680 ಮತಗಳಿಂದ ಎಡ ವಿದ್ಯಾರ್ಥಿ ಒಕ್ಕೂಟಕ್ಕೆ ಜಯ
ಪ್ರಧಾನ ಕಾರ್ಯದರ್ಶಿ:
ಏಜಜ್ (ಎಡ) - 2423
ಗಣೇಶ್ (ಎಬಿವಿಪಿ) - 1123
1300 ಮತಗಳಿಂದ ಎಡ ವಿದ್ಯಾರ್ಥಿ ಒಕ್ಕೂಟಕ್ಕೆ ಜಯ
ಜಂಟಿ ಕಾರ್ಯದರ್ಶಿ:
ಅಮುತ (ಎಡ) -1839
ವೆಂಕಟ್ (ಎಬಿವಿಪಿ) -1116
723 ಮತಗಳಿಂದ ಎಡ ವಿದ್ಯಾರ್ಥಿ ಒಕ್ಕೂಟಕ್ಕೆ ಜಯ