Niveditha Gowda : ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್‌ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ಫುಲ್ ಜಾಲಿ ಮೂಡ್‌ನಲ್ಲಿದ್ದಾರೆ. ಡಿವೋರ್ಸ್ ನಂತರ ಕ್ರೇಜಿ ಕ್ವೀನ್ ಆಗಿರುವ ಕ್ಯೂಟ್ ಬೆಡಗಿ ಗ್ಲಾಮರ್ ಶೋ ಮೂಲಕ ನೆಟ್ಟಿಗರ ಮನಗೆಲ್ಲುತ್ತಿದ್ದಾಳೆ.. ಇತ್ತೀಚಿಗೆ ಈ ಚೆಲುವೆ ಹಂಚಿಕೊಂಡ ಫೊಟೋಸ್ ಸಖತ್ ವೈರಲ್ ಆಗುತ್ತಿವೆ..
ನಿವೇದಿತಾ ಗೌಡ.. ಸಖತ್ ಕೂಲ್ ಮೂಡ್‌ನಲ್ಲಿದ್ದಾರೆ.. ಜಾಲಿಯಾಗಿ ರೀಲ್ಸ್ ಮಾಡಿಕೊಂಡು ಲೈಫ್ ಎಂಜಾಯ್ ಮಾಡುತ್ತಿದ್ದಾರೆ.. ಈ ಕುರಿತು ಕೆಲವೊಂದಿಷ್ಟು ಫೊಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ..
ಇತ್ತೀಚಿಗೆ ನಿವಿ ಹಂಚಿಕೊಂಡಿರುವ ಫೋಟೋಗಳು ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿವೆ.. ಚಿತ್ರಗಳಲ್ಲಿ ಚೆಲುವೆ ದಂತದ ಗೊಂಬೆಯಂತೆ ಕಾಣುತ್ತಿದ್ದಾಳೆ..
ವಿಚ್ಛೇದನದ ಬಳಿಕ ನಿವೇದಿತಾ ಗೌಡ ಸಕತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಳಕುವ ಬಳ್ಳಿಯಂತಿರೋ ಚೆಲುವೆಯ ಸೊಬಗು ನೆಟ್ಟಿಗರು ನಿದ್ದೆ ಕದಿಯುತ್ತಿದೆ..
ಪ್ರತಿಬಾರಿಯೂ ಕೆಟ್ಟ ಕಮೆಂಟ್ಸ್ಗಳ ಸುರಿಮಳೆಯೇ ಆಗುತ್ತಿದ್ದರೂ ತಲೆ ಕೆಡಿಸಿಕೊಳ್ಳದ ನಿವೇದಿತಾ ತಮ್ಮ ಜೀವನವನ್ನು ತಾವು ಸಖತ್ ಎಂಜಾಯ್ ಮಾಡುತ್ತಿದ್ದಾರೆ..
ಡೋಂಡ್ ಕೇರ್ ಅಂತ.. ಗ್ಲಾಮರ್ ಡೋಸ್ ಹೆಚ್ಚಿಸಿರುವ ಬ್ಯೂಟಿ ಕ್ಯೂಟ್ ನೋಟ ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ..
ಸದಾ ಟ್ರೋಲ್ ಆಗುತ್ತಿರುವ ನಿವೇದಿತಾ ಈ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ.. ಕಳೆದ ಕೆಲವು ದಿನಗಳ ಹಿಂದೆ ಬೀಚ್ ಫೋಟೋಸ್ ಹಂಚಿಕೊಂಡು ವೈರಲ್ ಆಗಿದ್ದರು..
ಇನ್ನು ನಿವೇದಿತಾ ಫೋಟೋಸ್‌ಗೆ ಹಲವರು ಹಾರ್ಟ್ ಇಮೋಜಿ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.. ಕೆಲವರು ಪೂನಂ ಪಾಂಡೆಗೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ..
ಸಧ್ಯ ಕೆಂಪು ಬಟ್ಟೆಯಲ್ಲಿ ಮಿಂಚಿರುವ ನಿವೇದಿತಾ ಫೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.. ಟ್ರೋಲ್‌ಗೂ ಸಹ ಗುರಿಯಾಗುತ್ತಿವೆ..