ಬೆಂಗಳೂರು : ತಮ್ಮ ಅದ್ಭುತ ಕಂಠಸಿರಿಯಿಂದ ಕನ್ನಡಿಗರಿಗೆ ಮತ್ತು ಇಡೀ ದಕ್ಷಿಣ ಭಾರತದ ಸಂಗೀತ ರಸಿಕರಿಗೆ ಅವಿಸ್ಮರಣೀಯ ಗೀತೆಗಳನ್ನು ಕೊಟ್ಟ ಅಮರ ಗಾಯಕರಾದ ಶ್ರೀ ಪಿ.ಬಿ.ಶ್ರೀನಿವಾಸ್ ಅವರಿಗೆ ಇಂದು ಜನ್ಮದಿನ. ಕರುನಾಡಿನ ಜನ ಮಾನಸದಲ್ಲಿ ಅಚ್ಚಳಿಯದ ಹಾಡುಗಳನ್ನು ನೀಡಿದ ಅಮರಗಾಯಕರನ್ನ ಅವರ ಹುಟ್ಟು ಹಬ್ಬದಂದು ನೆನೆಯೋಣ.
1930ರ ಸೆ.22ರಂದು ಆಂಧಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಪಿಬಿಎಸ್ ಜನಿಸಿದರು. ʼಪ್ರತಿವಾದಿ ಭಯಂಕರಂʼ ಕುಟುಂಬದಲ್ಲಿ ಹುಟ್ಟಿದ ಶ್ರೀನಿವಾಸ್ ಅವರು ಇಂದು ಬದುಕಿದ್ದರೆ ಅವರಿಗೆ 92 ವರ್ಷ ತುಂಬುತ್ತಿತ್ತು. ಆದರೆ ಅವರಿಂದು ಭೌತಿಕವಾಗಿ ಇಲ್ಲದಿದ್ದರೂ ಸಂಗೀತ ಪ್ರಿಯರ ಮನಸ್ಸಿನಲ್ಲಿ ಸದಾ ನೆಲೆಸಿರುತ್ತಾರೆ. ತಮ್ಮ 22ನೇ ವಯಸ್ಸಿಗೆ ಹಿಂದಿ ಸಿನಿಮಾದಲ್ಲಿ ಹಾಡುವ ಮೂಲಕ ಸಿನಿರಂಗಕ್ಕೆ ಪಿಬಿಎಸ್ ಅವರು ಕಾಲಿಟ್ಟರು. ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಹಾಡು ಹಾಡಿದರೂ ಸಹ ಅವರು ಹೆಚ್ಚು ಜನಪ್ರಿಯರಾಗಿದ್ದು ಕರ್ನಾಟಕದಲ್ಲಿ ಅನ್ನೋದು ವಿಶೇಷ.
ಇದನ್ನೂ ಓದಿ: #VikranthronaZEE5Contest: ವಿಕ್ರಾಂತ್ ರೋಣ ರಾ..ರಾ..ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದವರಿಗೆ ಸಿಕ್ತು 25,000ರೂ. ಬಹುಮಾನ
ಇನ್ನು ಕರುನಾಡಿನಲ್ಲಿ ಮನೆ ಮನಗಳಲ್ಲಿ ಪ್ರತಿಧ್ವನಿಸಿದ ಕಂಟ ಶ್ರೀನಿವಾಸ್ ಅವರದ್ದು, ಹಳ್ಳಿಗಳಲ್ಲಿ ಮುಂಜಾನೆ ಎದ್ದು ಗುಡಿ ಗೋಪುರದಲ್ಲಿ ʼಎದ್ದೇಳು ಮಂಜುನಾಥʼ ಸೇರಿದಂತೆ ಹಲವಾರು ಇವರ ಹಾಡುಗಳು ಕೇಳಿಬರುತ್ತಿದ್ದವು. ಅಂದಿನ ಜನ ಜೀವನದಲ್ಲಿ ಇವರ ಹಾಡುಗಳಲು ಭಾಗವಾಗಿದ್ದವು. ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಸಿನಿಮಾದ ಹಾಡುಗಳಿಗೆ ಪಿಬಿಎಸ್ ಧ್ವನಿಯಾಗಿದ್ದರು. ಪಿ.ಬಿ.ಎಸ್ ಅವರಿಗೆ ಲತಾ ಮಂಗೇಶ್ಕರ್ ಅವರ ಹಾಡುಗಳು ಎಂದರೆ ಪಂಚಪ್ರಾಣ. ಪಿ.ಬಿ. ಶ್ರೀನಿವಾಸ್ ಅವರ ತಾಯಿ ಶೇಷಗಿರಿಯಮ್ಮ ತುಂಬಾ ಸುಮಧುರವಾಗಿ ಹಾಡುತ್ತಿದ್ದರು. ಗಾಯಕರಾಗಲು ಅವರಿಗೆ ತಾಯಿಯದೇ ಪ್ರೇರಣೆ.
ಇನ್ನು ಪಿಬಿಎಸ್ ಅವರ ಧ್ವನಿಯಲ್ಲಿ ಮೂಡಿಬಂದ ಅನೇಕ ಹಾಡುಗಳಲ್ಲಿ ಬಾರೇ ಬಾರೇ ಚಂದದ ಚೆಲುವಿನ ತಾರೆ, ನಗುನಗುತಾ ನಲೀ ನಲೀ ಎನೇ ಆಗಲಿ, ಪಂಚಮ ವೇದ ಪ್ರೇಮದ ನಾದ, ಆಡಿಸಿ ನೋಡು ಬೀಳಿಸಿ ನೋಡು ಹಾಡಂತು ಅದ್ಭುತ, ತನ್ನಂ ತನ್ನಂ ಮನಸು ನುಡಿಯುತಿದೆ ಎಂಬ ಹಾಡಿನ ಮೂಲಕ ಅಂದಿನ ಕಾಲದ ಯುವ ಪೀಳಿಗೆಗೆ ಪ್ರೀತಿ ಪಾಠ ಮಾಡಿದ್ದರು. ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲದೆ, ಗಾಳಿಯ ಪಟದಂತೆ ಎನ್ನುವ ಹಾಡು ಕೃಷ್ಣನ ಲೀಲೆಯನ್ನು ಕಣ್ಣ ಮುಂದೆ ತಂದಿದೆ. ಹೀಗೆ ಇನ್ನೂ ನೂರಾರು ಹಾಡುಗಳ ಅವರನ್ನು ಕನ್ನಡಿಗರ ಮನದ ಸಾಮ್ರಾಜ್ಯದಲ್ಲಿ ಸದಾ ನೆಲೆಸಿರುವುಂತೆ ಮಾಡಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.