ಯಾವ ಬಿ-ಟೌನ್ ಜೋಡಿಗಳು ತಮ್ಮ ಮೊದಲ ಕರ್ವಾ ಚೌತ್ ಆಚರಿಸಲಿದ್ದಾರೆ ನೋಡೋಣ.
ಬೆಂಗಳೂರು : ಇಂದು ಕರ್ವಾ ಚೌತ್ ಹಬ್ಬ. ಇದು ಪತಿ-ಪತ್ನಿಯರ ನಡುವಿನ ಪವಿತ್ರ ಬಾಂಧವ್ಯವನ್ನು ತೋರಿಸುವ ಹಬ್ಬವಾಗಿದೆ. ಅನೇಕ ಬಾಲಿವುಡ್ ಜೋಡಿಗಳು ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಅವರ ಪಾಲಿಗೆ ಮೊದಲ ಕರ್ವಾ ಚೌತ್ . ಹಾಗಾದರೆ ಯಾವ ಬಿ-ಟೌನ್ ಜೋಡಿಗಳು ತಮ್ಮ ಮೊದಲ ಕರ್ವಾ ಚೌತ್ ಆಚರಿಸಲಿದ್ದಾರೆ ನೋಡೋಣ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿಗಳು 9 ಡಿಸೆಂಬರ್ 2021 ರಂದು ರಾಜಸ್ಥಾನದಲ್ಲಿ ವಿವಾಹವಾದರು. ಈ ವರ್ಷ ಇದು ಅವರ ಮೊದಲ ಕರ್ವಾ ಚೌತ್ ಆಗಿರುತ್ತದೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಾಲಿವುಡ್‌ನ ಅತ್ಯಂತ ಮುದ್ದಾದ ಜೋಡಿಗಳಲ್ಲಿ ಒಂದು . ಇವರು 14 ಏಪ್ರಿಲ್ 2022 ರಂದು ಸಪ್ತಪದಿ ತುಳಿದಿದ್ದಾರೆ. ಇದು ಅವರಿಗೂ ಅವರ ಮೊದಲ ಕರ್ವಾ ಚೌತ್ .
ನಾಗಿನ್ ಧಾರಾವಾಹಿ ಮೂಲಕ ಪ್ರಸಿದ್ಧರಾದ ಮೌನಿ ರಾಯ್ ಅವರು ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಜನವರಿ 27 2022 ರಂದು ವಿವಾಹವಾದರು. ಈ ಜೋಡಿ ಕೂಡಾ ಇಂದು ಮೊದಲ ಬಾರಿಗೆ ಕರ್ವಾ ಚೌತ್ ಆಚರಿಸುತ್ತಿದೆ.
ಪವಿತ್ರಾ ರಿಶ್ತಾ ಖ್ಯಾತಿಯ ಅಂಕಿತಾ ಲೋಖಂಡೆ ಮತ್ತು ಅವರ ದೀರ್ಘಕಾಲದ ಗೆಳೆಯ ವಿಕ್ಕಿ ಜೈನ್ ಅವರನ್ನು 14 ಡಿಸೆಂಬರ್ 2021 ರಂದು ವಿವಾಹವಾದರು. ಮುಂಬೈನ ಗ್ರ್ಯಾಂಡ್ ಹಯಾತ್‌ನಲ್ಲಿ ಇವರಿಬ್ಬರ ಮದುವೆ ನೆರವೇರಿತ್ತು. . ಈ ವರ್ಷ ಇದು ಅವರ ಮೊದಲ ಕರ್ವಾ ಚೌತ್ ಆಗಿದೆ.
ಖತ್ರೋನ್ ಕೆ ಖಿಲಾಡಿ 10 ರ ವಿಜೇತೆ ಕರಿಷ್ಮಾ ತನ್ನಾ, ಫೆಬ್ರವರಿ 5, 2022 ರಂದು ಉದ್ಯಮಿ ವರುಣ್ ಬಂಗ್ರಾ ಅವರನ್ನು ಮದುವೆಯಾಗಿದ್ದಾರೆ. ಈ ವರ್ಷ ತಮ್ಮ ಮೊದಲ ಕರ್ವಾ ಚೌತ್ ಆಚರಿಸಲಿದ್ದಾರೆ.