ಎಲ್.ಜಿ ಕಂಪನಿಯಿಂದ ಟಿ.ವಿ. ಖರೀದಿಸಿ ಮೋಸ ಹೋದ ವ್ಯಕ್ತಿಗೆ ನ್ಯಾಯ ಕೊಡಿಸಿದ ಗ್ರಾಹಕರ ಆಯೋಗ

ಹುಬ್ಬಳ್ಳಿ ನೆಹರು ನಗರದ ನಿವಾಸಿ ಶ್ರೀರಾಮ ಶ್ರೀನಿವಾಸ ಅನ್ನುವವರಿಗೆ 2,80,990/- ಮೌಲ್ಯದ ಎಲ್.ಜಿ. ಕಂಪನಿಯ ಟಿ.ವಿ.ಯನ್ನು ಏರಪೋರ್ಟ್ ರಸ್ತೆಯ ರಿಲಾಯನ್ಸ್ ಡಿಜಿಟಲ್ ಶೋ ರೂಮ್‍ನವರು ಸುಮಾರು 91,000/- ರೂಪಾಯಿಗೆ ಕಡಿಮೆ ಮಾಡಿ 1,89,818/- ರೂಪಾಯಿಗೆ ಮಾರಿದ್ದರು.

Written by - Zee Kannada News Desk | Last Updated : Oct 16, 2022, 12:14 AM IST
  • ತನಗಾದ ತೊಂದರೆಗೆ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ಕೊಡಿಸುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
  • ಸೇವಾ ನ್ಯೂನ್ಯತೆಯಿಂದ ಫಿರ್ಯಾದಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.25,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡಲು ಆದೇಶಿಸಿದ್ದಾರೆ.
 ಎಲ್.ಜಿ ಕಂಪನಿಯಿಂದ ಟಿ.ವಿ. ಖರೀದಿಸಿ ಮೋಸ ಹೋದ ವ್ಯಕ್ತಿಗೆ ನ್ಯಾಯ ಕೊಡಿಸಿದ ಗ್ರಾಹಕರ ಆಯೋಗ  title=

ಧಾರವಾಡ ಅ.15: ಹುಬ್ಬಳ್ಳಿ ನೆಹರು ನಗರದ ನಿವಾಸಿ ಶ್ರೀರಾಮ ಶ್ರೀನಿವಾಸ ಅನ್ನುವವರಿಗೆ 2,80,990/- ಮೌಲ್ಯದ ಎಲ್.ಜಿ. ಕಂಪನಿಯ ಟಿ.ವಿ.ಯನ್ನು ಏರಪೋರ್ಟ್ ರಸ್ತೆಯ ರಿಲಾಯನ್ಸ್ ಡಿಜಿಟಲ್ ಶೋ ರೂಮ್‍ನವರು ಸುಮಾರು 91,000/- ರೂಪಾಯಿಗೆ ಕಡಿಮೆ ಮಾಡಿ 1,89,818/- ರೂಪಾಯಿಗೆ ಮಾರಿದ್ದರು.

ಇದನ್ನೂ ಓದಿ : “ಬಿಜೆಪಿ ನಾಯಕರು ಇತರೆ ಭಾಷೆಗಳನ್ನು ಹತ್ತಿಕ್ಕಲು ಹೊರಟಿದ್ದಾರೆ”

ಸದರಿ ಟಿ.ವಿಯನ್ನು ಗ್ರಾಹಕನ ಮನೆಯಲ್ಲಿ ಅಳವಡಿಸುವ ಮೊದಲೇ ದೋಷ ಕಂಡು ಬಂದಿದ್ದರಿಂದ ಅವರ ದೂರಿನ ಮೇಲೆ ಟಿ.ವಿ. ಕಂಪನಿಯವರು 2 ಬಾರಿ ಟಿ.ವಿ ಬದಲಾವಣೆ ಮಾಡಿದಾಗ ಅವುಗಳಲ್ಲಿ ದೋಷ ಕಂಡು ಬಂದುದ್ದರಿಂದ ದೂರುದಾರರ ದೂರಿನ ಮೇಲೆ ಟಿ.ವಿ. ಕಂಪನಿಯವರು 3ನೇ ಟಿ.ವಿ ಅಳವಡಿಸಿದ್ದರು. ಅದೂ ಸಹ 5-6 ತಿಂಗಳಲ್ಲಿ ದೋಷ ಉಂಟಾಗಿ ಸ್ಥಗಿತಗೊಂಡಿದ್ದರಿಂದ ಆ ಟಿ.ವಿ.ಗಳಲ್ಲಿ ಪದೇ ಪದೇ ದೋಷ ಕಂಡುಬಂದಿರುವುದರಿಂದ ಟಿ.ವಿ. ತಯಾರಕರು ದೋಷ ಪೂರಿತ ಟಿ.ವಿ.ಯನ್ನು ತಯಾರಿಸಿ ಶೋ ರೂಮ್‍ನವರ ಜೊತೆ ಶಾಮೀಲಾಗಿ ಬ್ರ್ಯಾಂಡ್ ನೇಮ್ ಉಪಯೋಗಿಸಿಕೊಂಡು ಕಳಪೆ ಟಿ.ವಿ. ಮಾರುತ್ತಿದ್ದು ಅದರಿಂದ ತನಗೆ ಸೇವಾ ನ್ಯೂನ್ಯತೆ ಹಾಗೂ ಮೋಸವಾಗಿದೆ ಅಂತಾ ಹೇಳಿ ಆ ಟಿ.ವಿ.ಯ ಮೌಲ್ಯದ ಜೊತೆಗೆ ತನಗಾದ ತೊಂದರೆಗೆ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ಕೊಡಿಸುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ : PM Kisan Update: ಸ್ಥಗಿತಗೊಳ್ಳಲಿದೆಯಾ ಪಿಎಂ ಕಿಸಾನ್ ಯೋಜನೆ? ಸರ್ಕಾರ ಹೇಳಿದ್ದೇನು?

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ ಹಾಗೂ ಸದಸ್ಯರಾದ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು, ಟಿ.ವಿ. ಅಳವಡಿಸುವ ಪೂರ್ವದಲ್ಲೇ ದೋಷಪೂರಿತವಾಗಿರುವುದರಿಂದ ಮತ್ತು 3ನೇ ಟಿ.ವಿ. ಕೇವಲ 5-6 ತಿಂಗಳಲ್ಲಿ ದೋಷ ಕಂಡುಬಂದಿರುವುದರಿಂದ ಟಿ.ವಿ. ಕಂಪನಿಯವರು ಶೋ ರೂಮ್‍ನವರ ಜೊತೆ ಶಾಮೀಲಾಗಿ ದೋಷ ಪೂರಿತ ಟಿ.ವಿ.ಗಳನ್ನು ತಯಾರಿಸಿ ಗ್ರಾಹಕರಿಗೆ ಮಾರುತ್ತಿದ್ದಾರೆ ಅನ್ನುವ ದೂರುದಾರನ ವಾದವನ್ನು ಎತ್ತಿಹಿಡಿದು ತೀರ್ಪು ನೀಡಿದ್ದಾರೆ.

ಇದನ್ನೂ ಓದಿ : ನೋರಾ ಹಾಟ್‌ ಡಾನ್ಸ್‌ ನೋಡಿ ʼವಿ ವಾಂಟ್‌ ಮೋರ್‌ʼ ಎಂದ ಫ್ಯಾನ್ಸ್‌..!

ಆದ್ದರಿಂದ ದೂರುದಾರನಾದ ಗ್ರಾಹಕನಿಗೆ ಟಿ.ವಿ. ಕಂಪನಿಯವರಿಂದ ಸೇವಾ ನ್ಯೂನ್ಯತೆಯಾಗಿ ಅವನಿಗೆ ಮೋಸವಾಗಿದೆ ಅಂತಾ ತೀರ್ಪಿನಲ್ಲಿ ಅಭಿಪ್ರಾಯಪಟ್ಟು ಅದಕ್ಕಾಗಿ ಟಿ.ವಿ. ಕಂಪನಿಯವರು ಟಿ.ವಿ.ಯ ಮೌಲ್ಯ 1,89,818.92 ಪೈಸೆ. ಹಾಗೂ ಸೇವಾ ನ್ಯೂನ್ಯತೆಯಿಂದ ಫಿರ್ಯಾದಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.25,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡಲು ಆದೇಶಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

Trending News